More

    ಶಿಲ್ಪಾನಾಗ್​ ರಾಜೀನಾಮೆಗೆ ಅಸಲಿ ಕಾರಣವೇನು? ರಾಜೀನಾಮೆಗೆ ಒಂದು ದಿನ ಮೊದಲೇ ಬಂದಿತ್ತು ನೋಟಿಸ್​!

    ಮೈಸೂರು: ಮೈಸೂರು ಜಿಲ್ಲಾಡಳಿತದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್​ ಇದ್ದಕ್ಕಿದ್ದಂತೆ ರಾಜೀನಾಮೆ ಸಲ್ಲಿಸಿದ್ದು, ರಾಜ್ಯದಲ್ಲಿ ಭಾರೀ ಸಂಚಲನ ಕಾರಣವಾಗಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯ ನಿರಂತರ ಕಿರುಕುಳ ತಾಳಲಾರದೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ರಾಜೀನಾಮೆಗೂ ಒಂದು ದಿನ ಮೊದಲು ಜಿಲ್ಲಾಡಳಿತದಿಂದ ಶಿಲ್ಪಾನಾಗ್​ಗೆ ಒಂದು ನೋಟಿಸ್​ ಕಳುಹಿಸಿಕೊಡಲಾಗಿರುವುದು ಇದೀಗ ಬೆಳಕಿಗೆ ಬಂದಿದೆ.

    ಶಿಲ್ಪಾನಾಗ್​ ಅವರೇ, ನೀವು ಮೈಸೂರು ನಗರದಲ್ಲಿ C0VID-19 ಸಕ್ರಿಯ ಪ್ರಕರಣಗಳು ಕಡಿಮೆ ಎಂದು ಮಾಧ್ಯಮದವರ ಎದುರು ಹೇಳಿದ್ದೀರಿ. ಅದು ಪತ್ರಿಕೆಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಸತ್ಯಗಳಿಗೆ ವಿರುದ್ಧವಾಗಿದೆ ಏಕೆಂದರೆ ಮೈಸೂರು ನಗರದಲ್ಲಿ ಸುಮಾರು 8535 ಸಕ್ರಿಯ ಪ್ರಕರಣಗಳು ಮತ್ತು ಗ್ರಾಮೀಣ / ತಾಲ್ಲೂಕುಗಳಲ್ಲಿ ಸುಮಾರು 6550 ಸಕ್ರಿಯ ಪ್ರಕರಣಗಳಿವೆ.

    ಇದಲ್ಲದೆ, ಇತರ ಪತ್ರಿಕಾ ವರದಿಯು ನೀವು ಜಿಲ್ಲೆಯನ್ನು ದೂಷಿಸಿದ್ದೀರಿ ಎಂದು ತಿಳಿಸುತ್ತದೆ. ಕೋವಿಡ್ ಕೇರ್ ಕೇಂದ್ರಗಳನ್ನು ಸರ್ಕಾರದ ಕಡೆಯಿಂದ ತೆರೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿದ್ದೀರಿ. ಕಳೆದ 15 ದಿನಗಳಿಂದ ಮನವಿ ಮಾಡಿದರೂ ಆಡಳಿತದಿಂದ ಕೋವಿಡ್​ ಕೇರ್​ ಕೇಂದ್ರ ತೆರೆಯಲು ಆಗುತ್ತಿಲ್ಲ, ಇದರಿಂದಾಗಿ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ ಎಂದಿದ್ದೀರಿ. ಹಾಗೂ ಕೇವಲ ಒಂದೇ ಕೋವಿಡ್​ ಕೇಂದ್ರ ಇರುವುದಾಗಿ ಹೇಳಿದ್ದೀರಿ. ಆದರೆ ಆ ವೇಳೆಗೆ ನಮ್ಮಲ್ಲಿ 15 ಕೋವಿಡ್​ ಕೇಂದ್ರಗಳು ಇದ್ದವು.

    ಈ ಎಲ್ಲ ಕಾರಣದಿಂದಾಗಿ ನೀವು ಮಾಧ್ಯಮದ ಮುಂದೆ ಮತ್ತು ಅಧಿಕೃತ ಸಭೆಗಳಲ್ಲಿ ನಿರ್ದಿಷ್ಟವಾಗಿ, ವಾಸ್ತವಿಕಕವಾಗಿ ಮಾತನಾಡಲು ನಿರ್ದೇಶನ ನೀಡಲಾಗಿದೆ. ನಿಮ್ಮ ತಪ್ಪಾದ ಹೇಳಿಕೆಗಳ ಬಗ್ಗೆ ವಿವರಣೆಯನ್ನು ಇನ್ನು ಎರಡು ದಿನಗಳಲ್ಲಿ ಲಿಖಿತವಾಗಿ ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಶಿಲ್ಪಾನಾಗ್​ಗೆ ನೋಟಿಸ್​ ನೀಡಿತ್ತು.

    ನೋಟಿಸ್​ ಜತೆ ಶಿಲ್ಪಾನಾಗ್​ ಅವರ ಹೇಳಿಕೆಗಳನ್ನು ಮುದ್ರಿಸಿರುವ ಎರಡು ಪತ್ರಿಕಾ ವರದಿಯನ್ನೂ ಲಗತ್ತಿಸಲಾಗಿದೆ. ನೋಟಿಸ್​ ಜಾರಿಯಾದ ಒಂದೇ ದಿನದಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

    ರೋಹಿಣಿ ಸಿಂಧೂರಿ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ… ಎಳೆಎಳೆಯಾಗಿ ಬಿಚ್ಚಿಟ್ಟ ಶಿಲ್ಪಾನಾಗ್​

    ಸೋಂಕಿತರ ಮನೆ ಮುಂದಿ ಮಂಡಿಯೂರಿ, ಕೈಮುಗಿದು ಕುಳಿತ ಅಧಿಕಾರಿಗಳು! ಅಷ್ಟಕ್ಕೂ ಆಗಿದ್ದೇನು?

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಮದುವೆಯಾಗಿ ಒಂದೂವರೆ ತಿಂಗಳಲ್ಲಿ ಯೂಟ್ಯೂಬರ್​ ಪತ್ನಿ ಆತ್ಮಹತ್ಯೆ! ಹಿಂಸೆ ಕೊಟ್ಟ ಗಂಡ ಪೊಲೀಸರ ಅತಿಥಿಯಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts