More

    ಸೋಂಕಿತರ ಮನೆ ಮುಂದಿ ಮಂಡಿಯೂರಿ, ಕೈಮುಗಿದು ಕುಳಿತ ಅಧಿಕಾರಿಗಳು! ಅಷ್ಟಕ್ಕೂ ಆಗಿದ್ದೇನು?

    ಗದಗ: ಕರೊನಾ ಸೋಂಕಿತರು ಆಸ್ಪತ್ರೆಯ ಮುಂಭಾಗಕ್ಕೆ ಬಂದು ದಯವಿಟ್ಟು ಬೆಡ್ ಕೊಡಿ ಎಂದು ಬೇಡಿರುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ಸೋಂಕಿತರ ಮನೆಯ ಎದುರು ಹೋದ ಅಧಿಕಾರಿಗಳು ಮಂಡಿಯೂರಿ ಕುಳಿತು, ಕೈ ಮುಗಿದು ಬೇಡಿಕೊಂಡಿದ್ದಾರೆ.

    ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಮೂವರು ಸದಸ್ಯರಿಗೆ ಕರೊನಾ ಸೋಂಕು ದೃಢವಾಗಿದೆ. ಸರ್ಕಾರದ ನಿಯಮದ ಪ್ರಕಾರ ಸೋಂಕಿತರನ್ನು ಮನೆಯಲ್ಲಿ ಇರಲು ಬಿಡದೆ, ಕೋವಿಡ್​ ಕೇರ್​ ಸೆಂಟರ್​ಗೆ ಕರೆದುಕೊಂಡು ಹೋಗುವುದು ಅಲ್ಲಿನ ತಾಲೂಕು ಆಡಳಿತದ ಕರ್ತವ್ಯವಾಗಿದೆ. ಅದೇ ಕಾರಣಕ್ಕೆ ಪಿಡಿಒ ಆ ಮನೆಯ ಬಾಗಿಲಿಗೆ ಹೋಗಿ ಅವರನ್ನು ಕೋವಿಡ್​ ಕೇರ್​ ಸೆಂಟರ್​ಗೆ ಬರಲು ಮನವಿ ಮಾಡಿದ್ದಾರೆ. ಆದರೆ ಅದಕ್ಕೆ ಮನೆಯ ಸದಸ್ಯರು ಒಪ್ಪಿಲ್ಲ.

    ಪಿಡಿಒ ಸತತ ಪ್ರಯತ್ನ ಪಟ್ಟರೂ ಸೋಂಕಿತರು ಒಪ್ಪದ ಹಿನ್ನೆಲೆಯಲ್ಲಿ ಆ ಮನೆಯ ಎದುರಿಗೆ ಅಧಿಕಾರಿಗಳ ದಂಡೇ ನೆರೆದಿದೆ. ಮುಂಡರಗಿ ತಹಶೀಲ್ದಾರ, ತಾಲೂಕು ಪಂಚಾಯತಿ ಈಓ, ಗ್ರಾ.ಪಂ ಅಧ್ಯಕ್ಷ, ಕಂದಾಯ ನೀರಿಕ್ಷಕ, ಪಿಡಿಓ, ನೋಡೆಲ್ ಅಧಿಕಾರಿ ಮನೆಯ ಬಾಗಿಲಿಗೆ ಬಂದಿದ್ದಾರೆ. ಪೊಲೀಸರೂ ಕೂಡ ಮನವೊಲಿಸಲು ಬಂದಿದ್ದಾರೆ. ಎಷ್ಟೆಂದರೂ ಒಪ್ಪದ ಮನೆಯವರ ಮುಂದೆ ಅಧಿಕಾರಿಗಳೆಲ್ಲರೂ ಮಂಡಿಯೂರಿ ಕುಳಿತು ಕೈ ಮುಗಿದು ಬೇಡಿಕೊಂಡಿದ್ದಾರೆ. ಸಾಕಷ್ಟು ಸಮಯ ಮನವೊಲಿಸುವ ಕೆಲಸ ಮಾಡಿದ ನಂತರ ಸೋಂಕಿತರ ಮನಸ್ಸು ಕರಗಿದ್ದು, ಇದೀಗ ಕೋವಿಡ್​ ಕೇರ್​ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಿರಿಯ ಪೋಷಕ ನಟಿ ಬಿ.ಜಯಾ ಇನ್ನಿಲ್ಲ! ಕಣ್ಣೀರ ಕಡಲಲ್ಲಿ ಚಿತ್ರರಂಗ

    ಮದುವೆಯಾಗಿ ಒಂದೂವರೆ ತಿಂಗಳಲ್ಲಿ ಯೂಟ್ಯೂಬರ್​ ಪತ್ನಿ ಆತ್ಮಹತ್ಯೆ! ಹಿಂಸೆ ಕೊಟ್ಟ ಗಂಡ ಪೊಲೀಸರ ಅತಿಥಿಯಾದ

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts