More

    ಅದಾನಿ ಪವರ್ ಷೇರುಗಳನ್ನು ಹೂಡಿಕೆದಾರರು ಮುಗಿಬಿದ್ದು ಖರೀದಿಸುತ್ತಿರುವುದೇಕೆ?: 9 ಕೋಟಿಯಿಂದ 2,738 ಕೋಟಿ ರೂಪಾಯಿ ಲಾಭ ಏರಿಕೆ

    ಮುಂಬೈ: ಭಾರತದ ಅತಿದೊಡ್ಡ ಖಾಸಗಿ ಶಾಖೋತ್ಪನ್ನ ವಿದ್ಯುತ್ ಉತ್ಪಾದಕ ಕಂಪನಿಯಾಗಿದೆ ಅದಾನಿ ಪವರ್. ಈ ಕಂಪನಿಯಷೇರುಗಳು ಸೋಮವಾರದ ವಹಿವಾಟಿನಲ್ಲಿ ಶೇ.5ರಷ್ಟು ಜಿಗಿದು ಪ್ರತಿ ಷೇರಿಗೆ 570 ರೂಪಾಯಿ ತಲುಪಿದವು.

    ಈ ಕಂಪನಿಯ ಷೇರುಗಳಲ್ಲಿನ ಈ ಏರಿಕೆಯ ಹಿಂದಿನ ಕಾರಣವೆಂದರೆ ಅತ್ಯುತ್ತಮ ತ್ರೈಮಾಸಿಕ ಫಲಿತಾಂಶಗಳು. ವಾಸ್ತವವಾಗಿ, ಕಂಪನಿಯು ಡಿಸೆಂಬರ್ ತ್ರೈಮಾಸಿಕಕ್ಕೆ ಗುರುವಾರವೇ ಬಲವಾದ ಅಂಕಿಅಂಶಗಳನ್ನು ಪ್ರಕಟಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಅದಾನಿ ಪವರ್‌ನ ಲಾಭವು ಹಲವು ಪಟ್ಟು ಹೆಚ್ಚಾಗಿದೆ. ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್ 2023) ಅದಾನಿ ಪವರ್‌ನ ನಿವ್ವಳ ಲಾಭವು 2,738 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 9 ಕೋಟಿ ರೂ.

    ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ (2023ರ ಏಪ್ರಿಲ್​ನಿಂದ ಡಿಸೆಂಬರ್​ವರೆಗೆ) ನಿವ್ವಳ ಲಾಭವು ರೂ 18,092 ಕೋಟಿಗೆ ತಲುಪಿ ಶೇಕಡಾ 230 ರಷ್ಟು ಹೆಚ್ಚಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭವು ರೂ 5,484 ಕೋಟಿ ಇತ್ತು.

    ತನ್ನ ಒಟ್ಟು ಆದಾಯವು ಡಿಸೆಂಬರ್​ ತ್ರೈಮಾಸಿಕದಲ್ಲಿ 13,355 ಕೋಟಿ ರೂ.ಗೆ ಏರಿಕೆಯಾಗಿದ್ದು, ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 8,290 ಕೋಟಿ ರೂ. ಇತ್ತು ಎಂದು ಅದಾನಿ ಪವರ್ ಪ್ರಕಟಣೆಯಲ್ಲಿ ತಿಳಿಸಿದೆ.

    “ಅದಾನಿ ಪವರ್ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿದೆ. 2023-24 ರ ಮೂರನೇ ತ್ರೈಮಾಸಿಕದಲ್ಲಿ ಅದರ ಹಣಕಾಸಿನ ಫಲಿತಾಂಶಗಳಲ್ಲಿ ಪ್ರತಿಫಲಿಸಿದಂತೆ, ಎಲ್ಲಾ ವಲಯಗಳಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದೆ.” ಎಂದು ಅದಾನಿ ಪವರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಸ್‌ಬಿ ಖಯಾಲಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಈಗಿರುವ 1,600 ಮೆಗಾ ವ್ಯಾಟ್​ ಸಾಮರ್ಥ್ಯದ ವಿದ್ಯುತ್​ ಉತ್ಪಾದನೆಯು ವಿಸ್ತರಣೆಯು ಟ್ರ್ಯಾಕ್‌ನಲ್ಲಿದೆ ಎಂದು ಅವರು ತಿಳಿಸಿದ್ದಾರೆ. “ನಾವು ಸ್ವಾಧೀನದ ಮೂಲಕ ವಿಸ್ತರಣೆಯನ್ನು ನೋಡುತ್ತಿದ್ದೇವೆ.” ಕಂಪನಿಯು ಡಿಸೆಂಬರ್ ತ್ರೈಮಾಸಿಕದಲ್ಲಿ 21.5 ಶತಕೋಟಿ ಯೂನಿಟ್ ವಿದ್ಯುತ್ ಅನ್ನು ಮಾರಾಟ ಮಾಡಿದೆ, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 11.8 ಶತಕೋಟಿ ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 946 ಕೋಟಿ ರೂ.ಗಳಿಂದ ಪ್ರಸ್ತು ಡಿಸೆಂಬರ್ ತ್ರೈಮಾಸಿಕದಲ್ಲಿ ಹಣಕಾಸು ವೆಚ್ಚವು ರೂ.797 ಕೋಟಿಗೆ ಇಳಿಕೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

    ಅದಾನಿ ಪವರ್, ಭಾರತದಲ್ಲಿ ಉಷ್ಣ ವಿದ್ಯುತ್ ಉತ್ಪಾದಿಸುವ ಅತಿದೊಡ್ಡ ಖಾಸಗಿ ವಲಯದ ಕಂಪನಿಯಾಗಿದೆ. ಈ ಕಂಪನಿಯು ಗುಜರಾತ್​, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ 15,210 ಮೆಗಾ ವ್ಯಾಟ್ ಉಷ್ಣ ವಿದ್ಯುತ್ ಸಾಮರ್ಥ್ಯವನ್ನು ಸ್ಥಾಪಿಸಿದೆ. ಕಂಪನಿಯು ಗುಜರಾತ್‌ನಲ್ಲಿ 40 MW ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದೆ. ಅದಾನಿ ಪವರ್‌ನ ಮಾರುಕಟ್ಟೆ ಮೌಲ್ಯ 2,17,859.20 ಕೋಟಿ ರೂ.ಗೆ ಏರಿಕೆಯಾಗಿದೆ.

    ಈ ಕಂಪನಿಯ ಷೇರಿನ 52 ವಾರದ ಗರಿಷ್ಠ ಬೆಲೆ ರೂ 589.30 ಮತ್ತು ಕನಿಷ್ಠ ಬೆಲೆ ರೂ 132.55 ಆಗಿದೆ, ಕಳೆದ ವರ್ಷ ಜನವರಿ 28 ರಂದು ಹಿಂಡೆನ್‌ಬರ್ಗ್ ಬ್ರೋಕರೇಜ್​ ಸಂಸ್ಥೆಯು ಅದಾನಿ ಗ್ರೂಪ್​ ವಿರುದ್ಧ ವರದಿ ಪ್ರಕಟಿಸಿದ ಸಂದರ್ಭದಲ್ಲಿ ಷೇರು ಬೆಲೆ ಕುಸಿತ ಕಂಡಿತ್ತು.

    ಕೇವಲ ರೂ 48,000 ಹೂಡಿಕೆ ಒಂದು ಕೋಟಿಯಾಯ್ತು: ಸದ್ಯ ಕುಸಿತ ಕಂಡಿರುವ ಈ ಮಲ್ಟಿಬ್ಯಾಗರ್​ ಷೇರು ಖರೀದಿಗೆ ಸಲಹೆ ನೀಡುತ್ತವೆ ಬ್ರೋಕರೇಜ್​ ಸಂಸ್ಥೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts