More

    ‘ದೇಶಮುಖ್ ವಿರುದ್ಧ ದೂರು ಏಕೆ ದಾಖಲಿಸಲಿಲ್ಲ ?’ – ಹೈಕೋರ್ಟ್ ಪ್ರಶ್ನೆ

    ಮುಂಬೈ : ಖುದ್ದು ಪೊಲೀಸರಾಗಿ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಅವರು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ತಿಳಿದ ಮೇಲೆ ದೂರು ಏಕೆ ದಾಖಲಿಸಲಿಲ್ಲ ಎಂದು ಮಾಜಿ ಮುಂಬೈ ಪೊಲೀಸ್ ಕಮಿಷನರ್ ಪರಮ್​ಬೀರ್ ಸಿಂಗ್​ರನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. ದೇಶಮುಖ್ ವಿರುದ್ಧ ಸಿಬಿಐ ತನಿಖೆ ಕೋರಿ ಸಿಂಗ್​ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಾ ಕೋರ್ಟ್ ಈ ಪ್ರಶ್ನೆ ಕೇಳಿದೆ.

    ದೇಶಮುಖ್ ಅವರು ಸಚಿನ್ ವಾಜ್ ಮತ್ತಿತರ ಪೊಲೀಸ್ ಅಧಿಕಾರಿಗಳಿಗೆ ಬಾರ್ ಮತ್ತು ರೆಸ್ಟೊರೆಂಟ್​ಗಳಿಂದ 100 ಕೋಟಿ ರೂಪಾಯಿ ಸಂಗ್ರಹಿಸಲು ಹೇಳಿದ್ದರು ಎಂದು ಇತ್ತೀಚೆಗೆ ಸಿಂಗ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಬಹಿರಂಗ ಪತ್ರ ಬರೆದಿದ್ದರು. ತದನಂತರ ಮುಂಬೈ ಕಮಿಷನರ್ ಸ್ಥಾನದಿಂದ ಹೋಂ ಗಾರ್ಡ್ಸ್ ಶಾಖೆಗೆ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಸಚಿವ ದೇಶಮುಖ್ ಮೇಲೆ ತಾವು ಆರೋಪಿಸಿದ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ಕೋರ್ಟ್ ಆದೇಶ ಕೋರಿದ್ದರು.

    ಇದನ್ನೂ ಓದಿ: ಪರಮ್ ಬೀರ್ ಸಿಂಗ್ 100 ಕೋಟಿ ಹೇಳಿಕೆ: ‘ಮಹಾ’ ರಾಜಕಾರಣದಲ್ಲಿ ಎದ್ದಿದೆ ಮಹಾ ಬಿರುಗಾಳಿ! ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ

    “ನೀವೊಬ್ಬ ಹಿರಿಯ ಪೊಲೀಸ್ ಅಧಿಕಾರಿ. ಯಾವುದಾದರೂ ತಪ್ಪು ನಡೆದರೆ ದೂರು ದಾಖಲಿಸಲು ನೀವು ಕರ್ತವ್ಯಬದ್ಧರಾಗಿದ್ದೀರಿ. ಈ ರೀತಿ ಅಪರಾಧವನ್ನು ನಿಮ್ಮ ಬಾಸ್ ಮಾಡುತ್ತಿದ್ದಾರೆ ಎಂದು ತಿಳಿದಿದ್ದೂ ನೀವೇಕೆ ಸುಮ್ಮನಿದ್ದಿರಿ ?” ಎಂದು ಮುಖ್ಯ ನ್ಯಾಯಮೂರ್ತಿ ದಿಪಂಕರ್ ದತ್ತ ಪರಮ್​ಬೀರ್​ ಅವರಿಗೆ ಪ್ರಶ್ನೆ ಹಾಕಿದರು. ಪ್ರಕರಣದಲ್ಲಿ ಎಫ್.ಐ.ಆರ್. ಇಲ್ಲದೆ ಸ್ವತಂತ್ರ ಸಂಸ್ಥೆಯಾದ ಸಿಬಿಐಗೆ ತನಿಖೆ ನಡೆಸಲು ಕೋರ್ಟ್ ಹೇಗೆ ಆದೇಶಿಸಲು ಸಾಧ್ಯ ಎಂದರು.

    “ಅರ್ಜಿಯಲ್ಲಿ ಆರೋಪಿಸಲಾಗಿರುವ ಹೇಳಿಕೆಗಳನ್ನು ಗೃಹ ಸಚಿವರು ಸಿಂಗ್ ಉಪಸ್ಥಿತಿಯಲ್ಲಿ ಮಾಡಿದ್ರಾ ? ಇಲ್ಲವಾದರೆ ಅದು ಬರೀ ವದಂತಿ ಆಗುವುದಿಲ್ಲವೇ ?” ಎಂದೂ ಪ್ರಶ್ನಿಸಿದ ಕೋರ್ಟ್, ದೇಶಮುಖ್ ಮನೆಗೆ ಕರೆದು ಹಣ ಸಂಗ್ರಹಿಸಲು ಹೇಳಿದಂತಹ ಯಾವುದೇ ಪೊಲೀಸ್ ಅಧಿಕಾರಿಯು ಸಿಂಗ್ ಆರೋಪಗಳನ್ನು ಬೆಂಬಲಿಸಿ ಅಫಿಡೆವಿಟ್ ಸಲ್ಲಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿತು. (ಏಜೆನ್ಸೀಸ್)

    “ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ನನ್ನ ಮೇಲೆ ತನಿಖೆ ನಡೆಸಲಿದ್ದಾರೆ… ಸತ್ಯ ಹೊರಬರಲಿದೆ”

    ಮತ್ತೆರಡು ನಾಮಪತ್ರ… ರಂಗೇರಿದ ಕಸಾಪ ಚುನಾವಣೆ ಕಣ !

    ಬಿಗ್ ಬಾಸ್​ ಖ್ಯಾತಿಯ ಅಜಾಜ್ ಖಾನ್ ಡ್ರಗ್ಸ್ ಕೇಸಲ್ಲಿ ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts