More

    ಐಪಿಎಲ್ ಹರಾಜಿಗೆ ಮುನ್ನ ಆರ್‌ಸಿಬಿ ತಂಡದಿಂದ ಯಾರು ಔಟ್, ಯಾರು ಸೇಫ್​?

    ಬೆಂಗಳೂರು: 2021ರ ಐಪಿಎಲ್ 14ನೇ ಆವೃತ್ತಿಗೆ ಸಿದ್ಧತೆಗಳು ಶುರುವಾಗಿದ್ದು, ಫೆಬ್ರವರಿ 11ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಅದಕ್ಕೆ ಮುನ್ನ ಎಲ್ಲ 8 ತಂಡಗಳಿಗೆ ಆಟಗಾರರ ರಿಟೇನ್ ಪಟ್ಟಿ ಸಲ್ಲಿಸಲು ಜನವರಿ 21ರವರೆಗೆ ಕಾಲಾವಕಾಶ ನೀಡಲಾಗಿದೆ. ಕಳೆದ 13 ವರ್ಷಗಳಿಂದ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗುತ್ತ ಬಂದಿರುವ ಆರ್‌ಸಿಬಿ ತಂಡದಲ್ಲಿ ಈ ಬಾರಿ ಯಾವ ಆಟಗಾರರು ಉಳಿದುಕೊಳ್ಳಲಿದ್ದಾರೆ ಮತ್ತು ಯಾವ ಆಟಗಾರರು ಹೊರಬೀಳಬಹುದು ಎಂಬ ಲೆಕ್ಕಾಚಾರ ಇಲ್ಲಿದೆ.

    2020ರಲ್ಲಿ ಯುಎಇಯಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯಲ್ಲೂ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ತಂಡ ನಿರಾಸೆ ಅನುಭವಿಸಿತ್ತು. ಪ್ಲೇಆಫ್​ಗೇರುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದ್ದರೂ, ಪ್ರಶಸ್ತಿ ಸನಿಹ ತಲುಪುವಲ್ಲಿ ಸಫಲವಾಗಿರಲಿಲ್ಲ. ಹೀಗಾಗಿ 14ನೇ ಆವೃತ್ತಿಗೆ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾದರೆ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯವೆನಿಸಿದೆ.

    ಇದನ್ನೂ ಓದಿ: ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದ ಕೊಹ್ಲಿ, ಪ್ರಗತಿ ಕಂಡ ಸ್ಮಿತ್

    ನಾಯಕ ವಿರಾಟ್ ಕೊಹ್ಲಿ ಜತೆಗೆ ಎಬಿ ಡಿವಿಲಿಯರ್ಸ್‌, ನವದೀಪ್ ಸೈನಿ, ಮೊಹಮದ್ ಸಿರಾಜ್, ಕನ್ನಡಿಗ ದೇವದತ್ ಪಡಿಕಲ್, ಯಜುವೇಂದ್ರ ಚಾಹಲ್, ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ 2021ರ ಆವೃತ್ತಿಗೂ ಆರ್‌ಸಿಬಿ ತಂಡದಲ್ಲಿ ಉಳಿದುಕೊಳ್ಳುವುದು ಬಹುತೇಕ ಖಚಿತವೆನಿಸಿದೆ.

    ಗಾಯದಿಂದಾಗಿ 2020ರ ಆವೃತ್ತಿಯಲ್ಲಿ ಹೆಚ್ಚಿನ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್, ಇಂಗ್ಲೆಂಡ್‌ನ ಮೊಯಿನ್ ಅಲಿ, ಆಸೀಸ್ ನಾಯಕ ಆರನ್ ಫಿಂಚ್, ಗುರುಕೀರತ್ ಸಿಂಗ್ ಬಹುತೇಕ ಹೊರಬೀಳುವ ನಿರೀಕ್ಷೆ ಇದೆ. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಈ ಬಾರಿ ಐಪಿಎಲ್ ಆಡುವುದಿಲ್ಲ ಎಂದು ಈಗಾಗಲೆ ತಿಳಿಸಿದ್ದಾರೆ. ಹೀಗಾಗಿ ಅವರೂ ಖಚಿತವಾಗಿ ತಂಡದಿಂದ ಹೊರಬೀಳಲಿದ್ದಾರೆ.

    ಇದನ್ನೂ ಓದಿ: ಬ್ರಿಸ್ಬೇನ್ ಟೆಸ್ಟ್‌ಗೆ ಮಳೆ ಭೀತಿ, ಸರಣಿ ಡ್ರಾಗೊಂಡರೆ ಭಾರತಕ್ಕೆ ಟ್ರೋಫಿ! 

    ಪಾರ್ಥಿವ್ ಪಟೇಲ್, ಉಮೇಶ್ ಯಾದವ್, ಇಸುರು ಉದಾನ, ಕೇನ್ ರಿಚರ್ಡ್‌ಸನ್, ಜೋಶ್ ಫಿಲಿಪ್ ಕೂಡ ತಂಡದಲ್ಲಿ ಉಳಿದುಕೊಳ್ಳುವ ನಿರೀಕ್ಷೆ ಇಲ್ಲ. ಶಾಬಾಜ್ ಅಹ್ಮದ್ ತಂಡದಲ್ಲಿ ಉಳಿದುಕೊಳ್ಳಬಹುದು. ಈ ಬಾರಿ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆಯದ ಪವನ್ ನೇಗಿ, ಕನ್ನಡಿಗ ಪವನ್ ದೇಶಪಾಂಡೆ ಅವರ ಬಗ್ಗೆ ಆರ್‌ಸಿಬಿ ಇನ್ನೂ ಗೊಂದಲದಲ್ಲಿದೆ.

    ಸಮರ್ಥ ಆರಂಭಿಕ ಜೋಡಿ, ಮಧ್ಯಮ ಕ್ರಮಾಂಕದ ದೌರ್ಬಲ್ಯ ಮತ್ತು ಸ್ಟಾರ್ ವಿದೇಶಿ ವೇಗದ ಬೌಲರ್ ಕೊರತೆಯನ್ನು ನೀಗಿಸಿಕೊಳ್ಳಲು ಆರ್‌ಸಿಬಿ ಪ್ರಮುಖ ಆದ್ಯತೆ ನೀಡುವ ನಿರೀಕ್ಷೆ ಇದೆ. ಟೂರ್ನಿ ಭಾರತದಲ್ಲೇ ನಡೆಯುವುದೇ, ಬೆಂಗಳೂರಿನಲ್ಲೂ ಪಂದ್ಯಗಳು ನಡೆಯುವುದೇ ಎಂಬ ಗೊಂದಲವೂ ಇರುವುದರಿಂದ ಆರ್‌ಸಿಬಿ ತಂಡ ಸಂಯೋಜನೆಯಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ.

    ಸೈನಾ ಪಾಸಿಟಿವ್, ಕೆಲವೇ ಗಂಟೆಗಳಲ್ಲಿ ನೆಗೆಟಿವ್..!

    ಮದುವೆಯಿಂದ ಮಗುವಿನ ಜನನದವರೆಗೆ ವಿರಾಟ್ ಕೊಹ್ಲಿ ಬಾಳಿನಲ್ಲಿದೆ 11ರ ನಂಟು!

    ವಿಜಯವಾಣಿ ಸಂದರ್ಶನ | ಹೊಸ ವರ್ಷದ ಹೊಸ ಜವಾಬ್ದಾರಿಗೆ ಸಜ್ಜಾಗಿರುವೆ, ದೇವದತ್ ಪಡಿಕಲ್ ವಿಶ್ವಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts