More

    ಸಿನಿಮಾ ಖಯಾಲಿ ಬಿಟ್ಟು ಓದು ಹೋಗು ಎಂದು ಸಲಹೆ ನೀಡಿದ್ದರಂತೆ ದಿಲೀಪ್​ ಕುಮಾರ್​ …

    ಮುಂಬೈ: ಬಾಲಿವುಡ್​ನ ಲೆಜೆಂಡರಿ ನಟ ದಿಲೀಪ್​ ಕುಮಾರ್​ ನಿಧನದ ನಂತರ ಅವರ ಜತೆಗಿನ ಬಾಂಧವ್ಯದ ಕುರಿತಾಗಿ ಹಲವು ನಟ-ನಟಿಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ದಿಲೀಪ್​ ಕುಮಾರ್​ ನಿಧನರಾದ ಸಂದರ್ಭದಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಸೀರುದ್ದೀನ್​ ಷಾ, ಇದೀಗ ಗುಣಮುಖರಾಗಿದ್ದು, ಮನೆಗೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಅವರು ದಿಲೀಪ್​ ಕುಮಾರ್​ ಬಗ್ಗೆ ಮಾತನಾಡಿದ್ದಾರೆ.

    ಇದನ್ನೂ ಓದಿ: ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಮದ್ಯದ ಬಾಟಲ್ ಎಸೆದು ದಾಳಿ

    ‘ನನಗೆ ನಟಿಸಬೇಕು, ಚಿತ್ರರಂಗಕ್ಕೆ ಬರಬೇಕು ಎಂಬ ಆಸೆ ಬಹಳ ಇತ್ತು. ಒಮ್ಮೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಅವರಿಗೆ ನನ್ನ ಆಸೆ ಹೇಳಿಕೊಂಡೆ. ಆಗ ಅವರು, ನೀನು ವಾಪಸ್ಸು ಹೋಗಿ ಓದು ಮುಂದುವರೆಸು. ಒಳ್ಳೆಯ ಕುಟುಂಬದಿಂದ ಬಂದವರು ನಟರಾಗುವುದಕ್ಕೆ ಪ್ರಯತ್ನಿಸಬಾರದು ಅಂತೆಲ್ಲ ಹೇಳಿ ಕಳುಹಿಸಿದರು. ನೀವು ಹೇಗೆ ಇಲ್ಲಿ ಬಂದಿರಿ ಎಂದು ನನಗೆ ಕೇಳಬೇಕು ಅಂತನಿಸಿತು. ಆದರೆ, ಅವರ ಮುಂದೆ ನಿಂತು ಮಾತಾಡುವ ಧೈರ್ಯ ಇರಲಿಲ್ಲ. ಏಕೆಂದರೆ, ನಾನು ಅವರ ದೊಡ್ಡ ಅಭಿಮಾನಿ. ನನಗೆ ಎಲ್ಲ ನಟರೂ ಇಷ್ಟವೇ. ಆದರೆ, ದಿಲೀಪ್​ ಕುಮಾರ್​ ಅವರು ಎಲ್ಲರಿಗಿಂತ ಒಂದು ಹೆಜ್ಜೆ ಮೇಲೆ’ ಎನ್ನುತ್ತಾರೆ ಷಾ.

    ವಿಶೇಷವೆಂದರೆ, ಬೇರೆ ಏನಾದರೂ ಮಾಡು ಅಂತ ಹೇಳಿದ್ದ ದಿಲೀಪ್​ ಕುಮಾರ್​ ಅವರ ಜತೆಗೇ ನಾಸಿರುದ್ದೀನ್​ ಷಾ ನಟಿಸುವಂತಾಗಿದ್ದು. ಷಾ ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ಕೊಟ್ಟ ಕೆಲವೇ ವರ್ಷಗಳಲ್ಲಿ ದಿಲೀಪ್​ ಕುಮಾರ್​ ಅಭಿನಯದ ‘ಕರ್ಮ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಭಾಷ್​ ಘಾಯ್​ ನಿರ್ದೇಶನದ ಈ ಚಿತ್ರ ಸೂಪರ್​ ಹಿಟ್​ ಆಗಿತ್ತು.

    ಇದನ್ನೂ ಓದಿ: ಬೇಬಿ ವಮಿಕಾ ಜೊತೆ ವಿರುಷ್ಕಾ ದಂಪತಿಯ ಪಿಕ್​ನಿಕ್!

    ದಿಲೀಪ್​ ಕುಮಾರ್​ ಅವರ ಜತೆಗೆ ನಟಿಸಿದ ಅನುಭವವನ್ನು ಹಂಚಿಕೊಂಡಿರುವ ಅವರು, ‘ನಾನು ಇದುವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಆ ಚಿತ್ರದಲ್ಲಿ ಅವರೊಂದಿಗೆ ನಟಿಸುವಾಗ ಆದಷ್ಟು ನರ್ವಸ್​, ಬೇರೆ ಯಾರೊಂದಿಗೂ ನಟಿಸುವಾಗ ಆಗಿರಲಿಲ್ಲ. ಎಷ್ಟೋ ಬಾರಿ ನನಗೆ ಅವರ ಎದುರಿಗೆ ನಿಲ್ಲುವುದಕ್ಕೇ ಭಯವಾಗುತ್ತಿತ್ತು. ಬೆಳಿಗ್ಗೆ ಅವರಿಗೆ ಗುಡ್​ ಮಾರ್ನಿಂಗ್​ ಅಂತ ಹೇಳುವುದು ಬಿಟ್ಟರೆ, ಅವರ ಜತೆ ಮಾತನಾಡುವುದು ಸಹ ಕಷ್ಟವಾಗುತ್ತಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ.

    ಶಿವಣ್ಣ ಹುಟ್ಟುಹಬ್ಬಕ್ಕೆ ‘ಭಜರಂಗಿ 2’ ಟೀಸರ್​ ಬಿಡುಗಡೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts