More

    ಬಹುದಿನಗಳಿಂದ ಕಾಯುತ್ತಿರುವ ಫೀಚರ್​ನ್ನು ಶೀಘ್ರದಲ್ಲೇ ಪರಿಚಯಿಸಲಿದೆ ವ್ಯಾಟ್ಸ್​​​ಆ್ಯಪ್​​

    ದೆಹಲಿ: ವಿಶ್ವದಾದ್ಯಂತ ಮಿಲಿಯನ್​ಗಟ್ಟಲೇ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​​ಆ್ಯಪ್​ ತನ್ನ ಗ್ರಾಹಕರಿಗಾಗಿ ಮತ್ತೊಂದು ಅದ್ಭುತ ಫೀಚರ್​​ನ್ನು ಹೊರತಂದಿದೆ.

    ಇದನ್ನೂ ಓದಿ: ಪ್ರಿಯತಮೆಯ ಗಂಡನ ಪ್ರಾಣ ತೆಗೆದು, ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿದ ಪ್ರಿಯಕರ

    ಈ ಹಿಂದೆ, ವಾಟ್ಸ್​​ಆ್ಯಪ್​ ಬಳಕೆದಾರರು ಬೇರೆಯವರೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸುವ ಮೊದಲು, ಆ ವ್ಯಕ್ತಿಯ ಮೊಬೈಲ್​​ ಸಂಖ್ಯೆಯನ್ನು ಸೇವ್​​ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆದರೆ ಸದ್ಯ, ವಾಟ್ಸ್​​ಆ್ಯಪ್​ ಗ್ರಾಹಕರ ಅನುಕೂಲಕ್ಕಾಗಿ ಬಳಕೆದಾರರು ಯಾವುದೇ ನಂಬರ್​​ನ್ನು ತಮ್ಮ ಮೊಬೈಲ್​ನಲ್ಲಿ ಸೇವ್​​ ಮಾಡದೇ ಅಪರಿಚಿತ ಸಂಖ್ಯೆಗಳೊಂದಿಗೆ ಚಾಟ್ ಮಾಡಲು ಅನುಮತಿಸುತ್ತದೆ.

    ಸದ್ಯ ಈ ಫೀಚರ್​​, ಈ ಹೊಸ ಅಪ್ಡೇಟ್ ವಾಟ್ಸ್​​ಆ್ಯಪ್​​ನ ಇತ್ತೀಚಿನ ಆವೃತ್ತಿಯಲ್ಲಿ ಲಭ್ಯವಿದ್ದು, ಕೆಲವು ಬಳಕೆದಾರರಿಗೆ ಮಾತ್ರ ದೊರಕಿದೆ. ಶೀಘ್ರದಲ್ಲೇ ಇತರ ಗ್ರಾಹಕರಿಗೂ ಈ ಫೀಚರ್​​ ಸಿಗಲಿದೆ ಎನ್ನಲಾಗಿದ್ದು, ಆ್ಯಂಡ್ರಾಯ್ಡ್​​ ಮತ್ತು iOS ಬಳಕೆದಾರರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ವಾಟ್ಸ್​​ಆ್ಯಪ್​​ನಲ್ಲಿ ಸ್ಟಾರ್ಟ್ ನ್ಯೂ ಚಾಟ್ ಬಟನ್ ಕ್ಲಿಕ್ ಮಾಡಿ, ನೇರವಾಗಿ ಫೋನ್ ನಂಬರ್ ನಮೂದಿಸಿ ಮೆಸೇಜ್ ಕಳುಹಿಸಬಹುದಾಗಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts