More

    ಬಳಕೆದಾರರಿಗೆ ಹೊಸ ಫೀಚರ್​ ಪರಿಚಯಿಸಿದ ವಾಟ್ಸ್​ಆ್ಯಪ್​; ಇದರ ಬಳಕೆ ಹೇಗೆ?

    ನವದೆಹಲಿ: ವಿಶ್ವದಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೇಜಿಂಗ್ ಪ್ಲಾಟ್​​ಫಾರ್ಮ್ ಆಗಿರುವ ವಾಟ್ಸ್​ಆ್ಯಪ್​ ಹೊಚ್ಚ ಹೊಸ ಆಕರ್ಷಕ ಫೀಚರ್​ಗಳನ್ನು ನೀಡುವ ಮೂಲಕ ಮುನ್ನೆಲೆಯಲ್ಲಿದೆ. ಇದೀಗ ಮೆಟಾ ಒಡೆತನದ ಕಂಪನಿಯೂ ತನ್ನ ಬಳಕೆದಾರರಿಗೆ ಹೊಸ ಫೀಚರ್​ ಒಂದನ್ನು ಪರಿಚಯಿಸಿದೆ.

    ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೆ ಹೊಸ ಹೊಸ ಫೀಚರ್​ಗಳನ್ನು ಅಭಿವೃದ್ದಿಪಡಿಸುತ್ತಿರುವ ವಾಟ್ಸ್​ಆ್ಯಪ್​ ಇದೀಗ ತನ್ನ ಇತ್ತೀಚಿನ ಚಾನೆಲ್‌ಗಳ ವೈಶಿಷ್ಟ್ಯವನ್ನು ವಿಶ್ವದಾದ್ಯಂತ ಲಭ್ಯವಾಗುವಂತೆ ಮಾಡಿದೆ. ಈ ದೇಶಗಳಲ್ಲಿ ಭಾರತವೂ ಸೇರಿದೆ. ಆರಂಭದಲ್ಲಿ ಈ ವೈಶಿಷ್ಟ್ಯವು 10 ದೇಶಗಳಲ್ಲಿ ಲಭ್ಯವಿತ್ತು. ಆದಾಗ್ಯೂ, ಈಗ ಇದನ್ನು 150ಕ್ಕೂ ಹೆಚ್ಚು ದೇಶಗಳಲ್ಲಿ ಪ್ರವೇಶಿಸಬಹುದಾಗಿದೆ.

    ಸಹಕಾರಿಯಾಗಲಿದೆ

    ಇನ್ನು ಈ ವಾಟ್ಸ್​ಆ್ಯಪ್​ ಚಾನೆಲ್ ಫೀಚರ್ ಈ ಹಿಂದೆ ಟೆಲಿಗ್ರಾಮ್​ ಅಪ್ಲಿಕೇಶನ್​ನಲ್ಲಿ ಮಾತ್ರ ಲಭ್ಯವಿತ್ತು. ಮೆಟಾ ಪ್ರಕಾರ, ಪ್ರಮುಖ ನವೀಕರಣಗಳನ್ನು ಸ್ವೀಕರಿಸಲು ಇದು ನಿಮಗೆ ವೈಯಕ್ತಿಕವಾಗಿ ಸಹಾಯಕವಾಗಲಿದೆ. ಈ ಹೊಸ ವೈಶಿಷ್ಟ್ಯದ ಮೂಲಕ, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ವಾಟ್ಸ್​ಆ್ಯಪ್ ಚಾನೆಲ್‌ ಎಂಬ ಫೀಚರ್‌ ಮೂಲಕ ಯಾರನ್ನು ಬೇಕಾದರೂ ಫಾಲೋ ಮಾಡಬಹುದು. ಇದರಿಂದ ಫಾಲೋ ಮಾಡುವ ಸೆಲೆಬ್ರಿಟಿಗಳು, ಸಂಸ್ಥೆಗಳ ಅಪ್‌ಡೇಟ್‌ ಪಡೆಯಲು ಈ ಫೀಚರ್‌ ನೆರವಾಗಲಿದೆ ಎಂದು ಮೆಟಾ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    whatsapp channels

    ಸೆಲೆಬ್ರಿಟಿಗಳು, ಕ್ರೀಡಾ ತಂಡಗಳು, ರಾಜಕೀಯ ಪಕ್ಷಗಳು, ಸುದ್ದಿ ಸಂಸ್ಥೆಗಳ ಅಪ್ಡೇಟ್​ಅನ್ನು ನಾವು ಖಾಸಗಿಯಾಗಿ ಪಡೆಯಲು ಈ ಹೊಸ ಫೀಚರ್​ ಸಹಕಾರಿಯಾಗಲಿದೆ. ಇದು ಏಕಮುಖವಾಗಿ ಕಾರ್ಯನಿರ್ವಹಿಸಲಿದ್ದು, ನಾವು ಮಾಹಿತಿ ಪಡೆಯಬಹುದೇ ಹೊರತು ಯಾವುದೇ ಪೋಸ್ಟ್ಅನ್ನು ಹಾಕಲು ಅವಕಾಶವಿರುವುದಿಲ್ಲ. ಆದರೆ, ಸಂದೇಶಗಳಿಗೆ ರಿಯಾಕ್ಟ್​​ ಮಾಡಬಹುದಾಗಿದೆ.

    ಈ ಕುರಿತು ಮಾತನಾಡಿರುವ ಮೆಟಾ ಮುಖ್ಯಸ್ಥ ಮಾರ್ಕ್​ ಜೂಕರ್​ಬರ್ಗ್​ ಇಂದು ನಾವು ವಾಟ್ಸ್​ಆ್ಯಪ್​ ಚಾನೆಲ್ಸ್‌ ಅನ್ನು ಜಾಗತಿಕವಾಗಿ ಪರಿಚಯಿಸುತ್ತಿದ್ದೇವೆ. ಜನರು ವಾಟ್ಸಪ್‌ನಲ್ಲಿ ಫಾಲೋ ಮಾಡಲು ಸಾವಿರಾರು ಹೊಸ ಚಾನೆಲ್‌ಗಳನ್ನು ಸೇರಿಸುತ್ತಿದ್ದೇವೆ. ಹೊಸ ಅಪ್‌ಡೇಟ್ಸ್‌ ಟ್ಯಾಬ್‌ನಲ್ಲಿ ನೀವು ಚಾನೆಲ್ಸ್‌ ಫೀಚರ್‌ ಅನ್ನು ನೀಡಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಹೇಗಿರಲಿದೆ ವಾಟ್ಸ್​ಅಪ್​ ಚಾನೆಲ್​

    ಮೆಟಾ ಕಂಪನಿ ಪ್ರಕಾರ ವಾಟ್ಸ್​ಆ್ಯಪ್​ ಚಾನೆಲ್ಸ್‌ ಫೀಚರ್‌ ಇನ್‌ಸ್ಟಾಗ್ರಾಂ ಚಾನೆಲ್ಸ್‌ನಂತೆ ಇರಲಿದೆ. ಆದರೆ, ವಾಟ್ಸ್​ಆ್ಯಪ್​ ಬಳಕೆದಾರರನ್ನು ಇತರರು ಹುಡುಕಲು ಸಾಧ್ಯವಿಲ್ಲ. ನಿಮ್ಮ ದೇಶಕ್ಕೆ ತಕ್ಕಂತೆ ಹೊಸ, ಹೆಚ್ಚು ಸಕ್ರಿಯವಾಗಿರುವ, ಹೆಚ್ಚು ಫಾಲೋವರ್ಸ್‌ ಹೊಂದಿರುವ ಚಾನೆಲ್‌ಗಳನ್ನು ನೀವು ನೋಡಬಹುದು ಎಂದು ಸಂಸ್ಥೆ ತಿಳಿಸಿದೆ.

    ಈ ರೀತಿ ಸೆಲೆಬ್ರಿಟಿಗಳು, ಸಂಸ್ಥೆಗಳು ನೀಡುವ ಅಪ್‌ಡೇಟ್‌ಗೆ ರಿಯಾಕ್ಷನ್‌ ನೀಡಲು ಬಳಕೆದಾರರಿಗೆ ಸಾಧ್ಯವಿದೆ. ಇಮೋಜಿ ಮೂಲಕ ಇಂತಹ ಅಪ್‌ಡೇಟ್‌ಗಳಿಗೆ ಪ್ರತಿಕ್ರಿಯೆ ನೀಡಬಹುದು. ನೀವು ಯಾರನ್ನು ಫಾಲೋ ಮಾಡಿದ್ದೀರಿ ಎಂದು ಇತರೆ ವಾಟ್ಸಪ್‌ ಬಳಕೆದಾರರಿಗೆ ತಿಳಿಯುವುದಿಲ್ಲ ಎಂದು ವಾಟ್ಸ್​ಆ್ಯಪ್ ಮಾಹಿತಿ ನೀಡಿದೆ.

    whatsapp

    ಸದ್ಯದಲ್ಲೇ ಕಾಣಿಸಿಕೊಳ್ಳಲಿದೆ

    ಜೂನ್‌ ತಿಂಗಳಲ್ಲಿ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಬ್ರಾಡ್‌ಕಾಸ್ಟ್‌ ಚಾನೆಲ್ಸ್‌ ಎಂಬ ಹೊಸ ಫೀಚರ್‌ ಪರಿಚಯಿಸಿತ್ತು. ಅಲ್ಲಿ ಸೆಲೆಬ್ರಿಟಿಗಳು, ವಿಶ್ವ ನಾಯಕರು ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳನ್ನು ಫಾಲೋ ಮಾಡಲು ಅವಕಾಶವಿತ್ತು. ಈ ಗ್ರೂಪ್‌ಗಳಿಗೆ ಸೇರುವ ಮೂಲಕ ಅವರಿಂದ ಖಾಸಗಿ ಅಪ್‌ಡೇಟ್‌ ಪಡೆಯಲು ಸಾಧ್ಯವಾಯಿತ್ತು. ಇದಕ್ಕೆ ಇತರೆ ಬಳಕೆದಾರರು ಪ್ರತಿಕ್ರಿಯೆ ನೀಡಲು ಸಾಧ್ಯವಿರಲಿಲ್ಲ. ಆದರೆ, ನಮ್ಮ ಸಂದೇಶಕ್ಕೆ ಆ ಸೆಲೆಬ್ರಿಟಿಗಳು, ಸಂಸ್ಥೆಗಳು ಪ್ರತಿಕ್ರಿಯೆ ನೀಡುವ ಅವಕಾಶವಿತ್ತು. ಅಭಿಮಾನಿಗಳ ಜತೆಗೆ ನೇರವಾಗಿ ಸಂವಹನ ನಡೆಸಲು ಇದರಿಂದ ಸೆಲೆಬ್ರಿಟಿಗಳಿಗೆ ಅವಕಾಶ ದೊರಕಿತ್ತು.

    ಈ ಫೀಚರ್‌ನ ಜನಪ್ರಿಯತೆ ಬಳಿಕ, ಇದೀಗ ಮೆಟಾ ಮಾಲೀಕತ್ವದ ವಾಟ್ಸ್​ಆ್ಯಪ್​ಗೂ ಈ ಫೀಚರ್‌ ಅಳವಡಿಸಲಾಗುತ್ತಿದೆ. ಈ ಫೀಚರ್‌ ಭಾರತಕ್ಕೂ ಪರಿಚಯಿಸಲಾಗುತ್ತದೆ. ಜಾಗತಿಕವಾಗಿ ಈ ಫೀಚರ್‌ ಈಗಾಗಲೇ ಬಿಡುಗಡೆಯಾಗಿದೆ. ಸದ್ಯದಲ್ಲಿಯೇ ನಮ್ಮೆಲ್ಲರ ವಾಟ್ಸ್​ಆ್ಯಪ್​ನಲ್ಲೂ ಈ ಫೀಚರ್‌ ಕಾಣಿಸಿಕೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts