More

    ಒಮಿಕ್ರಾನ್ ಸೋಂಕು ಬಂದ್ರೆ ಏನು ಚಿಕಿತ್ಸೆ? ಸಿಎಂ ಬೊಮ್ಮಾಯಿ ಹೇಳಿದ್ದು ಹೀಗೆ

    ಬೆಂಗಳೂರು: ಜಗತ್ತಿನಾದ್ಯಂತ ಕರೊನಾದ ಹೊಸ ರೂಪಾಂತರಿ ಒಮಿಕ್ರಾನ್​ ಹೊಸ ಸವಾಲುಗಳನ್ನು ಹುಟ್ಟಿಹಾಕಿದೆ. ಹೀಗಿರುವಾಗ ಈ ಹೊಸ ಪ್ರಬೇಧದ ಸೋಂಕಿಗೆ ಚಿಕಿತ್ಸೆ ಏನು ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಇದಕ್ಕೆ ಉತ್ತರಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರಾನ್​​ ಸೋಂಕಿಗೆ ಡೆಲ್ಟಾಗೆ ನೀಡಲಾಗುವ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ತಳಿ ಒಮಿಕ್ರಾನ್ ಬಗ್ಗೆ ಪ್ರಾಥಮಿಕ ವರದಿ ಬಂದಿದೆ. ಪೂರ್ಣ ಪ್ರಮಾಣದ ವರದಿ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದು ವ್ಯಾಪಕವಾಗಿ ಹಬ್ಬುತ್ತದೆ, ಆದರೆ ಆಘಾತಕಾರಿ ಅಲ್ಲ ಎಂದರು.

    ಇದನ್ನೂ ಓದಿ: ಈ ರಾಜ್ಯಗಳಲ್ಲೂ ಒಮಿಕ್ರಾನ್​ ಭೀತಿ; ಅಟ್​-ರಿಸ್ಕ್​ ದೇಶಗಳಿಂದ ಮರಳಿದವರಿಗೆ ಕರೊನಾ ಪಾಸಿಟಿವ್​

    ಕೋವಿಡ್​ ಕ್ಲಸ್ಟರ್​:  ಶಾಲೆ ಮತ್ತು ಅಪಾರ್ಟ್ಮೆಂಟ್‌ಗಳನ್ನು ಕ್ಲಸ್ಟರ್ ಮಾಡಲು ತೀರ್ಮಾನ ಮಾಡಲಾಗಿದೆ. ಯಾವುದೇ ಶಾಲೆ ಅಥವಾ ಅಪಾರ್ಟ್ಮೆಂಟಲ್ಲಿ ಮೂರು ಕರೊನಾ ಪ್ರಕರಣ ಕಾಣಿಸಿಕೊಂಡರೆ ಕ್ಲಸ್ಟರ್ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದ ಬೊಮ್ಮಾಯಿ, ಶಾಲೆಯ ಪೋಷಕರು,ಶಿಕ್ಷಕರು ವ್ಯಾಕ್ಸಿನ್ ಪಡೆದಿರಬೇಕು. ನರ್ಸಿಂಗ್ ವಿದ್ಯಾರ್ಥಿಗಳು ಡಬಲ್ ವ್ಯಾಕ್ಸಿನ್ ಪಡೆದಿರಬೇಕು ಎಂದರು.

    ಲಸಿಕೆ ಆಗಿದ್ದರೇ ಸುವರ್ಣಸೌಧಕ್ಕೆ ಎಂಟ್ರಿ: ಬೆಳಗಾವಿಯಲ್ಲಿ ವಿಶೇಷ ಕ್ರಮದ ಮೂಲಕ ವಿಧಾನಸಭಾ ಅಧಿವೇಶನ ನಡೆಸುತ್ತೇವೆ. ಡಬಲ್ ಡೋಸ್ ಆಗಿರೋರಿಗೆ ಮಾತ್ರ ಸುವರ್ಣಸೌಧಕ್ಕೆ ಎಂಟ್ರಿ‌ ನೀಡಲಾಗುವುದು. ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಒಮಿಕ್ರಾನ್​​ ತಡೆಗೆ ಸರ್ಕಾರ ಸಜ್ಜು; ರಾಜ್ಯದಲ್ಲಿ ಜಾರಿಯಾಗುವ ಹೊಸ ನಿಯಮಗಳಿವು

    ಟೆಸ್ಟಿಂಗ್ ಸೌಲಭ್ಯ ಚೆನ್ನಾಗಿರೋದ್ರಿಂದ ಇಲ್ಲಿ ಮೊದಲು ಪತ್ತೆಯಾಗಿದೆ: ಸಚಿವ ಸುಧಾಕರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts