More

    ಷೇರು ಮಾರುಕಟ್ಟೆ ಮುಂದಿನ ವಾರ ಹೇಗಿರಲಿದೆ? ಯಾವ ಯಾವ ಸಂಗತಿಗಳತ್ತ ಗಮನ ಅಗತ್ಯ?

    ಮುಂಬೈ: ಈ ವಾರ ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮೇಲೆ ಸ್ಟಾಕ್ ಮಾರುಕಟ್ಟೆಯು ಕಣ್ಣಿಡುತ್ತದೆ. ಕಚ್ಚಾ ತೈಲ ಮತ್ತು ಡಾಲರ್-ರೂಪಾಯಿ ಪರಿಸ್ಥಿತಿಯ ಮೇಲೆ ಕೂಡ ಹೂಡಿಕೆದಾರರು ನಿಗಾ ಇಡುತ್ತಾರೆ ಎಂದು ಎಂದು ತಜ್ಞರು ಹೇಳುತ್ತಾರೆ.

    ಇರಾನ್-ಇಸ್ರೇಲ್ ಸಂಘರ್ಷ, ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಮತ್ತು ವಿದೇಶಿ ಹೂಡಿಕೆದಾರರ ಚಟುವಟಿಕೆಗಳಿಂದ ಷೇರು ಮಾರುಕಟ್ಟೆಗಳ ಪ್ರವೃತ್ತಿಯು ಈ ವಾರದ ಮೇಲೆ ಪರಿಣಾಮ ಬೀರುತ್ತದೆ. ಕಚ್ಚಾ ತೈಲ ಬೆಲೆ, ಡಾಲರ್ ವಿರುದ್ಧ ರೂಪಾಯಿಯ ಚಲನೆ ಕೂಡ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.

    ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್ ಲಿಮಿಟೆಡ್‌ನ ಹಿರಿಯ ತಾಂತ್ರಿಕ ವಿಶ್ಲೇಷಕ ಪ್ರವೇಶ್ ಗೌರ್, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಆತಂಕವು ಈ ವಾರ ಮಾರುಕಟ್ಟೆಗೆ ಬಹಳ ಮುಖ್ಯವಾಗಿದೆ. ಉದ್ವಿಗ್ನತೆಗಳು ಗಮನಾರ್ಹವಾಗಿ ಉಲ್ಬಣಗೊಂಡರೆ, ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಕೋಲಾಹಲ ಉಂಟಾಗಿ, ಮಾರಾಟ ಮತ್ತು ಹೆಚ್ಚಿದ ಚಂಚಲತೆಯ ಅಪಾಯವಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಭೌಗೋಳಿಕ ರಾಜಕೀಯ ಘಟನೆಗಳು ಕಚ್ಚಾ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುವುದರಿಂದ ಇದನ್ನು ಕೂಡ ನಿಕಟವಾಗಿ ಗಮನಿಸಲಾಗುತ್ತದೆ ಎಂದೂ ಅವರು ಹೇಳುತ್ತಾರೆ.

    ಈ ವಾರ, ಹೂಡಿಕೆದಾರರು ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ನೆಸ್ಲೆ, ಬಜಾಜ್ ಫಿನ್‌ಸರ್ವ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಮಾರುತಿಯ ತ್ರೈಮಾಸಿಕ ಫಲಿತಾಂಶಗಳ ಮೇಲೆ ಕಣ್ಣಿಡುತ್ತಾರೆ.

    ಕಳೆದ ವಾರ, ಬಿಎಸ್‌ಇ ಸೆನ್ಸೆಕ್ಸ್ 1,156.57 ಅಂಕಗಳು ಅಥವಾ 1.55 ರಷ್ಟು ಕುಸಿದರೆ, ನಿಫ್ಟಿ 372.4 ಅಂಕಗಳು ಅಥವಾ 1.65 ರಷ್ಟು ಕುಸಿದಿದೆ,

    ಈ ವಾರ ಜಾಗತಿಕ ಸೂಚನೆಗಳೊಂದಿಗೆ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳ ಮೇಲೂ ನಿಗಾ ಇಡಲಾಗುವುದು. ಹೂಡಿಕೆದಾರರು ಅಮೆರಿಕ ಉತ್ಪಾದನೆ ಮತ್ತು ಸೇವೆಗಳ ಅಂಕಿ-ಅಂಶ, ಅಮೆರಿಕದ ತ್ರೈಮಾಸಿಕ ಜಿಡಿಪಿ ಮತ್ತು ಜಪಾನ್‌ನ ವಿತ್ತೀಯ ನೀತಿಯ ಮೇಲೂ ಹೂಡಿಕೆದಾರರು ಕಣ್ಣಿಡುತ್ತಾರೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಹೇಳಿದೆ.

    ಡಿವಿಡೆಂಡ್​ ನೀಡಲು ಸಜ್ಜಾಗಿದೆ ಬ್ಯಾಂಕ್: ಷೇರಿನ ಬೆಲೆ ಹೆಚ್ಚಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ

    ದಿಗ್ಗಜ ಹೂಡಿಕೆದಾರ ಕೆಡಿಯಾ ಹಣ ತೊಡಗಿಸಿರುವ ಷೇರು: ಎಂಜಿನಿಯರಿಂಗ್ ಕಂಪನಿ ಸ್ಟಾಕ್ ಬೆಲೆ​ ಏರಲಿದೆ ಎನ್ನುತ್ತಾರೆ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts