More

    ಈ ಐಪಿಒದಲ್ಲಿ ಹೂಡಿಕೆ ಲಾಭದಾಯಕ: ಏಕೆಂದರೆ ಗ್ರೇ ಮಾರುಕಟ್ಟೆಯಲ್ಲಿ 61% ಪ್ರೀಮಿಯಂನಲ್ಲಿ ಷೇರುಗಳಿಗೆ ಡಿಮ್ಯಾಂಡು

    ಮುಂಬೈ: ಐಪಿಒದಲ್ಲಿ ಬಾಜಿ ಕಟ್ಟುವ ಹೂಡಿಕೆದಾರರಿಗೆ ಒಳ್ಳೆಯ ಸುದ್ದಿ. ಎಮ್​ಫೋರ್ಸ್ ಆಟೋಟೆಕ್​​ ಲಿಮಿಟಿಡ್​ (Emmforce Autotech Ltd.) ಐಪಿಒ ಈ ವಾರ ತೆರೆಯಲಿದೆ. ಕಂಪನಿಯು ಐಪಿಒ ಮೂಲಕ 53.90 ಕೋಟಿ ರೂ. ಸಂಗ್ರಹಿಸಲು ಪ್ರಯತ್ನಿಸಲಿದೆ. ಇದಕ್ಕಾಗಿ, ಕಂಪನಿಯು 55 ಲಕ್ಷ ಷೇರುಗಳನ್ನು ವಿತರಿಸುತ್ತದೆ. ಈ ಐಪಿಒ ಷೇರಿನ ಬೆಲೆ ಬ್ಯಾಂಡ್ ಪ್ರತಿ ಷೇರಿಗೆ 93 ರಿಂದ 98 ರೂ. ಇದೆ.

    ಈ ಐಪಿಒ ಏಪ್ರಿಲ್ 23 ರಂದು ತೆರೆಯುತ್ತದೆ. ಹೂಡಿಕೆದಾರರಿಗೆ ಹೂಡಿಕೆ ಮಾಡಲು 26 ಏಪ್ರಿಲ್ 2024 ರವರೆಗೆ ಸಮಯವಿರುತ್ತದೆ. ಈ ಐಪಿಒದಲ್ಲಿ ಒಂದು ಲಾಟ್​ನಲ್ಲಿ 1200 ಷೇರುಗಳಿವೆ. ಹೂಡಿಕೆದಾರರು ಕನಿಷ್ಠ 1 ಲಾಟ್​ಗೆ ಬಿಡ್​ ಮಾಡಬೇಕು. ಇದರಿಂದಾಗಿ ಹೂಡಿಕೆದಾರರು ಕನಿಷ್ಠ 1,17,600 ರೂ.ಗಳ ಹೂಡಿಕೆ ಮಾಡಬೇಕಾಗುತ್ತದೆ.

    ಉನ್ನತ ಷೇರು ದಲ್ಲಾಳಿಗಳ ವರದಿಯ ಪ್ರಕಾರ, ಈ ಐಪಿಒ ಷೇರುಗಳ ಬೆಲೆ ಗ್ರೇ ಮಾರ್ಕೆಟ್‌ನಲ್ಲಿ ರೂ 60 ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಇದೇ ಪ್ರವೃತ್ತಿ ಮುಂದುವರಿದರೆ ಐಪಿಒ ಷೇರುಗಳ ಪಟ್ಟಿಯು ರೂ 158 ರ ಮಟ್ಟದಲ್ಲಿರಬಹುದು. ಈ ರೀತಿಯಾದರೆ, ಹೂಡಿಕೆದಾರರು ಮೊದಲ ದಿನದಲ್ಲಿಯೇ ಶೇಕಡಾ 61.22ರಷ್ಟು ಲಾಭವನ್ನು ಪಡೆಯಬಹುದು.

    ಈ ಐಪಿಒದಲ್ಲಿ ಹೂಡಿಕೆದಾರರಿಗೆ ಷೇರುಗಳ ಹಂಚಿಕೆಯನ್ನು ಏಪ್ರಿಲ್ 26 ರಂದು ಮಾಡಲಾಗುತ್ತದೆ. ಕಂಪನಿಯ ಪಟ್ಟಿಯು 30 ಏಪ್ರಿಲ್ 2024 ರಂದು ನಡೆಯಲಿದೆ.

    ಕೇವಲ 5% ಬಡ್ಡಿ ದರದಲ್ಲಿ ದೊರೆಯುತ್ತದೆ ರೂ. 3 ಲಕ್ಷ ಸಾಲ: ಯಾರಿಗೆಲ್ಲ ಇದೆ ಅರ್ಹತೆ?

    ಕಳೆದ ಲೋಕಸಭೆ ಚುನಾವಣೆಯಿಂದ ಈ ಚುನಾವಣೆವರೆಗೆ: ಈ 3 ಷೇರುಗಳಲ್ಲಿ ಲಕ್ಷವಾಯ್ತು ಕೋಟಿ ರೂಪಾಯಿ

    ಶುಕ್ರವಾರ ಏರಿಕೆ ಕಂಡ ಷೇರುಗಳು: ಸೋಮವಾರ ಈ 10 ಪೆನ್ನಿ ಸ್ಟಾಕ್​​ಗಳತ್ತ ಗಮನ ಹರಿಸಲು ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts