More

    2021 ಹೇಗೆ ಏನು ಎತ್ತ? ಭಾರತ, ಕರ್ನಾಟಕದ ರಾಜಕೀಯ, ಆರೋಗ್ಯ, ಹವಾಮಾನ ಮುಂತಾದ ರಂಗಗಳಲ್ಲಿ ಏನಾಗಲಿದೆ?

    2021ರ ಆಗಮನವಾಗಿದೆ. ಈ ವರ್ಷ ಜಾಗತಿಕವಾಗಿ, ಭಾರತದಲ್ಲಿ ಮತ್ತು ಕರ್ನಾಟಕಕ್ಕೆ ಸಂಬಂಧಿಸಿ ರಾಜಕೀಯ, ಆರೋಗ್ಯ, ಹವಾಮಾನ ಇತ್ಯಾದಿ ರಂಗಗಳಲ್ಲಿ ಏನೆಲ್ಲ ಆಗಬಹುದು? ಪ್ರಮುಖ ನಾಯಕರ ಹಣೆಬರಹ ಏನಿರಬಹುದು? ಒಂದು ಅವಲೋಕನ.

    ನೋಡನೋಡುತ್ತಿದ್ದಂತೆ ಆಯಸ್ಸು ಮುಗಿಯುತ್ತಿರುತ್ತದೆ. ಪ್ರತಿದಿನವೂ ಆಯಸ್ಸು ಕಡಿಮೆಯಾಗುತ್ತಲೇ ಹೋಗುತ್ತದೆ. ಬಾಲ್ಯ, ಯವ್ವನಾದಿಗಳೆಲ್ಲ ಕ್ಷಯಿಸುತ್ತವೆ. ಅಂತೂ ಕಾಲರಾಯ ಜಗತ್ತನ್ನು ಅನುದಿನವೂ ಭಕ್ಷಿಸುತ್ತಲೇ ಹೋಗುತ್ತಾನೆ. 2021 ಹೇಗೆ ಏನು ಎತ್ತ? ಭಾರತ, ಕರ್ನಾಟಕದ ರಾಜಕೀಯ, ಆರೋಗ್ಯ, ಹವಾಮಾನ ಮುಂತಾದ ರಂಗಗಳಲ್ಲಿ ಏನಾಗಲಿದೆ?ಜಗತ್ತು ಅವನ ಆಹಾರ. ಅವನೇ ಜಗತ್ತಿನ ಒಡೆಯ. ಇದನ್ನು ಆದಿಶಂಕರರು ಶಿವಾಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ ಉಲ್ಲೇಖಿಸುತ್ತಾರೆ. 2020 ಇಡೀ ಮಾನವಕೋಟಿಯ ಮುಖಗಳನ್ನು ಮಾಸ್ಕ್​ಗಳ ಮೂಲಕ ಮುಚ್ಚಿಸಿತು. ಎಷ್ಟೋ ಜನ ಮಣ್ಣಾದರು. ಸಂಬಂಧಿಗಳಿಗೆ ದೇಹವೂ ಸಿಗದಂತಾದ ಪರಿಸ್ಥಿತಿ ನಿರ್ವಣವಾಯ್ತು. ಇಡೀ ಜಗತ್ತು ತಾನಿದ್ದ ಧಾವಂತವನ್ನು ಹಠಾತ್ತನೆ ನಿಲ್ಲಿಸಬೇಕಾಯ್ತು. ಕೋಟಿಗಟ್ಟಲೆ ಕಳಕೊಂಡವರು ಬಹಳ. ಅನ್ನಕ್ಕಾಗಿನ ಕೆಲಸವಿರದೆ ಒದ್ದಾಡಿದವರೆಷ್ಟು? ಇಂಥ ದುರ್ಗತಿಯಲ್ಲೂ ಹಣ ಮಾಡಲು ನಿಂತ ಜನರೆಷ್ಟು? ವರ್ತಮಾನದ ಬಗೆಗಾಗಿ ಹೊಡೆದುಕೊಂಡ ಚಂಡೆ ಮದ್ದಳೆಯ ಸದ್ದುಗಳು ಅದೆಷ್ಟು? ಸರ್ಕಾರ ನನ್ನ ರಕ್ಷಣೆಗಾಗಿ ಪೂರ್ತಿ ನಿಲ್ಲಬಹುದೆ, ಛೇ ಸಾಧ್ಯವಿಲ್ಲ ಎಂಬ ಭಾವನೆ ಮನಸ್ಸಿಗೆ ಬಂದಾಗ ಉಂಟಾದ ಅಸಹಾಯಕತೆಗಳೆಷ್ಟು? ಕಾಲು ಕೆದರಿ ಬಂದ ಚೀನಾ 20 ಭಾರತೀಯ ಯೋಧರನ್ನು ಹೊಡೆದು ಮುಗಿಸಿತು. ಪ್ರಜಾಸತ್ತಾತ್ಮಕ ವ್ಯವಸ್ಥೆ ಸೋಲು ಸಾಧ್ಯವೇ ಇಲ್ಲ ಎಂಬ ಅಮೆರಿಕಾದಲ್ಲಿ ಟ್ರಂಪ್ ಸೋಲು ಬಂದರೂ ಇದು ಸೋಲಲ್ಲ ಎಂಬ ಅಬ್ಬರದಲ್ಲಿಯೇ ಇನ್ನೂ ಇದ್ದಾರೆ. ಪ್ರಜಾಸತ್ತೆಯ ಬೇರುಗಳು ಒಮ್ಮೆ ಅಲ್ಲಿಯೂ ನಲುಗಿದವು. ಚೀನಾ ಖಳನಾಯಕನಾಗಿ ವಿಷದ ವೈರಾಣುಗಳನ್ನು ಜಾಗತಿಕವಾಗಿ ಹರಡಿಸಿತು. ಭಾರತದ ಆರ್ಥಿಕತೆಯನ್ನು ಮೇಲೆತ್ತುವ ಮೋದಿಯವರ ಕನಸು ಕನಸಾಗಿಯೇ ಉಳಿಯಿತು. ರಾಹುಲ್ ನಾಯಕನಾಗುವ ಲಕ್ಷಣಗಳು ಇವೆಯೇ ಎಂಬ ಜಿಜ್ಞಾಸೆ ನಡೆಯುತ್ತಲೇ ಇದೆ. ಶಿವಸೇನೆ ಆಶ್ಚರ್ಯಕಾರಕವಾಗಿ ಕಾಂಗ್ರೆಸ್​ನ ಕೈಹಿಡಿದು ಮುಸುಕಿರುವ ಮಬ್ಬಲ್ಲಿ ಹೊಸ ಬೆಳಕಿಗಾಗಿ ಕಾದಿದೆ. ಧರ್ಮದ ರಕ್ಷಣೆಗಾಗಿ ಅವತರಿಸಿದ್ದ ಶ್ರೀಕೃಷ್ಣನೇ ಮಹಾಭಾರತ ಯುದ್ಧದ ಕೊನೆಯಲ್ಲಿ ಗಾಂಧಾರಿಯ ಶಾಪಕ್ಕೆ ತುತ್ತಾಗಿ ತತ್ತರಿಸುತ್ತಾನೆ. ಹೀಗೆ ಧರ್ವಧರ್ಮದ ಕುರಿತಾದ ವ್ಯಾಖ್ಯಾನವೂ, ಮನುಷ್ಯನ ಪ್ರಕ್ಷುಬ್ಧತೆಗಳೂ, ಯಾವನೋ ಒಬ್ಬನ ಸಲುವಾಗಿ ಸಮೂಹವೇ ನರಳುವ ದಾರುಣತೆಯೂ ಶತಶತಮಾನಗಳಿಂದ, ಮನ್ವಂತರಗಳಿಂದ ನಡೆದು ಬಂದದ್ದೇ ಆಗಿದೆ. ಆದರೂ 2021 ಆಗಮಿಸಿರುವ ಈ ಸದ್ಯದ ವರ್ತಮಾನದಲ್ಲಿ ಜಗತ್ತಿನ ಗ್ರಹಚಾರ ಹೇಗಿರಬಹುದು ಎಂಬುದಕ್ಕೆ ಭಾರತೀಯ ಜ್ಯೋತಿಷ್ಯ ವಿಜ್ಞಾನ ಬೋಧಿಸುವ ವಿಚಾರಗಳನ್ನು ಅವಲಂಬಿಸಿ ಕೆಲವು ವಿಶ್ಲೇಷಣೆಗಳನ್ನು ದಾಖಲಿಸುತ್ತಿದ್ದೇನೆ.

    ಭಾರತದಲ್ಲಿ ಏನೇನು?

    ಮೋದಿಯವರೇ ಪ್ರಧಾನವಾಗುವ ಭಾರತದ ವರ್ತಮಾನ ಒಬ್ಬ ಮೋದಿಯಿಂದ ಹಲವನ್ನು ನಿರೀಕ್ಷಿಸುತ್ತದೆ. ಮೋದಿಯವರೇ ಎಚ್ಚರವಾಗಿರಿ. ನಿಮ್ಮ ಪ್ರಾಣಕ್ಕೆ ಬಾಯಾರಿಕೆ ಹೊಂದಿದ ರಕ್ತಪಿಶಾಚಿಗಳನ್ನು ಎದುರಿಸಿ ಗೆಲ್ಲುತ್ತೀರಿ. ಆದರೆ ಭಾರತದ ಆರ್ಥಿಕ ನೀತಿ ನಿತ್ಯದ ಸಂಭ್ರಮಕ್ಕೆ ಕಾರಣವಾಗುವ ವಿಷಯದ ಕುರಿತು ನಿಮ್ಮ ಬುದ್ಧಿಬಲ ಗಟ್ಟಿಯಾಗಬೇಕು. ಕರೊನಾ ಕಾರಣದಿಂದ (ಇದು ನಿಮ್ಮ ಜನ್ಮಕುಂಡಲಿಯ ರಾಹುವಿನ ಕುತಂತ್ರ) ನಿಮ್ಮ ಪಾಲಿಗೆ 2020 ವ್ಯರ್ಥವಾಗಿದೆ. 2021 ಬೆನ್ನು ಹತ್ತಿರುವ ವಿಚಾರ ಸಮಾಧಾನದ್ದಾಗಿರುವುದಿಲ್ಲ. ನಿಮ್ಮದು ದಿವ್ಯಶಕ್ತಿಯೊಂದಕ್ಕೆ ಪೂರ್ತಿ ಶರಣಾಗುವ, ಬಾಗಿ ಗೆಲ್ಲುವ ವ್ಯಕ್ತಿತ್ವ. ಹೀಗಾಗಿ ಕಾಲಘಟ್ಟದಲ್ಲಿ ಶನೈಶ್ಚರನ ಬೆಂಬಲ ಹೊಂದಿರುವುದರಿಂದ ನಿಮಗೆ ಶಿವನ ಕರುಣೆ ಇದೆ. (ಚಂದ್ರನ ಕಾರಣದಿಂದಲೂ ಇದು ನಿಜವೇ) ಆದರೆ ನರಸಿಂಹನನ್ನು ಸ್ತುತಿಸಿ. ರಾಹುಗ್ರಹದ ದುಷ್ಟತನ ಇದರಿಂದ ದೂರ. ಸಮುದ್ರವೂ, ಬೆಟ್ಟವೂ ಆವೃತವಾದ ಪ್ರದೇಶದಲ್ಲಿನ ಗಣೇಶನ ಸಿದ್ಧಿಯಿಂದ ಆರ್ಥಿಕ ವಿಚಾರ ಬಲಪಡಿಸಿಕೊಳ್ಳಬಲ್ಲಿರಿ. ಹಗರಣಗಳಿರದ ನಿಮ್ಮ ಆಡಳಿತ ಪ್ರಶಂಸೆಯ ವಿಷಯ. ನೇಪಾಳದ ವಿಚಾರ ಪಾಕಿಸ್ತಾನಕ್ಕಿಂತಲೂ ಹೆಚ್ಚಿನ ತಲೆನೋವು ತರಲಿದೆ. ಕರೊನಾವನ್ನು ಶತಾಯಗತಾಯ ಗೆಲ್ಲುತ್ತೀರಿ. ಅತಿವೃಷ್ಟಿ, ಭೂಕಂಪ, ಚಂಡಮಾರುತಗಳು ಭಾರತವನ್ನು ಆಗಸ್ಟ್​ನಿಂದ, ನವೆಂಬರ್ ತನಕ ಹೆಚ್ಚು ಕಾಡಲಿದೆ. ಅಮಿತ್ ಷಾ ಆರೋಗ್ಯದಲ್ಲಿ ಎಚ್ಚರ ಬೇಕು. ರಾಹುಲ್ ಗಾಂಧಿಯವರಿಗೆ ಕೂಡ ಶನಿ ಗ್ರಹ ಅನುಕೂಲಕರ. ರಾಹುದೋಷ ನಿವಾರಣೆಗೆ ವಾಗ್ರೂಪಿಯಾದ ಶಾರದೆಯನ್ನು ಆರಾಧಿಸಬೇಕು. ಬಿಹಾರದಲ್ಲಿ ರಾಜಕೀಯ ಅಸ್ಥಿರತೆ, ಮಹಾರಾಷ್ಟ್ರದಲ್ಲೂ ರಾಜಕೀಯ ಸ್ಥಿತ್ಯಂತರಗಳು ನಿರೀಕ್ಷಿತ. ಮಮತಾ ಬ್ಯಾನರ್ಜಿಯವರಿಗೆ ಬಿಕ್ಕಟ್ಟುಗಳಿವೆ. ಮಹಾಘಟಬಂಧನದ ಸಂಪನ್ನತೆಗಾಗಿ ಬಯಸುತ್ತಿರುವ ನಾಯಕರು ಒಂದಾಗುವ ವಿಚಾರ ಬಲಯುತವಾಗಿದೆ. ಕರೊನಾ ಮತ್ತು ಆರ್ಥಿಕ ಹಿನ್ನಡೆ (ಮೋದಿಯವರ ಬಲವಾದ ಹೆಜ್ಜೆಗಳ ಕಾರಣದಿಂದಾಗಿ) ನಿಯಂತ್ರಣಕ್ಕೆ ಸಿಗುವ ಚಿತ್ರ ಸ್ಪಷ್ಟ. ದೇಶದ್ರೋಹಿಗಳನ್ನು ನಿಷ್ಕರುಣೆಯಿಂದ ನಿಯಂತ್ರಿಸಲೇಬೇಕು. ಧರ್ಮ(ಜಾತಿ) ಅಹಂಕಾರವಾಗಬಾರದು. ಶನಿ, ಶುಕ್ರ, ಗುರು ಗ್ರಹಗಳ ಕಾರಣದಿಂದ ಪ್ರಧಾನಿಯವರು ಇದನ್ನು ಸಾಧಿಸಿ ತೋರಿಸುವ ಶಕ್ತಿ ಪಡೆಯುತ್ತಾರೆ.

    ಕರ್ನಾಟಕಕ್ಕೆ ಮಿಶ್ರಫಲ

    ಹವಾಮಾನ, ಪ್ರಾಕೃತಿಕ ವೈಪರೀತ್ಯಗಳು ಈ ವರ್ಷವೂ ಮೇದಿಂದ ಡಿಸೆಂಬರ್​ವರೆಗೂ ಕರ್ನಾಟಕವನ್ನು ಕಾಡಲಿವೆ. ಯಡಿಯೂರಪ್ಪನವರಿಗೆ ಆಂತರಿಕ ಶತ್ರುಗಳ ಜತೆಗೆ, ಪಕ್ಷವನ್ನೂ ಮೀರಿದ ಅನ್ಯ ವಿಚಾರಗಳು ವರ್ತಮಾನದಲ್ಲಿ ಬಾಧೆ ತರಲಿದೆ. ಆದರೆ ಭದ್ರಕಾಳಿಯ ಆರಾಧನೆಯಿಂದ ಕುತ್ತಿನ ಸಂದರ್ಭವನ್ನು ದಾಟಿ ಪಾರಾಗುತ್ತಾರೆ. ಕಾಂಗ್ರೆಸ್ ವರಿಷ್ಠರು ಮೌನದಿಂದಲೂ, ಮಾತುಗಳಿಂದಲೂ ಶಕ್ತಿ ಸಂಚಯನವಾಗಲು ಶುದ್ಧ ಜ್ಞಾನೈಕಮೂರ್ತಿಯಾದ ದಕ್ಷಿಣಾಮೂರ್ತಿಯನ್ನು ಆರಾಧಿಸಬೇಕು. ಕರ್ನಾಟಕದ ಮೂವರು ಪ್ರಧಾನ ರಾಜಕೀಯ ನಾಯಕರು ಅಪ್ರಸ್ತುತರಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಶೃಂಗೇರಿ ಶಾರದೆಯ ದಿವ್ಯಾನುಗ್ರಹ ಲಭ್ಯವಾಗುವ ಅಪರೂಪದ ಶುಕ್ರ ಗ್ರಹ ಶಕ್ತಿ ಜಾಗೃತವಾಗಲಿದೆ. ಕರ್ನಾಟಕದ ಬಿಜೆಪಿ ತನ್ನ ಭಾರಕ್ಕೇ ತಾನು ಬಿಕ್ಕಳಿಕೆ ತಂದುಕೊಳ್ಳದಂತೆ ಅಖಿಲ ಭಾರತ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕಾರ್ಯೋನ್ಮುಖರಾಗಬೇಕು.

    ಜಗದ ಅಂಗಳದ ಸಂತೋಷ-ದುಃಖಗಳೇನು?

    ಯುದ್ಧ ಇದ್ದೇ ಇದೆ. ನೀರು ಯುದ್ಧದ ಬೆಂಕಿಗಾಗಿನ ಉರುವಲಾಗಲಿದೆ. ಬೆಂಕಿಯನ್ನು ಆರಿಸಬೇಕಾದ ನೀರೇ ಬೆಂಕಿಯನ್ನು ಹೊತ್ತಿಸುತ್ತದೆ ಎಂದರೆ ಇದೊಂದು ವೈರುಧ್ಯವೇ. ಮುಚ್ಚಿಕೊಂಡ ಮುಖವನ್ನು ಇಡಿಯಾಗಿ ತೆರೆದಿಡುವುದು ಕಷ್ಟವಾಗುತ್ತದೆ. ಜಾಗತಿಕವಾದ ಆರ್ಥಿಕ ಸ್ಥಿತಿ ಕಂಗೆಟ್ಟಿರುವ ಈವರೆಗಿನ ವಿಚಾರ ಕೇವಲ ಖಜಿಟ ಟ್ಛ ಠಿಜಛಿ ಜ್ಚಿಛಿಚಿಛ್ಟಿಜ ಅಷ್ಟೇ. ಅಮೆರಿಕಾದ ಮಾತು ಕೇಳಿಸಿಕೊಳ್ಳಲಾರೆ ಎಂಬ ವಿಚಾರವನ್ನು ಯೂರೋಪ್ ತೋರಬಾರದ ಧೈರ್ಯವನ್ನು ತೋರುತ್ತದೆ. ಇದಕ್ಕೆ ಕಾರಣ ಕೇತು ಗ್ರಹದಿಂದ ಮೂರರಲ್ಲಿ ಒಗ್ಗೂಡಿರುವ ಶನಿ ಗುರುಗ್ರಹಗಳ ಅಸಹಜ ಸಂಯೋಜನೆ. ಹೀಗಾಗಿ ಚೀನಾ ಪ್ರಪಂಚದ ಮೇಲೆ ತನ್ನ ಹಿಡಿತವನ್ನು ಅವಶ್ಯಕತೆಗಿಂತ ಜಾಸ್ತಿಯೇ ಸಂವರ್ಧಿಸಲು ನೋಡುತ್ತದೆ. ಏಶಿಯಾದ ಕೆಲವು ರಾಷ್ಟ್ರಗಳನ್ನು ಬಿಟ್ಟರೆ ಬಹುತೇಕ ರಾಷ್ಟ್ರಗಳು ಚೀನಾದ ಧೋರಣೆಗಳ ವಿರುದ್ಧ ಧ್ವನಿ ಎತ್ತುತ್ತವೆ. ಬೈಡನ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿ, ಇನ್ನೇನು ಕೆಲ ದಿನಗಳಲ್ಲಿ ಅಧ್ಯಕ್ಷರಾಗಿ ಕಾರ್ಯನಿಯುಕ್ತರಾದರೂ ವೃಷಭದಲ್ಲಿನ ರಾಹು ಅವರ ಆರೋಗ್ಯದ ಮೇಲೆ ಬಾಧೆಗೆ ಕಾರಣನಾಗುತ್ತಲೇ ಇರುತ್ತಾನೆ. ಪಾಕಿಸ್ತಾನ ಒಳಜಗಳಗಳ ಕಾರಣದಿಂದ ತತ್ತರಿಸುತ್ತದಾದರೂ ಭಾರತದ ಮಗ್ಗುಲಿಗೆ ಚುಚ್ಚುವ ಮುಳ್ಳಾಗಿ ನಿಲ್ಲುತ್ತದೆ. ಮಕರದಿಂದ ಪಂಚಮದಲ್ಲಿ ಸ್ಥಿತ ರಾಹುವು ಬರುವ ನವೆಂಬರ್​ನ ಒಳಗೆ ಪಾಕಿಸ್ತಾನವನ್ನು ಅರಾಜಕತೆಯತ್ತ ತಳ್ಳಿಯೇ ತೀರುತ್ತದೆ. ರಶಿಯಾದ ನಿಲುವು ಬದಲಾವಣೆಯನ್ನು ತೋರುವ ವಿಚಾರಕ್ಕೆ ಮುಮ್ಮುಖವಾಗಿ ಬಲಿಷ್ಠ ನಾಯಕ ಪುತಿನ್ ಹಿಡಿತ ಕಳಕೊಳ್ಳಬಹುದು. ಏಶಿಯಾ ಖಂಡವೂ, ಅಮೆರಿಕಾ ಖಂಡವೂ ಭೀಕರವಾದ ಭೂಕಂಪನದಿಂದ ತತ್ತರಿಸಲಿವೆ. ಒಳಿತಿಗೆ ಬೇಕಾದ ಹದವಾದ ಮಳೆ ದುರ್ಲಭ. ಪ್ರವಾಹ ಭೀಕರತೆ ಚೀನಾವನ್ನು ಕಾಡಲಿರುವುದು ಸ್ಪಷ್ಟ. ಗುರುಗ್ರಹದ ಮುಮ್ಮುಖ, ವಕ್ರ, ಹಿಮ್ಮುಖ ಚಲನೆಗಳಿಂದಾಗಿ ಅಣುಯುದ್ಧದ ಭೀತಿ ಇರಾನ್ ದೇಶದ ಕಾರಣದಿಂದಾಗಿ ತಲೆದೋರುವ ವಿಚಾರ ಅಧಿಕ. ಚೀನಾ ಕೂಡಾ ಹಿನ್ನೆಲೆಯಲ್ಲಿ ಕಾರಸ್ಥಾನಕ್ಕೆ ಸಿದ್ಧ. ಬೆಂಕಿ ಅವಘಡ, ವೈರಾಣು (ಕರೊನಾ)ಗಳಿಂದಾಗಿ ಯೂರೋಪ್ ದಿಕ್ಕುಗೆಡಲಿದೆ. ಪ್ರಪಂಚವೇ 2020ರಲ್ಲಿ ಹಾಕಿಕೊಂಡ ಮುಸುಕನ್ನು ನವೆಂಬರ್ ತನಕ ಧೈರ್ಯದಿಂದ ತೆರೆದಿಡುವ ಕೆಲಸ ಕಷ್ಟವೇ ಆಗುತ್ತದೆ. ಯೂರೋಪ್, ಶ್ರೀಲಂಕಾದಲ್ಲಿ ಭಯೋತ್ಪಾದಕರ ದಾಳಿ ತೀವ್ರವಾಗಲಿದೆ. ಸೆಪ್ಟಂಬರಿನಲ್ಲಿ ಚೀನಾದ ಆರ್ಥಿಕ ಕುಸಿತ ದಟ್ಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts