More

    ನೀವು ಪ್ರತಿನಿತ್ಯ ಸರಿಯಾದ ಕ್ರಮದಲ್ಲಿ ನೀರು ಕುಡಿಯುತ್ತಿದ್ದೀರಾ? ತಿಳಿಯಬೇಕಿದ್ದರೆ ಈ ಮಾಹಿತಿ ಓದಿ…

    ನೀರು (Water) ಕುಡಿಯುವುದನ್ನು ಸರಿಯಾದ ಪ್ರಕಾರದಲ್ಲಿ ಸೇವಿಸದಿದ್ದರೆ, ಅದು ಇನ್ನೊಂದು ರೀತಿಯಲ್ಲಿ ಅಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ನಂಬುತ್ತೀರಾ? ಹೌದು ಇದು ಸತ್ಯ. ಕೆಲವರಂತೂ ಊಟದ ಪ್ರತಿ ತುತ್ತಿಗೂ ನೀರು ಗುಟುಕಿಸುತ್ತಾರೆ. ಇದಂತೂ ಅಕ್ಷಮ್ಯ ತಪ್ಪು ಕ್ರಮ. ನೀರು ಕುಡಿಯುವುದು (Drinking Water) ಹೆಚ್ಚು ಚಿಂತನೆಯ ಅಗತ್ಯವಿಲ್ಲದ ಸರಳ ಕೆಲಸದಂತೆ ತೋರುತ್ತದೆ. ಆದರೆ ವಿವಿಧ ಅಧ್ಯಯನಗಳು (Studies) ಮತ್ತು ಆಯರ್ವೇದದ ಪ್ರಕಾರ ಯಾವಾಗ? ಮತ್ತು ಹೇಗೆ? ನಾವು ನೀರು ಕುಡಿಯುತ್ತೇವೋ ಅದು ಆರೋಗ್ಯ (Health)ದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ನಾವಿಂದು ನೀರನ್ನು ಹೇಗೆ ಕುಡಿಯಬೇಕೆಂಬುದರ ಬಗ್ಗೆ ತಿಳಿದುಕೊಳ್ಳೋಣ.

    ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ಹೈಡ್ರೀಕರಿಸುವುದು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ದಿನಕ್ಕೆ ಶಿಫಾರಸು ಮಾಡಲಾದ ನೀರಿನ ಪ್ರಮಾಣವು 9-11 ಕಪ್‍ಗಳು. ಹಾಗಾಗಿ ನೀರು ನಮ್ಮ ದೇಹಕ್ಕೆ ನಿರಂತರವಾಗಿ ಅಗತ್ಯವಿರುವ ಪ್ರಮುಖ ವಿಷಯವಾಗಿದೆ.

    ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ (US Centers for Disease Control and Prevention) ಮಾರ್ಗಸೂಚಿಗಳ ಪ್ರಕಾರ ನಾವು ಕುಡಿಯುವ ನೀರು ದೇಹದ ನಿರ್ಜಲೀಕರಣ (Dehydration)ವನ್ನು ತಡೆಯುತ್ತದೆ. ಸರಿಯಾಗಿ ನೀರು ಕುಡಿಯದಿದ್ದರೆ, ಇದು ಅಸ್ಪಸ್ಟ ಚಿಂತನೆ, ಮನಸ್ಥಿತಿ ಬದಲಾವಣೆಗಳು, ದೇಹ ಅಧಿಕವಾಗಿ ಬಿಸಿಯಾಗುವುದು, ಮಲಬದ್ಧತೆ ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ನೀರಿನಲ್ಲಿ ಯಾವುದೇ ಕ್ಯಾಲರಿಗಳಲ್ಲಿದ ಕಾರಣ, ಇದು ದೇಹದ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಜತೆಗೆ ಸಿಹಿ ಚಹಾ ಅಥವಾ ಸೋಡಾಗಳ ಸೇವನೆಯಿಂದ ಸಿಗುವ ಕ್ಯಾಲರಿ (calorie) ಗಳನ್ನು ನೀರು ಕಡಿಮೆ ಮಾಡುತ್ತದೆ.

    ನೀರಿನಿಂದಾಗುವ ಅನುಕೂಲಗಳು
    * ನೀರು ದೇಹದ ಉಷ್ಣತೆಯನ್ನು ಕಾಪಾಡುತ್ತದೆ.
    * ಕೀಲುಗಳಿಗೆ ಕುಶನಿಂಗ್ ನೀಡುತ್ತದೆ. ಬೆನ್ನುಹುರಿ ಮತ್ತು ಇತರ ಸೂಕ್ಷ್ಮ ಅಂಗಾಶಗಳನ್ನು ರಕ್ಷಿಸುತ್ತದೆ.
    * ಮೂತ್ರವಿಸರ್ಜನೆ, ಬೆವರು ಮತ್ತು ಕರುಳಿನ ಚಲನೆಯ ಮೂಲಕ ದೇಹವನ್ನು ನಿರ್ವಿಷಗೊಳಿಸುತ್ತದೆ.

    ಸರಿಯಾದ ರೀತಿಯಲ್ಲಿ ನೀರು ಕುಡಿಯುವುದು ಹೇಗೆ?
    ಯಾವಾಗಲು ಉಗುರುಬೆಚ್ಚನೆಯ ನೀರು ಕುಡಿಯಬೇಕು: ಬೆಚ್ಚಗಿನನೀರು ಅಥವಾ ಬಿಸಿನೀರು ಅಂಗಾಂಶಗಳಲ್ಲಿ ಆಳವಾಗಿ ಹೀರಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದೆ. ಕೋಲ್ಡ್ ಅಥವಾ ತಣ್ಣನೆಯ ನೀರಿಗಿಂತ ಬಿಸಿನೀರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಂತೆ ಮಾಡುತ್ತದೆ. ತಣ್ಣನೆಯ ನೀರು ಆರೋಗ್ಯಕ್ಕೆ ಹಾನಿ ಉಂಟುಮಾಡುವುದಲ್ಲದೆ ಕೆಮ್ಮು ಅಥವಾ ಶೀತಕ್ಕೆ ಕಾರಣವಾಗಬಹುದು. ಜತೆಗೆ ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತದೆ. ಬೆಚ್ಚಗಿನ ಆಹಾರವು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ತಣ್ಣಗಿರುವ ಆಹಾರವು ಅದನ್ನು ತಡೆಯುತ್ತದೆ.

    ನೀರು ಕುಡಿಯುವಾಗ ಕುಳಿತುಕೊಳ್ಳಿ: ನಿಂತು ನೀರು ಕುಡಿಯುವುದು ದೇಹದ ದ್ರವಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ನಿಂತು ನೀರು ಕುಡಿದರೆ ದೇಹದಲ್ಲಿ ಅನಗತ್ಯ ಹೆಚ್ಚುವರಿ ದ್ರವವನ್ನು ಸಂಗ್ರಹಿಸಿದಂತಾಗುತ್ತದೆ. ಇದು ಸಾಮಾನ್ಯವಾಗಿ ಸಂಧಿವಾತಕ್ಕೆ ಕಾರಣವಾಗಬಹುದು. ಇದು ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುವುದಲ್ಲದೆ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.

    ನಿಧಾನವಾಗಿ ಕುಡಿಯಿರಿ: ಗುಟುಕು ಗುಟುಕಾಗಿ ನೀರನ್ನು ಕುಡಿಯುವುದರಿಂದ ದೇಹವು ಪೋಷಕಾಂಶಗಳು ಮತ್ತು ಖನಿಜಗಳನ್ನು ಚೆನ್ನಾಗಿ ಸಂಸ್ಕರಿಸಲು ಅನುವು ಮಾಡಿಕೊಡುತ್ತದೆ. ಇದು ಮೂತ್ರಪಿಂಡಗಳಿಗೆ ಎಲ್ಲ ದ್ರವಗಳನ್ನು ಪ್ರಕ್ರಿಯೆಗೊಳಿಸಲು ನೆರವು ನೀಡುತ್ತದೆ.

    ಕುದಿಸಿದ ನೀರಿನ ಸೇವೆನೆ ಒಳಿತು: ಚೆನ್ನಾಗಿ ಕುದಿಸಿ ಕೊಂಚ ತಣ್ಣಗಾದ ಬಳಿಕ ಅಂದರೆ ಬೆಚ್ಚಗಿನ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿಯೇ ಕುಡಿಯಬೇಕು. ಏಕೆಂದರೆ ಇದು ರಾತ್ರಿಯಲ್ಲಿ ಸಂಗ್ರಹವಾದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಜೀರ್ಣಾಂಗವನ್ನು ಸ್ವಚ್ಛಗೊಳಿಸುತ್ತದೆ. ಮುಂದಿನ ಕಾರ್ಯಕ್ಕೆ ಸಿದ್ಧಗೊಳಿಸುತ್ತದೆ. ಚಯಾಪಚಯವನ್ನು ಹೆಚ್ಚಿಸಿ, ತೂಕ ನಷ್ಟವನ್ನು ಉತ್ತೇಜಿಸುತ್ತದೆ.

    ತಿನ್ನುವಾಗ ನೀರನ್ನು ತಪ್ಪಿಸಿ: ಊಟ ಸೇವನೆಯ ಮಧ್ಯ ಮಧ್ಯ ನೀರು ಕುಡಿಯಬಾರದೆಂದು ಆಯುರ್ವೇದ ಪ್ರಬಲವಾಗಿ ಪ್ರತಿಪಾದಿಸುತ್ತದೆ. ಊಟದ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಮತ್ತು ನಂತರ ನೀವು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬಹುದು. ಆದರೆ ಊಟದ ಸಮಯದಲ್ಲಿ ಅಲ್ಲ. ಊಟದ ಮಧ್ಯೆ ಹೆಚ್ಚು ನೀರು ಕುಡಿದರೆ, ಇದು ಜೀರ್ಣಕಾರಿ ಆಮ್ಲಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಆಹಾರ ಸರಿಯಾಗಿ ಜೀರ್ಣವಾಗುವುದನ್ನು ಅಸ್ತವ್ಯಸ್ತಗೊಳಿಸುತ್ತದೆ. ನೀರು ಕುಡಿಯಲೇಬೇಕೆಂದರೆ ಊಟದ ಸಮಯದಲ್ಲಿ ಒಂದು ಸಿಪ್ ಅಥವಾ ಎರಡು ಸಿಪ್ ಗುಟುಕಿಸಬಹುದು.

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ತಲೆಯಿಂದ ಡಿಚ್ಚಿ ಹೊಡೆದು ಚಲಿಸುತ್ತಿದ್ದ ಬಸ್ಸಿನ​ ಗಾಜು ಪುಡಿ ಪುಡಿ ಮಾಡಿದ ಯುವಕ: ಭಯಾನಕ ವಿಡಿಯೋ ವೈರಲ್​!

    ಸಾನಿಯಾ ಮಿರ್ಜಾ-ಶೋಯಿಬ್​ ಮಲಿಕ್​ ಡಿವೋರ್ಸ್​ ವದಂತಿ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಾನಿಯಾ ಫ್ರೆಂಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts