More

    ಬಿಎಸ್​ವೈಗೆ ಡಿಕೆಶಿ ಸವಾಲು.. ಅದೂ 24 ಗಂಟೆ ಗಡುವು ವಿಧಿಸಿ!

    ಬೆಂಗಳೂರು: ಆಡಳಿತ ವೈಫಲ್ಯ, ಕಳಪೆ ನಾಯಕತ್ವದ ಪರಿಣಾಮ ದೇಶದಲ್ಲಿ ಪ್ರತಿಯೊಬ್ಬರ ಬದುಕಿಗೆ ಕುತ್ತು ತಂದಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಕರೊನಾ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಯಾರಿಗಾದರೂ ಬಿಎಸ್​ವೈ ಸರ್ಕಾರ ಘೋಷಿಸಿದ ಪರಿಹಾರ ತಲುಪಿದೆಯೇ? 24 ತಾಸು ಗಡುವು ನೀಡುತ್ತೇವೆ, ಫಲಾನುಭವಿಗಳಿಗೆ ಒಂದೇ ಒಂದು ರೂಪಾಯಿ ತಲುಪಿದ್ದರೆ ತಿಳಿಸಬೇಕು ಎಂದು ಮುಖ್ಯಮಂತ್ರಿಗೆ ಸವಾಲು ಹಾಕಿದರು.

    ಇದನ್ನೂ ಓದಿರಿ ನಗರ ಸಂಚಾರಕ್ಕೆ ಬರುವೆ.. ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ; ಬಿಎಸ್​ವೈ

    ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಮಾನ್ಯ ಮುಖ್ಯಮಂತ್ರಿಗಳೇ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ನೀವು ಪರಿಹಾರ ಘೋಷಿಸಿ ತಿಂಗಳಾಗುತ್ತ ಬಂದಿದೆ. ಈವರೆಗೆ ಯಾರಿಗಾದರೂ ಒಂದು ರೂಪಾಯಿ ತಲುಪಿದೆಯಾ? 24 ಗಂಟೆ ಕಾಲಾವಕಾಶ ನೀಡುತ್ತೇನೆ. ಯಾರಿಗೆ ಅದರ ಲಾಭ ಸಿಕ್ಕಿದೆ ನೀವೇ ಹೇಳಿ ಎಂದು ಆಗ್ರಹಿಸಿದರು.

    ಯಾವ ರೈತರಿಗೆ ಮಾರುಕಟ್ಟೆ ಕಲ್ಪಿಸಿದ್ದೀರಿ. ಎಷ್ಟು ಬೆಳೆ ಮಾರಾಟವಾಗಿ ರೈತರಿಗೆ ದುಡ್ಡು ಸಿಕ್ಕಿದೆ ಅಂತಾ ಪಟ್ಟಿ ನೀಡಬೇಕು. ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರನ್ನು ಅಸ್ಪೃಶ್ಯರಂತೆ ಕಂಡರು. ಕ್ಷೌರಿಕರು, ಆಟೋ, ಕ್ಯಾಬ್ ಚಾಲಕರು, ಮಡಿವಾಳರು ಸೇರಿ ಅನೇಕರ ಜೀವನ ಬೀದಿಗೆ ಬಿದ್ದಿದೆ. ಅವರಲ್ಲಿ ಯಾರಿಗೆ ಪರಿಹಾರ ಸಿಕ್ಕಿದೆ ಹೇಳಿ ಎಂದು ಒತ್ತಾಯಿಸಿದರು.

    ಇದನ್ನೂ ಓದಿರಿ ದೇವಾಲಯಗಳಲ್ಲಿ ಶೀಘ್ರ ಭಕ್ತರಿಗೆ ಪ್ರವೇಶ; ಮುಂಜಾಗ್ರತಾ ಕ್ರಮಗಳ ಪಟ್ಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆ

    ಕರೊನಾ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ತಜ್ಞರನ್ನಾಗಲಿ, ಪ್ರತಿಪಕ್ಷಗಳನ್ನಾಗಲಿ ಸಂಪರ್ಕಿಸಿ ಸಲಹೆ ತೆಗೆದುಕೊಳ್ಳಲಿಲ್ಲ. ಸಲಹೆ ತೆಗೆದುಕೊಳ್ಳುವುದು ನಿಮಗೆ ಪ್ರತಿಷ್ಠೆಯ ವಿಚಾರವಾಯಿತು. ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದರೂ ಅಗತ್ಯ ಕ್ರಮ ಕೈಗೊಳ್ಳಲು ನಿಮ್ಮಿಂದ ಸಾಧ್ಯವಾಗಲಿಲ್ಲ ಎಂದು ಆಕ್ರೋಶ ಹೊರಹಾಕಿದ ಡಿಕೆಶಿ, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆಯೇ ಹೊರತು ಅಭಿವೃದ್ಧಿ ರಾಜಕಾರಣವಲ್ಲ ಎಂದು ಆರೋಪಿಸಿದರು.

    2020ನೇ ವರ್ಷ ದೇಶಕ್ಕೆ ಮಾರಕವಾಗಿದೆ. ಪ್ರಾಕೃತಿಕವಾಗಿ ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವವರೂ ಈ ಮಾರಕಕ್ಕೆ ಕಾರಣ ಎಂದು ಟೀಕಿಸಿದರು.

    ಇದನ್ನೂ ಓದಿರಿ ಕ್ವಾರಂಟೈನ್​ ಕೇಂದ್ರದಲ್ಲಿ ಕಾಂಡೋಮ್ ರಾಶಿ!

    ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕುಸಿದರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿಲ್ಲ. ಇದರ ಲಾಭ ಕೇವಲ ಸರ್ಕಾರ ಪಡೆಯುತ್ತಿದೆ. ಎಲ್ಲ ವಲಯಗಳೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ. ನಿರುದ್ಯೋಗ ಸಮಸ್ಯೆ ತಲೆದೋರಿದ್ದು, ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಮೋದಿ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಒತ್ತಡ ಹೇರುವ ಮೂಲಕ ವಿದೇಶಿ ಕಂಪನಿಗಳ ಕೈಗೆ ರೈತರ ಜುಟ್ಟು ನೀಡುವ ಕುತಂತ್ರ ನಡೆಸಿದೆ. ಮುಂದಿನ ಕೆಲ ವರ್ಷಗಳ ಕಾಲ ಕಾರ್ಮಿಕ ಕಾಯ್ದೆ ರದ್ದು ಮಾಡಿ ಅವರನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

    ಇದನ್ನೂ ಓದಿರಿ ನಾಳೆ ಲಾಕ್​ಡೌನ್​ ಇರಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts