More

    VIDEO: ಮಿಚೆಲ್ ಸ್ಟಾರ್ಕ್ – ರಸೆಲ್ ಹಣಾಹಣಿಯಲ್ಲಿ ಗೆದ್ದ ಆಸೀಸ್

    ಗ್ರಾಸ್ ಐಲೆಟ್: ಟಿ20 ಕ್ರಿಕೆಟ್‌ನ ದೈತ್ಯ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಆಂಡ್ರೆ ರಸೆಲ್‌ಗೆ (24*ರನ್, 13 ಎಸೆತ, 3 ಸಿಕ್ಸರ್) ಕಡೇ ಓವರ್‌ಗಳಲ್ಲಿ ಸತತ 5 ಡಾಟ್ ಎಸೆದು, ಅಂತಿಮ ಎಸೆತದಲ್ಲಿ ಸಿಕ್ಸರ್ ಬಿಟ್ಟುಕೊಟ್ಟರೂ ವೇಗಿ ಮಿಚೆಲ್ ಸ್ಟಾರ್ಕ್ 4ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ವೆಸ್ಟ್ ಇಂಡೀಸ್ ವಿರುದ್ಧ 4 ರನ್ ಗೆಲುವು ತಂದುಕೊಟ್ಟರು. ವಿಂಡೀಸ್ ತಂಡಕ್ಕೆ ಕಡೇ ಓವರ್‌ನಲ್ಲಿ ಜಯ ದಾಖಲಿಸಲು 11 ರನ್ ಅವಶ್ಯಕತೆ ಇತ್ತು. ಹ್ಯಾಟ್ರಿಕ್ ಸೋಲಿನಿಂದ ಸರಣಿಯಲ್ಲಿ ವೈಟ್‌ವಾಷ್ ಭೀತಿಯಲ್ಲಿದ್ದ ಪ್ರವಾಸಿ ಆಸೀಸ್, 5 ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು 1-3ಕ್ಕೆ ಇಳಿಸಿಕೊಂಡಿತು.

    ಇದನ್ನೂ ಓದಿ: VIDEO: ಕೌಂಟಿ ಕ್ರಿಕೆಟ್‌ನಲ್ಲಿ ಆರ್.ಅಶ್ವಿನ್ ಮಿಂಚಿಂಗ್, ಇಂಗ್ಲೆಂಡ್ ಸರಣಿಗೂ ಮುನ್ನ ಭರ್ಜರಿ ತಾಲೀಮು..!, 

    ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ಮಿಚೆಲ್ ಮಾರ್ಷ್ (75ರನ್, 44 ಎಸೆತ, 4 ಬೌಂಡರಿ, 6 ಸಿಕ್ಸರ್) ಹಾಗೂ ಆರನ್ ಫಿಂಚ್ (53ರನ್, 37 ಎಸೆತ, 5 ಬೌಂಡರಿ, 3 ಸಿಕ್ಸರ್) 2ನೇ ವಿಕೆಟ್‌ಗೆ 114 ರನ್ ಜತೆಯಾಟದ ಫಲವಾಗಿ 6 ವಿಕೆಟ್‌ಗೆ 189 ರನ್ ಪೇರಿಸಿದರೆ, ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡ ಕಡೆ ಹಂತದವರೆಗೂ ಹೋರಾಡಿದರೂ 6 ವಿಕೆಟ್‌ಗೆ 185 ರನ್ ಗಳಿಸಿ ಜಯದ ನಗೆ ಬೀರಿತು.

    ಇದನ್ನೂ ಓದಿ: VIDEO: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳ ಉತ್ತೇಜನಕ್ಕೆ ಸಿದ್ಧವಾಗಿದೆ ರೆಹಮಾನ್ ಹಾಡು, 

    ಆಸ್ಟ್ರೇಲಿಯಾ: 6 ವಿಕೆಟ್‌ಗೆ 189 (ಮಿಚೆಲ್ ಮಾರ್ಷ್ 75, ಆರನ್ ಫಿಂಚ್ 53, ಡೇನಿಯಲ್ ಕ್ರಿಶ್ಚಿಯನ್ 22*, ಹೇಡನ್ ವಾಲ್ಶ್ 27ಕ್ಕೆ 3), ವೆಸ್ಟ್ ಇಂಡೀಸ್: 6 ವಿಕೆಟ್‌ಗೆ 185 (ಲೆಂಡ್ಲೆ ಸಿಮ್ಮನ್ಸ್ 72, ಎವಿನ್ ಲೆವಿಸ್ 31, ಫ್ಯಾಬಿಯನ್ ಅಲೆನ್ 29, ಮಿಚೆಲ್ ಮಾರ್ಷ್ 24ಕ್ಕೆ 3, ಆಡಂ ಜಂಪಾ 20ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts