More

    VIDEO: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳ ಉತ್ತೇಜನಕ್ಕೆ ಸಿದ್ಧವಾಗಿದೆ ರೆಹಮಾನ್ ಹಾಡು

    ನವದೆಹಲಿ: ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ‘ಚಿಯರ್ 4 ಇಂಡಿಯಾ’ ಹೆಸರಿನ ಹಾಡನ್ನು ಬುಧವಾರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬಿಡುಗಡೆ ಮಾಡಿದರು. ಆಸ್ಕರ್, ಗ್ರಾೃಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ. ಆರ್. ರೆಹಮಾನ್ ಸಂಗೀತ ನೀಡಿದ್ದು, ಯುವ ಗಾಯಕಿ ಅನನ್ಯಾ ಬಿರ್ಲಾ ಹಾಡಿದ್ದಾರೆ. ‘ಚಿಯರ್ 4 ಇಂಡಿಯಾ; ಹಿಂದೂಸ್ತಾನಿ ವೇ’ ಎಂದು ಹಾಡಿಗೆ ಶೀರ್ಷಿಕೆ ನೀಡಲಾಗಿದೆ. ‘ದೇಶದ ಪ್ರತಿಯೊಬ್ಬ ನಾಗರೀಕರು ಈ ಹಾಡನ್ನು ಕೇಳಲೇ ಬೇಕು. ಈ ಮೂಲಕ ಕ್ರೀಡಾಪಟುಗಳ ಜತೆ ನಾವಿದ್ದೇವೆ ಎಂಬ ಸಂದೇಶ ಸಾರಬೇಕು‘ ಎಂದು ಠಾಕೂರ್ ಹೇಳಿದ್ದಾರೆ.

    ಇದನ್ನೂ ಓದಿ:1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶ್‌ಪಾಲ್ ಶರ್ಮ ಇನ್ನಿಲ್ಲ,

    ಅತ್ಯುತ್ತಮವಾದ ಹಾಡು ಸಂಯೋಜಿಸಿದ ರೆಹಮಾನ್ ಹಾಗೂ ಅನಾಯ ಬಿರ್ಲಾ ಅವರಿಗೆ ಧನ್ಯವಾದಗಳು ಎಂದು ಠಾಕೂರ್ ತಿಳಿಸಿದ್ದಾರೆ. ಕಳೆದ 18 ತಿಂಗಳ ಶ್ರಮದ ಲವಾಗಿ ಹಾಡು ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೀಂದರ್ ಬಾತ್ರ ತಿಳಿಸಿದ್ದಾರೆ. ಇದೇ ವೇಳೆ ರಾಜ್ಯ ಕ್ರೀಡಾ ಖಾತೆ ಸಚಿವ ನಿಶಿತ್ ಪ್ರಾಮಾಣಿಕೆ, ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್, ಸಾಯ್ ಡಿಜಿ ಸಂದೀಪ್ ಪ್ರಧಾನ್, ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts