More

  ಈ ರಾಶಿಯವರಿಗೆ ಕಳೆದು ಹೋದ ಶ್ರೀಮಂತಿಕೆ ಮತ್ತೆ ಬರುತ್ತದೆ: ವಾರಭವಿಷ್ಯ

  ಮೇಷ

  ಮೇಷ ರಾಶಿಯಲ್ಲಿ ಗುರು ಹಾಗೂ ರಾಹು ಇರುವುದರಿಂದ ಗುರು-ರಾಹು ಸಂಪರ್ಕದಲ್ಲಿ ಅನ್ಯರಿಂದ ಚುಚ್ಚುಮಾತು ಕೇಳುವ ಸಂದರ್ಭ. ಆದರೆ ಏಕಾದಶದಲ್ಲಿ ಶನಿ ಸಂಚಾರವಿರುವುದರಿಂದ ಮೌನದಲ್ಲಿದ್ದು ಕೆಲಸ ಮಾಡಿ ಜಯ ಪಡೆಯಬಹುದು. ಯಾರೊಂದಿಗೂ ಮಾತಿನ ಕಾಳಗ ಬೇಡ. ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ. ಶತ್ರುಗಳು ದೂರವಿರಲು ದತ್ತಾತ್ರೇಯನನ್ನು ಪೂಜಿಸಿ.

  ವೃಷಭ

  ದ್ವಾದಶದಲ್ಲಿ ಗುರು, ದಶಮದಲ್ಲಿ ಶನಿ ಇದ್ದು ದೈವಭಕ್ತಿ ಒಂದೇ ನಿಮನ್ನು ಕಾಪಾಡಿ ಕೈಹಿಡಿದು ನಡೆಸುತ್ತದೆ. ಗುರುವಿನಲ್ಲಿ ಅನಂತವಾದ ಪೂಜೆ ಪ್ರಾರ್ಥನೆ ಇರಿಸಿ. ಗ್ರಹಬಲ ಇಲ್ಲದಿದ್ದರೂ ನಿಮ್ಮ ಕೆಲಸಗಳನ್ನು ಮಾಡಿಸಿಕೊಟ್ಟು ದಡಕ್ಕೆ ಸೇರಿಸುವ ಗುರುವನ್ನು ಜನ್ಮ ಕೊಟ್ಟ ತಂದೆ ತಾಯಿಯನ್ನು ಅನನ್ಯವಾಗಿ ಪ್ರಾರ್ಥಿಸಿ, ಚಂಡಿಕಾ ಪ್ರಾರ್ಥನೆ ಮಾಡಿ ನೆಮ್ಮದಿ ಕಂಡುಕೊಳ್ಳಿ.

  ಮಿಥುನ

  ಏಕಾದಶದಲ್ಲಿ ಗುರು ಎತ್ತಲೋ ಇದ್ದ ಬಾಳನ್ನು ಕತ್ತಲಿಂದ ಹೊರಗೆ ತೆಗೆದು ಪುಟವಿಟ್ಟ ಚಿನ್ನದಂತೆ ಹೊಳಪು ತಂದು ಕಾಪಾಡುತ್ತಾನೆ. ಗುರು ಒಳ್ಳೆಯ ಸ್ಥಾನದಲ್ಲಿದ್ದು, ಯಾರೊಂದಿಗೂ ಕಲಹ ಬೇಡ. ವಿನಯದಿಂದ ವರ್ತಿಸಿ ಬಾಳನ್ನು ಸರಿಮಾಡಿಕೊಳ್ಳಿ. ಅನಂತಪದ್ಮನಾಭನ ವ್ರತ ಕಥೆ ಓದಿ. ಅನಂತಪದ್ಮನಾಭ ಅಷ್ಟೋತ್ತರ ಪಾರಾಯಣ ಮಾಡಿ.

  ಕಟಕ

  ಜೀವನವು ಬಂಗಾರದಂತಿರಬೇಕು; ಬಂಗಾರದ ಒಡವೆ ಹಾಕಿ ಶ್ರೀಮಂತಿಕೆ ತೋರಿಸುವುದಲ್ಲ. ನೊಂದವರಿಗೆ ಕೈಲಾದ ಸಹಾಯ ಮಾಡಬೇಕು. ಕಟಕ ರಾಶಿಯವರಿಗೆ ಯಾವ ಬಲವೂ ಬೇಕಿಲ್ಲ. ಅದು ಚಂದ್ರನ ಅಧಿಪತ್ಯವಿರುವ ಮನೆ. ದತ್ತನನ್ನು ಧ್ಯಾನಿಸಿ. ಈಶ್ವರನ ಪೂಜೆ ಮಾಡಿ. ಆಯಸ್ಸು ಆರೋಗ್ಯ ವೃದ್ಧಿಯಾಗುತ್ತದೆ.

  ಸಿಂಹ

  ಮಹಾಬಲೇಶ್ವರನ ಬಲವೇ ಪ್ರಪಂಚದ ಸೃಷ್ಟಿ ಸ್ಥಿತಿ ಲಯಕ್ಕೆ ಕಾರಣವಾಗಿ ಮನುಷ್ಯನಿಗೆ ಸುಖ ನೀಡುವ ತ್ರಿಮೂರ್ತಿ ಸ್ವರೂಪದಲ್ಲಿದ್ದಾನೆ ದತ್ತಾತ್ರೇಯ. ಗುರುಬಲ ಬಂದರೆ ಆನೆಬಲ ಬಂದಂತೆ. ಕೈಲಾದ ಉಪಕಾರ ಮಾಡಿದರೆ ಸದಾ ಕಾಲ ಗುರುಬಲ ಇರುತ್ತದೆ. ಆದಿತ್ಯ ಹೃದಯ ಪಾರಾಯಣ ಮಾಡಿ ಸುಬ್ರಹ್ಮಣ್ಯನನ್ನು ನಿತ್ಯವೂ ಪೂಜಿಸಿ. ಸಮಯವು ಚೆನ್ನಾಗಿದೆ.

  ಕನ್ಯಾ

  ಗುರುಬಲವು ತಪ್ಪಿದೆ. ಆದರೆ ಶನಿಬಲವಿದೆ. ಮಾತಿನಲ್ಲಿ ಒರಟುತನ ಸಾಧಿಸಿ ಅನ್ಯರಿಗೆ ಹಿಂಸೆ ಕೊಡುವುದು ಒಲಿದು ಬರುತ್ತದೆ. ಶನಿಯ ಪ್ರಾರ್ಥನೆ ಇರಲಿ. ಸೋಮವಾರ ಸಾಂಬಸದಾಶಿವನನ್ನು ಪೂಜಿಸಿದರೆ ಕಷ್ಟಗಳನ್ನು ಕಳೆಯುತ್ತಾನೆ. ಅಷ್ಟಮ ಗುರು ನಿಮ್ಮ ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಲು ಹೇಳಿದ್ದಾನೆ.

  ತುಲಾ

  ಸಪ್ತಮದಲ್ಲಿ ಗುರು ಬಂದು ಸಪ್ತ ಸುಖಗಳನ್ನು ತಂದಿದ್ದಾನೆ. ಬಿಟ್ಟವರಿಗೆ ಬುದ್ಧಿ ಕಲಿಸಿ, ಕೆಟ್ಟದ್ದನ್ನು ನಾಶ ಮಾಡಿ, ಕಟ್ಟಿಕೊಂಡವರನ್ನು ಬಿಡದಂತೆ ಗುರುವು ನೋಡಿಕೊಳ್ಳುತ್ತಾನೆ. ಕಾಲಾಯ ತಸ್ಮೈ ನಮಃ ಎಂಬಂತೆ ಕಾಲವೇ ಬುದ್ಧಿ ಹೇಳಿ ನಿಮ್ಮ ಹತ್ತಿರ ಬರುವಂತೆ ಮಾಡುತ್ತದೆ. ದುರ್ಗಾಷ್ಟೋತ್ತರ ಪಾರಾಯಣ ಮಾಡಿ. ಶುಕ್ರವಾರ ಸಾಯಂಕಾಲದಲ್ಲಿ ಲಲಿತಾ ಸಹಸ್ರನಾಮ ಪಠಿಸಿ.

  ವೃಶ್ಚಿಕ

  ಇದ್ದಾಗ ಬರುವವರು ಇಲ್ಲವೆಂದಾಗ ಯಾವ ರಕ್ತ ಸಂಬಂಧಿಗಳೂ, ಸ್ನೇಹಿತರೂ ಬರುವುದಿಲ್ಲ. ಪರಮಾತ್ಮನು ನಾನಾ ಸ್ವರೂಪದಲ್ಲಿ ಬಂದು ನಿಮಗೆ ಸಹಾಯ ಮಾಡಲು ಕಾಣಿಸಿಕೊಳ್ಳುತ್ತಾನೆ; ನಿಮ್ಮ ಕಷ್ಟಗಳನ್ನು ನೀಗುತ್ತಾನೆ. ಗುರು-ಶನಿ ಗ್ರಹಗಳ ಪ್ರೀತ್ಯರ್ಥ ದುರ್ಗಾಷ್ಟೋತ್ತರ ಪಠಿಸಿ. ಸುಬ್ರಹ್ಮಣ್ಯನನ್ನು ಅನಂತವಾಗಿ ಪೂಜಿಸಿ. ಕಳೆದು ಹೋದ ಶ್ರೀಮಂತಿಕೆ ಮತ್ತೆ ಬರುತ್ತದೆ.

  ಧನು

  ಧನುರಾಶಿಯವರಿಗೆ ಜಯಕ್ಕೆ ಒಂದೇ ಮೆಟ್ಟಿಲು. ಪಂಚಮಕ್ಕೆ ಗುರು ಬಂದಿದ್ದು ತೃತೀಯದಲ್ಲಿ ಶನಿ ಇದ್ದಾನೆ. ದೇವರು ಕೊಟ್ಟಿದ್ದನ್ನು ಹಂಚಿಕೊಂಡು ತಿನ್ನಬೇಕು. ಅನ್ಯರ ಕಷ್ಟಗಳನ್ನು ನೀಗಿಸುವ ಕಾಲ. ನಿಮ್ಮನ್ನು ಸುತ್ತಲಿನವರು ಕೊಂಡಾಡಿ ಪ್ರಸಿದ್ಧಿಗೊಳಿಸುವುದರಲ್ಲಿ ಸಂದೇಹವಿಲ್ಲ. ದತ್ತಾತ್ರೇಯ ಚರಿತ್ರೆ ಪಾರಾಯಣ ಮಾಡಿ.

  ಮಕರ

  ಮಕರ ರಾಶಿಯವರಿಗೆ ಶನಿಯು ದ್ವಿತೀಯದಲ್ಲಿದ್ದು ನಿಮ್ಮ ಪಾಪಗಳನ್ನು ಲೆಕ್ಕ ಹಾಕಿ ಫಲವನ್ನು ಕೊಡುವ ಕಾಲ. ಲೆಕ್ಕ ಪರಿಶೋಧಕರ ಹಾಗೆ ಪರಮಾತ್ಮನು ನಿಮ್ಮ ಪಾಪ-ಪುಣ್ಯದ ಲೆಕ್ಕವನ್ನು ಬರೆಯುತ್ತಿದ್ದಾನೆ. ಶನಿಯನ್ನು ಪ್ರಾರ್ಥಿಸಿ. ಗುರು ಚತುರ್ಥದಲ್ಲಿದ್ದಾನೆ. ದತ್ತಾತ್ರೇಯ ಚರಿತ್ರೆಯನ್ನು ಪ್ರತಿನಿತ್ಯ ಒಂದು ಅಧ್ಯಾಯದಂತೆ ಪಾರಾಯಣ ಮಾಡಿದರೆ ಸಂಕಷ್ಟಗಳು ದೂರವಾಗಿ ಜೀವನವು ಸುಖವಾಗಿ ಸಾಗುತ್ತದೆ.

  ಕುಂಭ

  ಕುಂಭ ರಾಶಿಯವರಿಗೆ ಶನಿಯು ಜನ್ಮದಲ್ಲಿದ್ದು ಗುರುವು ರಾಹುವಿನ ಸಂಪರ್ಕದಲ್ಲಿದ್ದು ಎರಡು ಗ್ರಹಗಳು ಅತ್ಯುತ್ತಮ ಫಲ ಕೊಡದಿದ್ದರೂ ಗುರುವೊಬ್ಬನೇ ಗುರಿ ಮುಟ್ಟಿಸಬಲ್ಲನು. ದೈವಮಾಯೆಯು ನಿಮ್ಮನ್ನು ರಕ್ಷಿಸುತ್ತದೆ. ಗುರು ದತ್ತಾತ್ರೇಯ ಚರಿತ್ರೆಯ 5ನೇ ಅಧ್ಯಾಯವನ್ನು ನಿತ್ಯವೂ ಪಾರಾಯಣ ಮಾಡಿ. ನಿಮ್ಮ ಅಭೀಷ್ಟಗಳು ನಡೆದು ಸಂಕಟ ಪರಿಹಾರವಾಗುತ್ತದೆ.

  ಮೀನ

  ಮೀನ ರಾಶಿಯವರಿಗೆ ಶನಿ ಸಂಚಾರ ಆರಂಭವಾಗಿದ್ದರೂ ದ್ವಿತೀಯದಲ್ಲಿ ಗುರುವಿರುವುದು ಶುಭಾಂಶವೆಂದು ತಿಳಿಯಬೇಕು. ಗುರು ರವಿ, ರಾಹು ಮೇಷದಲ್ಲಿ ಇರುವುದರಿಂದ ಸೂರ್ಯ ಅಷ್ಟೋತ್ತರ ಪಠಿಸಿ. ಗುರುವಿಗೆ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ, ಕಡಲೆಬೇಳೆ ದಾನ ಮಾಡಿ. ನಾಗರಾಜ ಅಷ್ಟೋತ್ತರ ಪಠಿಸಿ. ನಿಮ್ಮ ಕಾರ್ಯವು ಸಿದ್ಧಿಸುತ್ತದೆ.

  ಮತ್ತೆ ಬಂದ ‘ಹುಲಿಯಾ’; 50ಕ್ಕೂ ಹೆಚ್ಚು ಸೆಲೆಬ್ರಿಟಿಗಳ ಸಾಥ್

  ವಿಮಾನದಿಂದ ಇಳಿದ ಈಕೆಯ ಬಳಿ ಇದ್ದವು 22 ಹಾವುಗಳು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts