More

    2024ರ ಟಿ-20 ವಿಶ್ವಕಪ್​ಗೆ ರಾಯಭಾರಿಯಾಗಿ ಯುವರಾಜ್ ಸಿಂಗ್ ನೇಮಕ

    ನವದೆಹಲಿ: ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದು, ಈ ಬಾರಿ ನಡೆಯಲಿರುವ ಟಿ-20 ವಿಶ್ವಕಪ್​ನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಇದು ಅವರ ಅಪಾರ ಅಭಿಮಾನಿ ಬಳಗಕ್ಕೆ ಅತೀವ ಸಂತಸ ಉಂಟುಮಾಡಿದೆ.

    ಇದನ್ನೂ ಓದಿ: ಬೆಂ. ಗ್ರಾಮಾಂತರ ಮತದಾನ ಮುಕ್ತಾಯ

    ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್​ನ ಮಾಜಿ ಆಟಗಾರ, ಸ್ಪೋಟಕ ಬ್ಯಾಟ್ಸ್​ಮನ್​ ಕ್ರಿಸ್ ಗೇಲ್ ಮತ್ತು ಒಲಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಇಬ್ಬರು ಟಿ-20 ವಿಶ್ವಕಪ್ 2024ರ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದರು. ಇವರಿಬ್ಬರ ಬೆನ್ನಲ್ಲೇ ಇದೀಗ ಯುವರಾಜ್ ಸಿಂಗ್ ನೇಮಕಗೊಂಡಿದ್ದಾರೆ. ವಿಶ್ವಕಪ್​​ಗೆ ಸಂಬಂಧಿಸಿದಂತೆ ಮುಂಬರುವ ಎಲ್ಲಾ ಪ್ರಚಾರ ಕಾರ್ಯಕ್ರಮಗಳಲ್ಲಿ ಯುವಿ ಭಾಗವಹಿಸುವ ಹಿನ್ನೆಲೆ ಈ ಮಾಹಿತಿ ಇದೀಗ ಹೊರಬಿದ್ದಿದೆ.

    2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತ ಚೊಚ್ಚಲ ಟಿ-20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿತು. ಈ ಗೆಲುವಿನಲ್ಲಿ ಯುವರಾಜ್ ಪ್ರಮುಖ ಪಾತ್ರ ವಹಿಸಿದ್ದರು. ಅಂದು 6 ಪಂದ್ಯಗಳಲ್ಲಿ ಕೇವಲ 148 ರನ್ ಗಳಿಸಿದ್ದ ಯುವಿ, 194.74 ಸ್ಟ್ರೈಕ್ ರೇಟ್ ಅನ್ನು ಉಳಿಸಿಕೊಂಡಿದ್ದರು. ಎಡಗೈ ಬ್ಯಾಟ್ಸ್​ಮನ್ ಆಗಿ ಡರ್ಬನ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ಕಣಕ್ಕಿಳಿದಿದ್ದ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಓವರ್​ನಲ್ಲಿ ಆರು ಬಾಲ್​ಗಳಿಗೆ ಆರು ಸಿಕ್ಸರ್​ ಸಿಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದರು. (ಏಜೆನ್ಸೀಸ್). 

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    IPL 2024: RCB ವಿರುದ್ಧ ಸೋತರೂ ತಲೆತಗ್ಗಿಸದ ಸನ್‌ರೈಸರ್ಸ್! ಅದಕ್ಕೂ ಒಂದು ಕಾರಣವಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts