More

    ಈ ರಾಶಿಯವರ ಕಾರ್ಯ ವಹಿವಾಟುಗಳಲ್ಲಿ ಜಯ: ವಾರಭವಿಷ್ಯ

    ಈ ರಾಶಿಯವರ ಕಾರ್ಯ ವಹಿವಾಟುಗಳಲ್ಲಿ ಜಯ: ವಾರಭವಿಷ್ಯಮೇಷ

    ಮಕರ ರಾಶಿಯ ಸೂರ್ಯನ ಸಂಕ್ರಮಣವು ಜ. 14ರ ಶನಿವಾರ ರಾತ್ರಿ 2 ಗಂಟೆಗೆ ಪ್ರಾರಂಭವಾಗುತ್ತದೆ. ಹಬ್ಬದ ಆಚರಣೆ ಭಾನುವಾರ. ಸೂರ್ಯನು ಉತ್ತರಾಯಣದಲ್ಲಿ ಉಚ್ಚಕ್ಕೆ ಊರ್ಧ್ವಮುಖನಾಗಿ ಹೊರಟು ಮೇಷ ರಾಶಿಗೆ 10ನೇ ಮನೆಗೆ ಬಂದು ಶನಿಯ ಸಂಪರ್ಕದಲ್ಲಿ ಜ.17ರವರೆಗಿದ್ದು ರಾಷ್ಟ್ರೀಯವಾಗಿ ಕೆಲವು ಸಮಸ್ಯೆ ತರುತ್ತಾನೆ. ಶನಿಯು 17ರಂದು ಏಕಾದಶಕ್ಕೆ ಬಂದು ಉಚ್ಚ ಸ್ಥಾನಕ್ಕೆ ಕೊಂಡೊಯ್ಯಬೇಕಾದರೆ ಆಲಸ್ಯ, ಅಹಂಕಾರ ಬಿಡಬೇಕು.

    ವೃಷಭ

    9ರ ಸೂರ್ಯ ಶನಿ, ಆ ನಂತರದಲ್ಲಿ ಶನಿ ಕುಂಭ ರಾಶಿ ಪ್ರಯಾಣ. ದಶಮ ಸ್ವಕ್ಷೇತ್ರ ಶನಿ ಹಾನಿ ಮಾಡುವುದಿಲ್ಲ. ಗುರು ಬಲ ಮುಂದುವರಿದು ಕಾರ್ಯಸಾಧನೆಗೆ ಅನುಕೂಲ ಅನುಗ್ರಹ ಮಾಡುತ್ತಾನೆ. ಶತ್ರುಗಳಿಂದ ತೊಂದರೆ ಆಗುವ ಲಕ್ಷಣ. ಕೋಪ ಅದುಮಿತ್ತು ಮೌನ ತಾಳಿದರೆ ಅನುಕೂಲ. ಗುರುಚರಿತ್ರೆ ಪಾರಾಯಣ, ಶನಿ ಪ್ರಾರ್ಥನೆ ಇರಲಿ. ಎಳ್ಳು ಬೆಲ್ಲ ಕೊಟ್ಟು ಮನೋಸಂಕಲ್ಪ ಈಡೇರಿಸಿಕೊಳ್ಳಿ.

    ಮಿಥುನ

    ಅಷ್ಟಮ ಸೂರ್ಯ, ಅಷ್ಟಮ ಶನಿ ಇದ್ದು, ಅಷ್ಟಮಾರ್ಧ ಶನಿಯ ತೊಂದರೆ ನೀಗಿ ಒಂಬತ್ತರ ಸ್ವಂತ ಮನೆಯಲ್ಲಿ ಶುಭಫಲ ನೀಡುತ್ತಾನೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಸೂರ್ಯನಾರಾಯಣನನ್ನು ಪ್ರಾರ್ಥಿಸಿ. ಏಕಾದಶಕ್ಕೆ ಗುರು ಬರಲಿದ್ದಾನೆ. ನಿಮ್ಮ ಭವಿಷ್ಯವನ್ನೂ ಉಜ್ವಲವನ್ನಾಗಿ ನೀಡುತ್ತಾನೆ. ಗುರುವಿಗೆ ದತ್ತಾತ್ರೇಯ ಪ್ರಾರ್ಥನೆ, ಸಾಂಬಸದಾಶಿವ ಪೂಜೆ ಅತಿ ಮುಖ್ಯ.

    ಕಟಕ

    ಸಪ್ತಮದಲ್ಲಿ ಸೂರ್ಯ ಬಂದು ಜನವರಿ 17ರಿಂದ ಅಷ್ಟಮ ಶನಿ ಬರುತ್ತಾನೆ. ದೇವರು ಕೊಟ್ಟ ದೇಹ, ಮನಸ್ಸು ಶುದ್ಧವಾಗಿಟ್ಟುಕೊಂಡು ಜಾಗ್ರತೆ ವಹಿಸಿ ಕಾಪಾಡಿಕೊಳ್ಳಬೇಕು. ದೇಹ ಪ್ರಕೃತಿಗೆ ವಿರುದ್ಧವಾಗಿ ಕೆಲಸ ಮಾಡಬಾರದು. ಸುಂದರಕಾಂಡವನ್ನು ಪಾರಾಯಣ ಮಾಡಿದರೆ ನಕಾರಾತ್ಮಕ ಭಾವನೆ ಸಕಾರಾತ್ಮಕ ಆಗಿ ದೇವರು 9ರ ಗುರು ಬಲದಿಂದ ಕಾಪಾಡುತ್ತಾನೆ.

    ಸಿಂಹ

    ಜಗತ್ತಿಗೆ ಬೆಳಕನ್ನು ಕೊಡುವ ಸೂರ್ಯ ರಾಶಿಯಲ್ಲಿ ಜನಿಸಿದ ನೀವು ಬೆಳಕಿನಲ್ಲಿ ಕೆಲಸ ಮಾಡಿ ಬೆಳಕನ್ನು ಪಡೆಯುವ ಕಾಲವಿದು. ಖರ್ಚು, ಆದಾಯ ಲೆಕ್ಕ ಬೇಡ. ನಮ್ಮ ಲೆಕ್ಕ ಬರೆಯಲು ಚಿತ್ರಗುಪ್ತ ಇದ್ದಾನೆ. ಅದನ್ನು ಅವರಿಗೆ ಬಿಟ್ಟು ಸುಬ್ರಹ್ಮಣ್ಯ ಉಪಾಸನೆ ಮಾಡಿದರೆ, ಸಪ್ತ ಅಶ್ವಗಳಲ್ಲಿ ಹೊರಡುವ ಸೂರ್ಯ ನಿಮ್ಮನ್ನು ಹರಸುತ್ತಾನೆ.

    ಕನ್ಯಾ

    ಮಕರ ರಾಶಿಯಲ್ಲಿ ಸೂರ್ಯ ಚಲನೆ ಪ್ರಾರಂಭವಾಗಿ 2 ದಿನ ಮಾತ್ರ ಪಂಚಮ ಶನಿ ಇದ್ದು, ಷಷ್ಟ ಶನಿಯು ಬಲವನ್ನು, ಆನೆಯ ದಂತದಂತೆ ಬಾಳಿಗೆ ಮೆರುಗನ್ನು ನೀಡುತ್ತಾನೆ. ಸುಳ್ಳು ಆಡಬಾರದು. ಗುರುವು ಸಪ್ತಮದಲ್ಲಿ ಏಪ್ರಿಲ್​ವರೆಗೂ ಇದ್ದ್ದು ನಿಮ್ಮ ಜೀವನದೋಣಿಯನ್ನು ದಡ ಮುಟ್ಟಿಸುತ್ತಾನೆ. ಲಕ್ಷ್ಮಿನರಸಿಂಹನ ಪ್ರಾರ್ಥನೆಯಿಂದ ಮನೆಯಲ್ಲಿ ಮಂಗಳ ಕಾರ್ಯ ನಡೆಯುತ್ತದೆ.

    ತುಲಾ

    ತುಲಾ ರಾಶಿಯವರಿಗೆ ಶನಿ ಯಾವಾಗಲೂ ಉಚ್ಚವಾಗಿದ್ದು, ಉಚ್ಚ ಫಲ ಕೊಡುತ್ತಾನೆ. ಶನಿಯು ಸ್ವಕ್ಷೇತ್ರ ಪಂಚಮಕ್ಕೆ ಬಂದರೂ ಕೆಡುಕು ಉಂಟು ಮಾಡುವುದಿಲ್ಲ. ಆ ನಂತರದಲ್ಲಿ ಸಪ್ತಮಕ್ಕೆ ಗುರು ಬಂದು ಗುರು ಶನಿ ಎರಡೂ ಗ್ರಹಗಳು ನಿಮ್ಮ ಕಾರ್ಯ ವಹಿವಾಟುಗಳಲ್ಲಿ ಜಯ ಕೊಡುತ್ತಾರೆ. ಮನೆದೇವರ ಸಹಿತ ಶ್ರೀಶೈಲ ಮಲ್ಲಿಕಾರ್ಜುನನನ್ನು ಪ್ರಾರ್ಥಿಸಿ.

    ವೃಶ್ಚಿಕ

    ಸೂರ್ಯ ಪಥ ಮಕರಕ್ಕೆ ಬಂದರೆ ದಕ್ಷಿಣಾಯನ ಕಳೆದು ಉತ್ತರಾಯಣ ಆರಂಭವಾಗಿ ಭಾರತದ ಎಲಾ್ಲ ಜನಾಂಗದವರು ಮಂಗಳಕಾರ್ಯಗಳನ್ನು ನಡೆಸಬಹುದೆಂದು ತಿಳಿಸಿರುತ್ತಾರೆ. ದೇವತಾ ಕಾರ್ಯ, ಗೃಹ ನಿರ್ವಣ, ವ್ಯಾಪಾರ ಎಲ್ಲವೂ ಪ್ರಾರಂಭ ಆಗುವ ಸಮಯ. 3ನೇ ಮನೆಯಲ್ಲಿ ಇರುವ ಶನಿ ಬರುವುದರಿಂದ ಯಾರೊಂದಿಗೂ ತರ್ಕ ಮಾಡದೆ ಶಾಂತಿ ಗಳಿಸಿ. ಅಹೋಬಲ ನರಸಿಂಹನನ್ನು ಪ್ರಾರ್ಥಿಸಿ, ಪೂಜಿಸಿ.

    ಧನಸ್ಸು

    ಭಾನುವಾರದಿಂದ ಸೂರ್ಯ ಪಥ ಮುಂದೆ ಸಾಗಿ ಸೂರ್ಯ ನಿಮ್ಮ ಬಾಳಿನಲ್ಲಿ ಹೊಸ ಬೆಳಕನ್ನು ನೀಡುವ ಸಮಯ. ಜನವರಿ 17 ರಿಂದ ನೀವು ಸಂಭ್ರಮಿಸುವ ಕಾಲ. ಶತ್ರುಗಳು ದೂರವಾಗುತ್ತಾರೆ. ಶ್ರೀರಾಮ ಧ್ಯಾನ ಅತ್ಯಂತ ಶುಭ. ಅಧ್ಯಾತ್ಮ ರಾಮಾಯಣದ 3ನೇ ಸರ್ಗ ಓದಿದರೆ ಶುಭಫಲಗಳನ್ನು ಎಣಿಕೆ ಮಾಡುವುದು ಅಸಾಧ್ಯವಾಗುತ್ತದೆ. ಮಾತೃದೇವರನ್ನು ಪೂಜಿಸಿ.

    ಮಕರ

    ಜನ್ಮ ಶನಿ ದ್ವಿತೀಯಕ್ಕೆ ಬರುತ್ತಾನೆ. ಆದರೆ, ಸೂರ್ಯ ದ್ವಾದಶದಲ್ಲೂ ಇರುತ್ತಾನೆ. ಈ ಸಮಯದಲ್ಲಿ ನೀವು ಇನ್ನೂ 15 ದಿನಗಳು ಶರೀರವು ಅತಿ ಉಷ್ಣತೆಯಿಂದ ಬಳಲದಂತೆ ನೋಡಿಕೊಂಡು ಚರ್ಮ ರೋಗ ಅಥವಾ ಮಾನಸಿಕ ಒತ್ತಡಗಳು ಬಾರದಂತೆ ದೈವವನ್ನು ಪ್ರಾರ್ಥಿಸಿ. ಸ್ವಕ್ಷೇತ್ರ ಗುರು ಇರುವುದರಿಂದ ಕುಲದೇವರನ್ನು, ದತ್ತಾತ್ರೇಯನನ್ನು ಪೂಜಿಸಿ.

    ಕುಂಭ

    ದ್ವಾದಶ ಶನಿ ಜನ್ಮಕ್ಕೆ ಬಂದು ಕೆಲಸ ತಡವಾಗಬಹುದು. ತಾಳ್ಮೆ, ಜಾಣ್ಮೆ ಇರಲಿ. ಯಾವುದೇ ಸಂಕಟ ಬಂದರೂ ಉದ್ವೇಗಕ್ಕೆ ಒಳಗಾಗದೆ ಮೌನದಿಂದ ಕಾರ್ಯ ಸಾಧಿಸಿಕೊಳ್ಳಬಹುದು. 2ನೇ ಗುರು ನಿಮಗೆ ಶ್ರೀರಕ್ಷೆ ಆಗಿ ನೀವು ಮಾಡಿದ ಪುಣ್ಯ ಕಾಪಾಡುತ್ತದೆ. ದಕ್ಷಿಣಾಮೂರ್ತಿ ಸಹಿತ ಗುರುಪರಂಪರಾ ಸ್ತೋತ್ರ ಪಠಿಸಿ. ಕಠಿಣ ಕೆಲಸವೂ ಶುಭವಾಗಿ ಪರಿಣಮಿಸುವುದು.

    ಮೀನ

    ಸ್ವಕ್ಷೇತ್ರ ಗುರು ಇದ್ದು ದ್ವಾದಶಕ್ಕೆ ಶನಿ ಬಂದರೂ ಏಳೂವರೆ ವರ್ಷ ಶನಿ ಸಂಚಾರ ಇದ್ದು, ಏಕಾದಶದಲ್ಲಿ ಸೂರ್ಯ ಇರುತ್ತಾನೆ. ಲಾಭ, ಚುರುಕಾದ ಬುದ್ಧಿ ಕೊಟ್ಟು ಸಂತೋಷ ನೀಡುತ್ತಾನೆ. 12ರಲ್ಲಿ ಶನಿ ಇದ್ದರೂ ಜನ್ಮದಲ್ಲಿ ಇರುವ ಗುರುವೇ ನಿಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ. ಗುರುಚರಿತ್ರೆಯ 18ನೇ ಅಧ್ಯಾಯ ಪಾರಾಯಣ ಮಾಡಿ. ಬೇಕಾದಷ್ಟು ಧನ ಬರುತ್ತದೆ.

    ಟೈಟಲ್​ನಲ್ಲೇ ಎಳ್ಳು-ಬೆಲ್ಲ-ಕಬ್ಬು; ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರತಂಡದಿಂದ ಸಂಕ್ರಾಂತಿಗೆ ಡಿಫರೆಂಟ್ ವಿಷ್!

    ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ಥರ ಸಾವಿಗೀಡಾದ ಅವಳಿ ಸಹೋದರರು!; 900 ಕಿ.ಮೀ. ದೂರದಲ್ಲಿ ನಡೆಯಿತು ವಿಚಿತ್ರ ಘಟನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts