More

    ವೀಕೆಂಡ್​ ವಿಥ್​ ರಮೇಶ್​ನಲ್ಲಿ ಮತ್ತೆ ಚಾಲೆಂಜಿಂಗ್​ ಸ್ಟಾರ್​; ಹಾಟ್​ ಸೀಟ್​ನಲ್ಲಿ ದರ್ಶನ್​ ಯಾವಾಗ ಕೂರ್ತಾರೆ ಗೊತ್ತಾ?

    ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಧಾರಾವಾಹಿ ಏಪಿಸೋಡ್​ಗಳು ಮರುಪ್ರಸಾರ ಆರಂಭಿಸಿವೆ. ರಿಯಾಲಿಟಿ ಶೋಗಳೂ ಮತ್ತೆ ರಂಜಿಸುತ್ತಿವೆ. ಅದೇ ರೀತಿ ಜೀ ಕನ್ನಡ ವಾಹಿನಿಯ ಫೇಮಸ್​ ರಿಯಾಲಿಟಿ ಶೋಗಳಲ್ಲಿ ಒಂದಾದ ವೀಕೆಂಡ್​ ವಿಥ್​ ರಮೇಶ್​ ಮತ್ತೆ ತನ್ನ ವಿಶೇಷ ಕಂತುಗಳನ್ನು ಪ್ರಸಾರ ಮಾಡಲು ಪ್ಲಾನ್​ ಮಾಡಿದೆ. ಅದರಂತೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಏಪಿಸೋಡ್​ ಶನಿವಾರ ಮಧ್ಯಾಹ್ನ 1 ಗಂಟೆಗೆ ಮೊದಲಿಗೆ ಬಿತ್ತರವಾಗಲಿದೆ. ಭಾನುವಾರ ಮಧ್ಯಾಹ್ನ ನವರಸನಾಯಕ ಜಗ್ಗೇಶ್​ ಸಹ ಹಾಟ್​ ಸೀಟ್​ನಲ್ಲಿ ಕಾಣಿಸಿಕೊಳ್ಳಲಿದ್ದು, ನಟ ರಮೇಶ್​ ಅರವಿಂದ್​ ಅವರ ಸೊಗಸಾದ ನಿರೂಪಣೆಯನ್ನೂ ಸವಿಯಬಹುದಾಗಿದೆ.
    ಈಗಾಗಲೇ ಧಾರಾವಾಹಿಗಳಾದ ಜೊತೆಜೊತೆಯಲಿ, ಗಟ್ಟಿಮೇಳ, ಕಮಲಿ, ನಾಗಿಣಿ-2, ಪಾರು, ರಿಯಾಲಿಟಿ ಶೋಗಳಾದ ಸರಿಗಮಪ -15 ಮತ್ತು 17, ಡಾನ್ಸ್​ ಕರ್ನಾಟಕ ಡಾನ್ಸ್​, ಕಾಮಿಡಿ ಕಿಲಾಡಿಗಳು&-3, ಡ್ರಾಮಾ ಜೂನಿಯರ್ಸ್​, ಚೋಟಾ ಚಾಂಪಿಯನ್​ ಸಹ ಮರು ಪ್ರಸಾರವಾಗುತ್ತಿವೆ.

    ಅಲ್ಲು ಅರ್ಜುನ್​, ರಶ್ಮಿಕಾ ಹೊಸ ಚಿತ್ರಕ್ಕೆ ಪುಷ್ಪ ಟೈಟಲ್​; ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿದ್ಧವಾಗ್ತಿದೆ ಈ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts