More

    ರೈತ ನಿರ್ಧರಿಸಿದ ಬೆಲೆಗೆ ಬೆಳೆ ಖರೀದಿಸಲು ಮಾಜಿ ಶಾಸಕರ ನಿರ್ಧಾರ

    ಕಡೂರು: ತಾಲೂಕಿನ ವಿ.ಸಿದ್ದರಹಳ್ಳಿ ಮತ್ತು ಗೌಡನಕಟ್ಟೆಹಳ್ಳಿ ಭಾಗದ ರೈತರು ಬೆಳೆದ ಕಲ್ಲಂಗಡಿ ಮತ್ತು ಟೊಮ್ಯಾಟೊವನ್ನು ಖರೀದಿಸಿ ಪಟ್ಟಣದ ಬಡವರಿಗೆ ಉಚಿತವಾಗಿ ಹಂಚಲಾಗುವುದು ಎಂದು ಮಾಜಿ ಶಾಸಕ ವೈಎಸ್​ವಿ ದತ್ತ ತಿಳಿಸಿದರು.

    ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಜಮೀನುಗಳಿಗೆ ಭಾನುವಾರ ಖುದ್ದು ಭೇಟಿ ನೀಡಿ ರೈತರು ನಿರ್ಧರಿಸಿದ ಬೆಲೆಗೆ ಬೆಳೆ ಖರೀದಿ ಮಾಡಲಾಗುವುದು. 50 ದಿನಗಳಿಂದ ಲಾಕ್​ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ಹೂ, ತರಕಾರಿ, ಕಲ್ಲಂಗಡಿ ಹಾಗೂ ಟೊಮ್ಯಾಟೊ ಕೊಳ್ಳಲು ಖರೀದಿದಾರರಿಲ್ಲದೆ ರೈತ ಸಂಕಷ್ಟದಲ್ಲಿದ್ದಾನೆ. ಇವರ ನೆರವಿಗೆ ಶಕ್ಱಾನುಸಾರ ಪ್ರಯತ್ನಿಸುವೆ ಎಂದರು.

    ಮಾಜಿ ಪ್ರಧಾನಿ ದೇವೇಗೌಡ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಭೇಟಿ ಮಾಡಿ ರೈತರು ಬೆಳೆದ ಬೆಳೆಗಳನ್ನು ಹಾಪ್​ಕಾಮ್್ಸ ಮೂಲಕ ಖರೀದಿಸುವಂತೆ ಮನವಿ ಸಲ್ಲಿಸಿದ್ದಾರೆ. ವಿರೋಧ ಪಕ್ಷಗಳಿಂದ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

    ಉತ್ತಮ ಬೆಲೆ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಬೇಕಿದೆ. ಪಹಣಿಯಲ್ಲಿ ತೆಂಗು ಎಂದು ನಮೂದಾಗಿರುವ ಹಿನ್ನೆಲೆಯಲ್ಲಿ ರಾಗಿ ಬೆಳೆದವರಿಗೆ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ತೊಂದರೆಯಾಗುತ್ತಿದೆ. ಇವರ ಸಂಕಷ್ಟಕ್ಕೂ ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದರು.

    ಲಾಕ್​ಡೌನ್ ಪ್ರಾರಂಭದಲ್ಲಿ ವೈಯಕ್ತಿಕವಾಗಿ 70 ಸಾವಿರ ಮಾಸ್ಕ್ ಹಾಗೂ ಸಾವಿರಕ್ಕೂ ಅಧಿಕ ಪಡಿತರ ಕಿಟ್ ಜತೆಗೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಕಳಿಸಿದ ಕಿಟ್​ಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗಿದೆ ಎಂದರು.

    ಬಡತನ, ಹಸಿವು, ವಲಸೆ ಕಾರ್ವಿುಕರ ಸಮಸ್ಯೆಗೆ ಸರ್ಕಾರ ಉತ್ತಮ ಸ್ಪಂದನೆ ನೀಡಿದೆ. ಸರ್ಕಾರದ ನಿರ್ಧಾರಗಳಿಗೆ ಎಲ್ಲ ಪಕ್ಷಗಳೂ ಮೆಚ್ಚುಗೆ ವ್ಯಕ್ತಪಡಿಸಿವೆ. ಸರ್ಕಾರದ ಜತೆಗೆ ಜನಪರ ವ್ಯಕ್ತಿಗಳು, ಸಂಘ ಸಂಸ್ಥೆಗಳು, ವಿವಿಧ ಸಮಾಜಗಳು ಕೈಜೋಡಿಸುವ ಕೆಲಸ ಮಾಡಿವೆ. ಜೆಡಿಎಸ್ ಬದ್ಧತೆಯಿಂದ ಒಂದು ತಂಡವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts