More

    ಬೊಜ್ಜು ನಿವಾರಣೆಗೆ ಮೂರು ತಿಂಗಳ ಗಡುವು

    ಚಿತ್ರದುರ್ಗ: ಕೆಲಸದ ಒತ್ತಡ, ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಹಾಗೂ ವ್ಯಾಯಾಮವಿಲ್ಲದೇ ಇರುವುದು ಪೊಲೀಸರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್ ಹೇಳಿದರು.
    ನಗರದ ಡಿಎಆರ್ ಡಿವೈಎಸ್‌ಪಿ ಕಚೇರಿಯಲ್ಲಿ ಮಂಗಳವಾರ ಇಸ್ರೇಲ್ ಮೂಲದ ಹೈಗೇರ್ ಕಂಪನಿ ಸಹಯೋಗದಲ್ಲಿ ಪೊಲೀಸರ ದೈಹಿಕ ಕ್ಷಮತೆಗಾಗಿ ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ವ್ಯಾಯಾಮ ಉಪಕರಣಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
    ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಇಸ್ರೇಲ್‌ನ ಈ ಬಹುರಾಷ್ಟ್ರೀಯ ಕಂಪನಿ ಪರಿಕರಗಳನ್ನು ವಿತರಿಸಲಾಗಿದೆ. ಈಚೆಗೆ ಆರೋಗ್ಯ ತಪಾಸಣೆಗೆ ಒಳಗಾಗಿದ್ದ 134 ಅಧಿಕಾರಿ, ಸಿಬ್ಬಂದಿ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) 29 ಮೀರಿದೆ. ಅವರು ಅಧಿಕ ತೂಕ, ಸಕ್ಕರೆ ಕಾಯಿಲೆ, ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಪೈಕಿ 120 ಜನರಿಗೆ ಪರಿಕರ ವಿತರಿಸಲಾಗಿದೆ ಎಂದರು.
    ಉಪಕರಣಗಳನ್ನು ಬಳಸಿಕೊಂಡು ಮೂರು ತಿಂಗಳಲ್ಲಿ ಬೊಜ್ಜು ನಿವಾರಿಸಿಕೊಳ್ಳಬೇಕು. ನಿತ್ಯ ವ್ಯಾಯಾಮ ಮಾಡುತ್ತಾರೋ, ಇಲ್ಲವೋ ಎಂಬುದನ್ನು ನಾನೇ ಖುದ್ದು ಮೇಲ್ವಿಚಾರಣೆ ಮಾಡುತ್ತೇನೆ. ಮೂರು ತಿಂಗಳಲ್ಲಿ ಆರೋಗ್ಯ ಸುಧಾರಣೆಯಾದರೆ ಉಳಿದ 13 ಜನರಿಗೂ ಪರಿಕರ ಒದಗಿಸಲಾಗುವುದು. ಸಿಎಸ್‌ಆರ್ ಅನುದಾದಲ್ಲಿ ಇಲಾಖೆಯ ಇತರೆ ಅಧಿಕಾರಿ, ಸಿಬ್ಬಂದಿಗೂ ಉಚಿತವಾಗಿ ವಿತರಿಸಲು ಪ್ರಯತ್ನಿಸಲಾಗುವುದು ಎಂದರು.
    ಹೈಗೇರ್ ಕಂಪನಿ ನಿರ್ದೇಶಕ ಶರತ್ ದೇಶದಲ್ಲೇ ಮೊದಲ ಬಾರಿಗೆ ಚಿತ್ರದುರ್ಗದಲ್ಲಿ ಪ್ರಾಯೋಗಿಕವಾಗಿ ಈ ಕಾರ‌್ಯಕ್ರಮ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
    ಕಂಪನಿಯ ಶಿವಾನ್ ಮಾತನಾಡಿದರು. ಕೆ.ಎಚ್.ಶಾರದಾ, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಡಿಎಆರ್ ಡಿವೈಎಸ್‌ಪಿ ಗಣೇಶ್ ಮತ್ತಿತರ ಅಧಿಕಾರಿ, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts