More

    ನಡೆದುಕೊಂಡು ಮುಂಬೈನಿಂದ ಅಯೋಧ್ಯೆ ತಲುಪಿದ ಮುಸ್ಲಿಂ ಯುವತಿ; ​ಜ್ಞಾನವಾಪಿ ಸಂಕೀರ್ಣದಲ್ಲಿ ದೇವಾಲಯ ಬೆಂಬಲಿಸಿದ್ದೇಕೆ?

    ಅಯೋಧ್ಯೆ: ಕೋಟ್ಯಂತರ ಜನರು ಕಾತುರದಿಂದ ಕಾಯುತ್ತಿದ್ದ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯ ಸಂಪನ್ನಗೊಂಡಿದ್ದು, ಬಾಲರಾಮನ ದರ್ಶನ ಪಡೆಯಲು ಭಕ್ತರ ದಂಡೇ ಅಯೋಧ್ಯೆಗೆ ಹರಿದು ಬರುತ್ತಿದೆ. ಇದೀಗ ಪ್ರಾಣ ಪ್ರತಿಷ್ಠಾಪನೆಗೊಂಡ ಬಾಲರಾಮನ ದರ್ಶನ ಪಡೆಯಲು ಮುಂಬೈನಿಂದ ಅಯೋಧ್ಯೆಗೆ ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರು ಪಾದಯಾತ್ರೆ ನಡೆಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

    ಮಂಗಳವಾರ ಶಬನಮ್​ ಶೇಖ್​ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದಕ್ಕೂ ಮುನ್ನ 350 ಮುಸ್ಲಿಮರು ಲಖನೌನಿಂದ ಅಯೋಧ್ಯೆಗೆ ಪಾದಯಾತ್ರೆ ನಡೆಸಿ ಬಾಲರಾಮನಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದರು.

    ಈ ಕುರಿತು ಮಾತನಾಡಿರುವ ಶಬನಮ್​ ಶೇಖ್​, ನನಗೆ ಪಾದಯಾತ್ರೆ ನಡೆಸಿದ್ದು, ಸವಾಲಿನ ಕೆಲಸವಾಗಿರಲಿಲ್ಲ. ಪಾಕಿಸ್ತಾನ ಅಥವಾ ಇನ್ಯಾವುದೇ ಇಸ್ಲಾಮಿಕ್​ ದೇಶದಲ್ಲಿ ನಾನು ವಾಸಿಸುತ್ತಿದ್ದರೆ ಇದು ಸವಾಲಿನ ಕೆಲಸವಾಗುತ್ತಿತ್ತು. ಆದರೆ ನಾನು ಭಾರತದಲ್ಲಿ ವಾಸಿಸುತ್ತಿದ್ದೇನೆ. ನಾನು ಮಹಾರಾಷ್ಟ್ರ, ಮಧ್ಯ ಮೂರು ರಾಜ್ಯಗಳನ್ನು ದಾಟಿ ಅಯೋಧ್ಯೆಗೆ ಬಂದಿದ್ದೇನೆ. ಎಲ್ಲಾ ಮೂರು ರಾಜ್ಯಗಳ ಪೊಲೀಸರು ಮತ್ತು ಸರ್ಕಾರ ನನಗೆ ಸಹಾಯ ಮಾಡಿದೆ ಮತ್ತು ಬೆಂಬಲಿಸಿದೆ.

    ಇದನ್ನೂ ಓದಿ: ರಸ್ತೆ ಅಗಲೀಕರಣಕ್ಕಾಗಿ ಸ್ವಂತ ಮನೆಯನ್ನೇ ಕೆಡವಿ ಮಾದರಿಯಾದ ಬಿಜೆಪಿ ಶಾಸಕ

    ಭಗವಾನ್ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳುತ್ತಾರೆ. ಅವರಿಗೆ ಎಲ್ಲವೂ ಸಮಾನ. ಶ್ರೀರಾಮನ ಆರಾಧನೆಯು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ. ಜತೆಗೆ ಹೆಣ್ಣುಮಕ್ಕಳು ಕಾಲ್ನಡಿಗೆಯಲ್ಲಿ ಪ್ರಯಾಣಿಸುವಂತಿಲ್ಲ ಎಂಬ ಕಲ್ಪನೆಯನ್ನೂ ಮುರಿಯಬೇಕಿದೆ ಎಂದಿದ್ದಾರೆ.

    ವಾರಾಣಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಸಂಕೀರ್ಣದಲ್ಲಿರುವ ವ್ಯಾಸ್ ಜಿ ಅವರ ತೆಹ್ಖಾನಾದಲ್ಲಿ ನಿತ್ಯ ಪೂಜೆಗೆ ಅನುಮತಿ ನೀಡಿದ ಕುರಿತು ಪ್ರತಿಕ್ರಿಯಿಸಿದ ಶಬನಮ್​ ಶೇಖ್​, ಜ್ಞಾನವಾಪಿ ಸಂಕೀರ್ಣದಲ್ಲಿ ಭಗವಂತನಿದ್ದಾನೆ, ದೇವಾಲಯವಿದೆ ಎಂದು ತನಗೆ ಸದಾ ಅನಿಸುತ್ತಿತ್ತು, ಮಹಾದೇವನಿಲ್ಲದೆ ರಾಮರಾಜ್ಯ ಅಪೂರ್ಣ ಎಂದು ಶಬನಮ್​ ಶೇಖ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts