More

    VIDEO| ಪದ್ಮಾಸನ ಮಾಡಲು ಸುಲಭ ವಿಧಾನ ಇಲ್ಲಿದೆ, ನೋಡಿ!

    ಯೋಗಾಸನಗಳಲ್ಲಿ ಪ್ರಖ್ಯಾತವಾದ ಆಸನವೆಂದರೆ ಪದ್ಮಾಸನ. ಕಾಲಿನ ನರ, ಮಂಡಿ, ಬೆನ್ನು, ಸೊಂಟ ಮುಂತಾದ ಅಂಗಗಳಿಗೆ ಚೈತನ್ಯ ತುಂಬುವ ಈ ಆಸನ ಸರಳವಾದುದು. ಆದರೆ ಕಾಲಿನ ಬಿಗಿತದಿಂದ ಪದ್ಮಾಸನವನ್ನು ಮಾಡಲು ಕಷ್ಟವಾಗುವವರು, ಮೊದಲು ‘ಅರ್ಧ ಪದ್ಮಾಸನ’ ಮಾಡಿ ಸರಳ ವಿಧಾನದಲ್ಲಿ ಪದ್ಮಾಸನ ಕಲಿಯಬಹುದು.

    ಪ್ರಯೋಜನಗಳು: ಪದ್ಮಾಸನ ಮಾಡಿದರೆ ದೈವಿಕ ಮನೋಭಾವ ಮೂಡುತ್ತದೆ. ದೇಹದ ಶಕ್ತಿ ಕೇಂದ್ರಗಳನ್ನು ಜಾಗೃತಗೊಳಿಸಲು ಇದು ಸಹಕಾರಿ. ಮನಸ್ಸಿಗೆ ಶಾಂತಿ ಒದಗಿಸುತ್ತದೆ. ಧ್ಯಾನ ಮತ್ತು ಪ್ರಾಣಾಯಾಮ ಮಾಡಲು ಪದ್ಮಾಸನದ ಭಂಗಿ ಅತ್ಯಂತ ಸೂಕ್ತವಾದುದು. ಪದ್ಮಾಸನದ ನಿಯಮಿತ ಅಭ್ಯಾಸದಿಂದ ಕಾಲುಸೆಳೆತ, ಮಂಡಿನೋವು ಹತ್ತಿರ ಸುಳಿಯುವುದಿಲ್ಲ. ಕಾಲುಗಳ ನರ ಮತ್ತು ಮಂಡಿಗಳಿಗೆ ಹೊಸ ಹುರುಪು ಬರುತ್ತದೆ. ಹೊಟ್ಟೆ ಸಣ್ಣಗಾಗಿ ಶರೀರ ಸುಂದರವಾಗುತ್ತದೆ. ಬುದ್ಧಿ ಚುರುಕಾಗುತ್ತದೆ, ಏಕಾಗ್ರತೆ ಮೂಡುತ್ತದೆ. ಆತಂಕ, ಒತ್ತಡಗಳು ನಿಯಂತ್ರಣವಾಗುತ್ತವೆ. ಹೃದಯ ವಿಶಾಲವಾಗಿ ಅಹಂಭಾವ ಕಡಿಮೆಯಾಗುತ್ತದೆ.

    ಇದನ್ನೂ ಓದಿ: ಇನ್ನೂ 4 ದಿನ ಭಾರೀ ಮಳೆ ಮೂನ್ಸೂಚನೆ; ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

    ಅಭ್ಯಾಸ ಕ್ರಮ: ಪ್ರಥಮವಾಗಿ ಜಮಖಾನದ ಮೇಲೆ ದಂಡಾಸನದಲ್ಲಿ ಕುಳಿತು ಬಲಗಾಲನ್ನು ಮಡಿಸಿ ಎಡತೊಡೆಯ ಮೇಲಿಡಬೇಕು. ಸಾಮಾನ್ಯ ಉಸಿರಾಟ ನಡೆಸುತ್ತಿರಬೇಕು. ಇನ್ನೊಂದು ಕಾಲು ನೇರವಾಗಿದ್ದು, ಹೆಬ್ಬೆಟ್ಟು ಪಾಯಿಂಟ್​ ಆಗಿರಬೇಕು. ಕೈಗಳ ತೋರ್​​ಬೆರಳುಗಳನ್ನು ಹೆಬ್ಬೆರಳುಗಳಿಗೆ ಸ್ಪರ್ಶಿಸಿ ಚಿನ್ಮುದ್ರೆ ಧರಿಸಬೇಕು. ನಂತರ ಮಡಿಸಿದ ಕಾಲನ್ನು ಮೇಲಕ್ಕೆ ಕೆಳಕ್ಕೆ ಆಡಿಸಬೇಕು. ನಂತರ ಎಡಗಾಲನ್ನು ಬಲತೊಡೆಯ ಮೇಲಿರಿಸಿ ಪೂರ್ಣ ರೀತಿಯಲ್ಲಿ ಪದ್ಮಾಸನ ಮಾಡಬಹುದು. ಮತ್ತೆ ಕಾಲುಗಳನ್ನು ಬಿಡಿಸಿ ನೇರ ಮಾಡುವುದು. ಇದೇ ರೀತಿಯಲ್ಲಿ ಮತ್ತೊಂದು ಕಾಲಿಗೆ, ಅಂದರೆ ಮೊದಲು ಎಡಗಾಲನ್ನು ಬಲತೊಡೆಯ ಮೇಲೆ ಮಡಿಸಿ, ಅಭ್ಯಾಸ ಮಾಡುವುದು.

    ತುಂಬಾ ಮಂಡಿನೋವು, ಸೊಂಟ ನೋವು ಮತ್ತು ಕಾಲಿನ ಸೆಳೆತ ಇರುವವರು ಪದ್ಮಾಸನ ಮಾಡಬಾರದು.

    ರಾತ್ರಿ ವೇಳೆ ದೇವಾಲಯ ಹೊಕ್ಕು ಶೂಟಿಂಗ್! ಯೂಟ್ಯೂಬರ್​ಗೆ ಮತ್ತೆ ಎದುರಾಯ್ತು ಸಂಕಷ್ಟ

    ‘ಲಾಕ್​ಡೌನ್​ ಮಾಡಲು ಸಿದ್ಧ, ಆದರೆ…’ – ಸುಪ್ರೀಂ ಮುಂದೆ ದೆಹಲಿ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts