More

    ಮೋತಿ ತಲಾಬ್ ಬಳಿಯ ತ್ಯಾಜ್ಯ ವಿಲೇವಾರಿ

    ಸವಣೂರ: ಗಣೇಶ ವಿಸರ್ಜನೆಯ ಅಂಗವಾಗಿ ಪಟ್ಟಣದ ಮೋತಿ ತಲಾಬ್ (ದೊಡ್ಡಕೆರೆ) ದಂಡೆಯಲ್ಲಿ ಪುರಸಭೆ ಕಾರ್ಮಿಕರು ಗುರುವಾರ ವಿಶೇಷ ಸ್ವಚ್ಛತಾ ಶಿಬಿರ ಮೂಲಕ ತ್ಯಾಜ್ಯ ವಿಲೇವಾರಿಗೊಳಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಗಣೇಶ ಪ್ರತಿಷ್ಠಾಪನೆ ಮಂಡಳಿಗಳ ಪದಾಧಿಕಾರಿಗಳ ಅಪೇಕ್ಷೆಯಂತೆ ಗಣೇಶ ವಿಷರ್ಜನೆಯ ಸ್ಥಳದಲ್ಲಿ ಸ್ವಚ್ಛತೆ ಹಾಗೂ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತಿದೆ. ಗಣೇಶ ಪ್ರತಿಷ್ಠಾಪನೆ ಮಂಡಳಿಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ನಿಗದಿಪಡಿಸಿದ ಕೆರೆಯ ಸೂಕ್ತ ಸ್ಥಳದಲ್ಲಿ ಮಾತ್ರ ಗಣೇಶ ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.

    ಕೆರೆಯಲ್ಲಿ ನೀರು ಬಳಸುವ ಸಾರ್ವಜನಿಕರು ನಿತ್ಯ ಶುಚಿತ್ವ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಕೆರೆಯಲ್ಲಿ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಲಾಗುವುದು. ಬಟ್ಟೆ ತೊಳೆಯುವ ಮಹಿಳೆಯರು ಹೆಚ್ಚಿನ ಪ್ರಮಾಣದ ಬಟ್ಟೆಯನ್ನು ಕೆರೆಗೆ ಎಸೆಯುವುದು ಸಾಮಾನ್ಯವಾಗಿದೆ. ಆದ್ದರಿಂದ, ತ್ಯಾಜ್ಯ ಹೆಚ್ಚಿದೆ. ಕೆರೆಯಲ್ಲಿ ತ್ಯಾಜ್ಯ ಎಸೆಯುವವರ ಕುರಿತು ಸಾರ್ವಜನಿಕರು ಪುರಸಭೆಗೆ ಮಾಹಿತಿ ನೀಡಬೇಕು. ಇದರಿಂದ ಪುರಸಭೆ ವತಿಯಿಂದ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಹಕಾರವಾಗಲಿದೆ ಎಂದರು.

    ಆರೋಗ್ಯ ನಿರೀಕ್ಷಕ ಫಕೀರೇಶ ಬೂದಿಹಾಳ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾಗಪ್ಪ ಮೇಗಿಲಮನಿ, ಪೌರ ಕಾರ್ಮಿಕರಾದ ಮರಿಯಪ್ಪ ಮುಳಗುಂದ, ಚಂದ್ರಪ್ಪ ಮೈಲಮ್ಮನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts