More

    ಮುಂಬೈ ಘಟನೆಯಿಂದ ಭಾರತದ ಬಗ್ಗೆ ನಿಮ್ಮ ಗ್ರಹಿಕೆ ಬದಲಾಯಿತೇ? ವಿದೇಶಿ​ ಯುವತಿಯ ಉತ್ತರಕ್ಕೆ ಮೆಚ್ಚುಗೆ ಮಹಾಪೂರ

    ಮುಂಬೈ: ಲೈವ್​ ಸ್ಟ್ರೀಮಿಂಗ್​ ಮಾಡುವ ವೇಳೆ ದಕ್ಷಿಣ ಕೊರಿಯಾ ಮೂಲದ ಮಹಿಳಾ ಯೂಟ್ಯೂಬರ್​ಗೆ ಕಿರುಕುಳ ನೀಡಿದ ಯುವಕರಿಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಶೀಘ್ರ ಕ್ರಮ ಕೈಗೊಂಡ ಪೊಲೀಸರಿಗೆ ಯೂಟ್ಯೂಬರ್​ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ಮೊನ್ನೆ ರಾತ್ರಿ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

    ಇಂಡಿಯಾ ಟುಡೆ ಜತೆ ಮಾತನಾಡಿರುವ ಯೂಟ್ಯೂಬರ್ ಮ್ಹ್ಯೋಚಿ, ಹೋಟೆಲ್​ವರೆಗೂ ನನ್ನನ್ನು ಹಿಂಬಾಲಿಸಿಕೊಂಡು ಬಂದರು ಮತ್ತು ನನ್ನ ಮೊಬೈಲ್​​ ನಂಬರ್​ ಸಹ ಕೇಳಿದರು. ಅವರಿಗೆ ನಕಲಿ ನಂಬರ್​ ನೀಡಿ, ಆ ಪರಿಸ್ಥಿತಿಯಿಂದ ನಾನು ಎಸ್ಕೇಪ್​ ಆದೆ ಎಂದು ಹೇಳಿಕೊಂಡಿದ್ದಾರೆ.

    ಮೊನ್ನೆ (ನ.30) ರಾತ್ರಿ 11.50ರ ಸುಮಾರಿಗೆ ಈ ಘಟನೆ ನಡೆಯಿತು. ಮುಂಬೈನ ಖರ್​ ಏರಿಯಾದಲ್ಲಿರುವ ಹೋಟೆಲ್​ಗೆ ಯೂಟ್ಯೂಬರ್​ ಲೈಸ್ಟ್ರೀಮಿಂಗ್​ ಮಾಡುತ್ತಾ ತೆರಳುವಾಗ ಆರೋಪಿ ಯುವಕ ಮೊದಲು ಆಕೆಯ ಗಮನವನ್ನು ಸೆಳೆಯಲು ಐ ಲವ್​ ಯು ಎಂದಿದ್ದಾನೆ. ಅದನ್ನು ನಿರ್ಲಕ್ಷಿಸಿ ಆಕೆ ಅಲ್ಲಿಂದ ಹೊರಡುವಾಗ, ಒಬ್ಬ ನನ್ನ ಕೈಹಿಡಿದು ಎಳದು ಕಿರುಕುಳ ನೀಡಲು ಆರಂಭಿಸಿದ. ಲಿಫ್ಟ್​ ಮಾಡುವುದಾಗಿ ತನ್ನ ಸ್ಕೂಟರ್​ ಬಳಿ ಎಳೆದೊಯ್ದ. ನಾನು ನಿರಾಕರಿಸಿದಾಗ, ಆತ ನನ್ನ ಹೆಗಲ ಮೇಲೆ ಕೈ ಹಾಕಿ, ನನ್ನ ಕೆನ್ನೆಗೆ ಮುತ್ತು ಕೊಡಲು ಪ್ರಯತ್ನಿಸಿದ ಎಂದು ಯೂಟ್ಯೂಬರ್​ ಹೇಳಿದ್ದಾಳೆ. ಇದು ಆಕೆ ಲೈವ್​ ಸ್ಟ್ರೀಮಿಂಗ್​ ಮಾಡುತ್ತಿದ್ದ ಕ್ಯಾಮೆರಾದಲ್ಲೂ ಸೆರೆಯಾಗಿದ್ದು, ಇದೇ ವಿಡಿಯೋ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಆ ಪರಿಸ್ಥಿತಿಯಿಂದ ಎಸ್ಕೇಪ್​ ಆಗಲು ಸಾಕಷ್ಟು ಪ್ರಯತ್ನ ಮಾಡಿದೆ. ಅಲ್ಲಿಂದ ಹೋಗುವಾಗಲೂ ನನ್ನನ್ನು ಹಿಂಬಾಲಿಸಿಕೊಂಡು ಬಂದರು. ನನ್ನ ಮೊಬೈಲ್​ ನಂಬರ್​ ಕೇಳಿದರು. ಹತ್ತಿರದಲ್ಲೇ ನನ್ನ ಲೈವ್​ ಸ್ಟ್ರೀಮಿಂಗ್​ ನೋಡುತ್ತಿದ್ದ ವ್ಯಕ್ತಿಯೊಬ್ಬ ನೆರವು ನೀಡಲು ಧಾವಿಸಿದರು ಎಂದು ಹೇಳಿದ್ದಾರೆ.

    ಈ ಘಟನೆಯು ಭಾರತದ ಬಗ್ಗೆ ನಿಮ್ಮ ಗ್ರಹಿಕೆಯನ್ನು ಬದಲಾಯಿಸಿದೆಯೇ ಎಂದು ಪ್ರಶ್ನಿಸಿದಾಗ, ಭಾರತದಲ್ಲಿ ಮತ್ತು ಮುಂಬೈಗೆ ಇದು ನನ್ನ ಮೊದಲ ಭೇಟಿಯಾಗಿದೆ. ವಾಸ್ತವವಾಗಿ ನನಗೂ ಆ ಬಗ್ಗೆ ಬಹಳಷ್ಟು ಪ್ರಶ್ನೆಗಳಿವೆ. ನೀವು ಭಾರತದಲ್ಲಿ ಇರುವುದರಿಂದ ಇದನ್ನು ನೀವು ನಿರೀಕ್ಷಿಸಬಹುದು.ಏಕೆಂದರೆ, ಏಕಾಂಗಿ ಮಹಿಳಾ ಪ್ರಯಾಣಿಕರಿಗೆ ಇದು ಸುರಕ್ಷಿತ ಸ್ಥಳವಲ್ಲ ಎಂದು ಕೆಲವರು ಹೇಳಿದರು. ಆದರೆ ನಾನು ನಿಜವಾಗಿಯೂ ಹಾಗೆ ಯೋಚಿಸುವುದಿಲ್ಲ. ಏಕೆಂದರೆ, ಭಾರತ ಮಾತ್ರವಲ್ಲ ಜಗತ್ತಿನ ಯಾವ ಮೂಲೆಯಲ್ಲಿದಾರೂ ಇದು ಸಂಭವಿಸಬಹುದು. ಭಾರತಲ್ಲಿ ಇದ್ದಿದ್ದಕ್ಕೆ ಈ ರೀತಿ ಆಯಿತು ಎಂದು ಯೋಚಿಸಲು ಬಯಸುವುದಿಲ್ಲ. ಭಾರತದಲ್ಲಿ ನನ್ನ ಪ್ರಯಾಣದುದ್ದಕ್ಕೂ ನಾನು ಅನೇಕ ಅದ್ಭುತ ಜನರನ್ನು ಭೇಟಿ ಮಾಡಿದ್ದೇನೆ. ಇದು ಕೇವಲ ದುರದೃಷ್ಟಕರ ಘಟನೆಯಷ್ಟೇ ಎಂದು ಯೂಟ್ಯೂಬರ್ ಹೇಳಿದ್ದಾರೆ. ಅಲ್ಲದೆ, ಭಾರತವನ್ನು ತುಂಬಾ ಇಷ್ಟಪಡುವುದಾಗಿಯೂ ಮತ್ತು ಮತ್ತೆ ಭಾರತಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ.

    ಭಾರತದ ಯೂಟ್ಯೂಬರ್​ ಹಾಡಿರುವ ಮಾತುಗಳು ಆಕೆಯ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಆಕೆಯನ್ನು ನೆಟ್ಟಿಗರು ಕೊಂಡಾಡಿದ್ದು, ಮೆಚ್ಚುಗೆ ಮಹಾಪೂರವನ್ನೇ ಹರಿಸಿದ್ದಾರೆ. (ಏಜೆನ್ಸೀಸ್​)

    ಲೈವ್​ ಸ್ಟ್ರೀಮಿಂಗ್​ ವೇಳೆ ಕೊರಿಯಾ ಯುವತಿಗೆ ಕಿರುಕುಳ: ವಿಡಿಯೋ ವೈರಲ್​, ಯುವಕರಿಬ್ಬರ ಬಂಧನ

    ಮದ್ದೂರಿನಲ್ಲಿ ತಾಯಿ, ಮಕ್ಕಳು ಸಾವು ಪ್ರಕರಣ: ಗಂಡನ ಫೋನ್​ನಲ್ಲಿ ಬಯಲಾದ ರಹಸ್ಯವೇ ಈ ದುರಂತಕ್ಕೆ ಕಾರಣ

    ದೇವತೆಯ ಮುಖಕ್ಕೆ ಸಿಸಿಟಿವಿ ಅಳವಡಿಕೆ: ಡಿಎಂಕೆ ಸರ್ಕಾರದ ವಿರುದ್ಧ ಗುಡುಗಿದ ಅಣ್ಣಾಮಲೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts