ಲೈವ್​ ಸ್ಟ್ರೀಮಿಂಗ್​ ವೇಳೆ ಕೊರಿಯಾ ಯುವತಿಗೆ ಕಿರುಕುಳ: ವಿಡಿಯೋ ವೈರಲ್​, ಯುವಕರಿಬ್ಬರ ಬಂಧನ

ಮುಂಬೈ: ಲೈವ್​ ಸ್ಟ್ರೀಮಿಂಗ್​ ಮಾಡುವ ವೇಳೆ ದಕ್ಷಿಣ ಕೊರಿಯಾ ಮೂಲದ ಮಹಿಳಾ ಯೂಟ್ಯೂಬರ್​ಗೆ ಕಿರುಕುಳ ನೀಡಿದ ಯುವಕರಿಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕಳೆದ ರಾತ್ರಿ (ನ.30) ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಯುವಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಸಹ ವ್ಯಕ್ತವಾಗಿದೆ. ಮುಂಬೈ ಬೀದಿಯಲ್ಲಿ ಲೈವ್​ ಸ್ಟ್ರೀಮಿಂಗ್​ ಮಾಡುತ್ತಿದ್ದ ಕೊರಿಯಾ ಯುವತಿಯ ಬಳಿ ಬಂದ ಯುವಕನೊಬ್ಬ ಆಕೆ ವಿರೋಧಿಸಿದರೂ ಕೈಹಿಡಿದುಕೊಳ್ಳುತ್ತಾನೆ. ಬಳಿಕ ಬೈಕ್​ ಮೇಲೆ ಏರುವಂತೆ ಒತ್ತಾಯ … Continue reading ಲೈವ್​ ಸ್ಟ್ರೀಮಿಂಗ್​ ವೇಳೆ ಕೊರಿಯಾ ಯುವತಿಗೆ ಕಿರುಕುಳ: ವಿಡಿಯೋ ವೈರಲ್​, ಯುವಕರಿಬ್ಬರ ಬಂಧನ