More

    ದನ ಸಾಕುವವರಿಗೆ, ಮೇಯಲು ಬಿಡುವವರಿಗೆ ರೈಲ್ವೇ ಇಲಾಖೆಯಿಂದ ಎಚ್ಚರಿಕೆ; ಉಲ್ಲಂಘಿಸಿದರೆ ಕಠಿಣ ಕ್ರಮ!

    ನವದೆಹಲಿ: ರೈಲ್ವೆ ಹಳಿಗಳ ಸಮೀಪದ ಊರುಗಳಲ್ಲಿ ದನ ಸಾಕುವವರಿಗೆ ಹಾಗೂ ಹಳಿಗಳ ಬಳಿ ದನ ಮೇಯಲು ಬಿಡುವವರಿಗೆ ರೈಲ್ವೆ ಇಲಾಖೆ ಸೂಚನೆಯೊಂದನ್ನು ನೀಡಿದೆ. ಮಾತ್ರವಲ್ಲ, ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

    ಹೀಗೊಂದು ಎಚ್ಚರಿಕೆ ಸಂದೇಶವನ್ನು ಪಶ್ಚಿಮ ರೈಲ್ವೆ ನೀಡಿದ್ದು, ಜಾನುವಾರುಗಳನ್ನು ಸಾಕುವವರು ಹಾಗೂ ಅವುಗಳನ್ನು ಮೇಯಲು ಬಿಡುವವರಿಗೆ ಜಾನವಾರುಗಳನ್ನು ರೈಲ್ವೆ ಹಳಿಗಳ ಬಳಿಗೆ ಬರಲು ಬಿಡದಂತೆ ಸೂಚನೆ ನೀಡಲಾಗಿದೆ. ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

    ಇದನ್ನೂ ಓದಿ: ಎರಡನೇ ಸಲ ಅಪಘಾತಕ್ಕೆ ಒಳಗಾದ ವಂದೇ ಭಾರತ್ ಎಕ್ಸ್​​ಪ್ರೆಸ್​​; ಈ ಸಲ ದನಕ್ಕೆ ಡಿಕ್ಕಿ..

    ಜಾನುವಾರುಗಳ ಕಾರಣಕ್ಕೆ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಪದೇಪದೆ ಅಪಘಾತಕ್ಕೆ ಈಡಾಗುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಎಚ್ಚರಿಕೆಯನ್ನು ನೀಡಲಾಗಿದೆ. ಏಕೆಂದರೆ ಇಂದು ಕೂಡ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ದನಕರುಗಳಿಂದಾಗಿ ಅಪಘಾತಕ್ಕೀಡಾಗಿದೆ. ಮಾತ್ರವಲ್ಲ ಇದಕ್ಕೂ ಮೊದಲು ಕೆಲವು ದಿನಗಳ ಹಿಂದೆಯೂ ಎರಡು ಸಲ ಇದೇ ಥರದ ಅಪಘಾತ ಸಂಭವಿಸಿ, ರೈಲು ಹಾನಿಗೊಳಗಾಗಿತ್ತು. –ಏಜೆನ್ಸೀಸ್

    ಮತ್ತೆ ಅಪಘಾತಕ್ಕೀಡಾದ ವಂದೇ ಭಾರತ್ ಎಕ್ಸ್​ಪ್ರೆಸ್​

    ಕೆಎಂಎಫ್​ ರಾಯಭಾರಿ ಆಗಿದ್ದ ಪುನೀತ್​ಗೆ ವಿಶೇಷ ಗೌರವ; ಹಾಲಿನ ಪ್ರತಿ ಪ್ಯಾಕೆಟಲ್ಲೂ ಅಪ್ಪು ನಮನ..

    2022-23ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ವಿವರ..

    ಶಾಲಾ ಮಕ್ಕಳಿಗೆ ತಿಂಗಳಲ್ಲಿ ಒಂದು ದಿವಸ ಬ್ಯಾಗ್​ ಇಲ್ಲ; ಆ ದಿನ ಪೂರ್ತಿ ಶಾಲೆಯಲ್ಲಿ ಸಂಭ್ರಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts