More

    ಎರಡನೇ ಸಲ ಅಪಘಾತಕ್ಕೆ ಒಳಗಾದ ವಂದೇ ಭಾರತ್ ಎಕ್ಸ್​​ಪ್ರೆಸ್​​; ಈ ಸಲ ದನಕ್ಕೆ ಡಿಕ್ಕಿ..

    ಗುಜರಾತ್: ವಾರದ ಹಿಂದಷ್ಟೇ ಆರಂಭಗೊಂಡಿರುವ ವಂದೇ ಭಾರತ್ ಎಕ್ಸ್​ಪ್ರೆಸ್​ ಅಷ್ಟರಲ್ಲೇ ಎರಡು ಸಲ ಅವಘಡಕ್ಕೆ ಒಳಗಾಗಿದೆ. ಅದೃಷ್ಟವಶಾತ್ ಅಂಥ ಯಾವುದೇ ತೊಂದರೆ ಆಗದೆ, ಸಣ್ಣಪುಟ್ಟ ಸಮಸ್ಯೆಗಳೊಂದಿಗೆ ಪಾರಾಗಿದೆ.

    ಗುಜರಾತ್ ಮತ್ತು ಮುಂಬೈ ಸೆಂಟ್ರಲ್ ಮಧ್ಯೆ ಸಂಚರಿಸುವ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಅ.6ರಂದು ಬೆಳಗ್ಗೆ 11.15ರ ಸುಮಾರಿಗೆ ಅಪಘಾತಕ್ಕೀಡಾಗಿತ್ತು. ಎಮ್ಮೆಗಳ ಹಿಂಡು ರೈಲ್ವೇ ಹಳಿಯ ಮೇಲೆ ಅಡ್ಡ ಬಂದುದರಿಂದ ಈ ಅಪಘಾತ ಸಂಭವಿಸಿತ್ತು.

    ರೈಲು ಅತಿವೇಗದಲ್ಲಿ ಇಲ್ಲದ್ದರಿಂದ ದೊಡ್ಡಮಟ್ಟದ ಹಾನಿಯಾಗಿರಲಿಲ್ಲ. ರೈಲಿನ ಮುಂಭಾಕ್ಕೆ ಮಾತ್ರ ಹಾನಿಯಾಗಿತ್ತು. ಆ ಭಾಗವನ್ನು ಮುಂಬೈ ಸೆಂಟ್ರಲ್ ಡಿಪೋದಲ್ಲಿ ಸರಿಪಡಿಸಿ, ಅಪಘಾತವಾದ 24 ಗಂಟೆಯಲ್ಲಿ ಸಂಚಾರಕ್ಕೆ ಸಿದ್ಧವಾಗಿತ್ತು. ಆದರೆ ಮತ್ತೆ ಪುನಃ ಅಂಥದ್ದೇ ಅವಘಡಕ್ಕೆ ಒಳಗಾಗಿದೆ.

    ವಂದೇ ಭಾರತ್ ಎಕ್ಸ್​ಪ್ರೆಸ್​ ಶುಕ್ರವಾರ ಗುಜರಾತ್​ನ ಆನಂದ್ ಸ್ಟೇಷನ್ ಬಳಿ ದನಕ್ಕೆ ಡಿಕ್ಕಿ ಹೊಡೆದಿದೆ. ಈ ರೈಲಿನ ಮೂತಿಗೆ ಸಣ್ಣ ಹಾನಿ ಆಗಿದ್ದು, ದೊಡ್ಡ ಸಮಸ್ಯೆ ಏನೂ ಆಗಿಲ್ಲ.

    ಇದನ್ನೂ ಓದಿ: ವಂದೇ ಭಾರತ್​ ರೈಲಿನ ದುರಸ್ತಿ ಕಾರ್ಯ ಪೂರ್ಣ; 24 ಗಂಟೆಯಲ್ಲಿ ಓಡಾಟಕ್ಕೆ ಸಿದ್ಧವಾಯ್ತು ರೈಲು

    ಪ್ರಧಾನಿ ನರೇಂದ್ರ ಮೋದಿ ಸೆ.30ರಂದು ವಂದೇ ಭಾರತ್ ಎಕ್ಸ್​ಪ್ರೆಸ್​ಗೆ ಚಾಲನೆ ನೀಡಿದ್ದರು. ಈ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಜತೆಗೆ ಸುಧಾರಿತ ವೇಗವರ್ಧನೆ ಹಾಗೂ ಬ್ರೇಕಿಂಗ್ ಸಾಮರ್ಥ್ಯವನ್ನೂ ಒಳಗೊಂಡಿದೆ.

    ವಾಟ್ಸ್​ಆ್ಯಪ್​ ಬಳಕೆ ಅಪಾಯಕಾರಿಯೇ?; ಇಲ್ಲಿದೆ ಆತಂಕಕಾರಿ ಮಾಹಿತಿ!

    ಮತ್ತೆ ಟಿಪ್ಪು ಪರ ನಿಂತ ಸಿದ್ದರಾಮಯ್ಯ; ಸರ್ಕಾರದ ವಿರುದ್ಧ ಮಾಜಿ ಸಿಎಂ ಕಿಡಿ ಕಾರಲು ಕಾರಣವಿದು..

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts