More

    ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಆಸೀಸ್ ಕ್ರಿಕೆಟ್‌ನಲ್ಲಿ ತಲೆದಂಡಕ್ಕೆ ಸಿದ್ಧತೆ!

    ಬ್ರಿಸ್ಬೇನ್: ಭಾರತ ವಿರುದ್ಧ ತವರಿನಲ್ಲೇ ಅನುಭವಿಸಿದ ಸತತ 2ನೇ ಟೆಸ್ಟ್ ಸರಣಿ ಸೋಲಿಗೆ ಆಸ್ಟ್ರೇಲಿಯಾ ತಂಡದಲ್ಲಿ ಹಲವು ತಲೆದಂಡಗಳಾಗುವ ನಿರೀಕ್ಷೆ ಇದೆ. 2018-19ರ ಸರಣಿಯಲ್ಲಿ ಭಾರತ ವಿರುದ್ಧ ಸೋತಾಗ ಆಸ್ಟ್ರೇಲಿಯನ್ನರಿಗೆ, ಡೇವಿಡ್ ವಾರ್ನರ್-ಸ್ಟೀವನ್ ಸ್ಮಿತ್ ಇರಲಿಲ್ಲ ಎಂಬ ನೆಪ ಇತ್ತು. ಆದರೆ ಈ ಬಾರಿ ಪೂರ್ಣ ಪ್ರಮಾಣದ ತಂಡವನ್ನು ಕಣಕ್ಕಿಳಿಸಿ ಆಸೀಸ್ ಕೈಸುಟ್ಟುಕೊಂಡಿದೆ. ಇದೂ ಸಾಲದೆಂಬಂತೆ, ಪ್ರವಾಸಿ ಭಾರತ ತಂಡ ಈ ಬಾರಿ ಪ್ರಮುಖ ಆಟಗಾರರ ಗೈರಿನಲ್ಲೂ ಕೆಚ್ಚೆದೆಯ ನಿರ್ವಹಣೆ ತೋರಿರುವುದು ಆಸ್ಟ್ರೇಲಿಯನ್ನರು ವಿಶ್ವದೆದುರು ತಲೆತಗ್ಗಿಸುವಂತೆ ಮಾಡಿದೆ.

    ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಕೂಡ ಈ ಬಗ್ಗೆ ಭವಿಷ್ಯ ನುಡಿದಿದ್ದು, ಮುಂಬರುವ ದಿನಗಳಲ್ಲಿ ಹಲವು ತಲೆಗಳು ಉರುಳಬಹುದು ಎಂದಿದ್ದಾರೆ. ಆಸೀಸ್ ತಂಡದ ಕಾರ್ಯತಂತ್ರಗಳ ಬಗ್ಗೆಯೇ ವಾರ್ನ್ ಪ್ರಶ್ನೆ ಎತ್ತಿದ್ದು, ಬೌಲರ್‌ಗಳ ಸಹಿತ ತಂಡದ ಹಲವು ಆಟಗಾರರ ಸ್ಥಾನ ಪ್ರಶ್ನಾರ್ಹವಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಬ್ರಿಸ್ಬೇನ್ ಹೀರೋ ರಿಷಭ್ ಪಂತ್ ಈಗ ವಿಶ್ವ ನಂ. 1 ವಿಕೆಟ್​ ಕೀಪರ್-ಬ್ಯಾಟ್ಸ್‌ಮನ್

    ಟಿಮ್ ಪೇನ್ ನಾಯಕತ್ವವನ್ನೂ ಟೀಕಿಸಿರುವ ವಾರ್ನ್, ಅವರು ಸೋಲಿನ ಹೊಣೆಯನ್ನು ಹೊತ್ತುಕೊಳ್ಳಬೇಕೆಂದು ಹೇಳಿದ್ದಾರೆ. ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಕೂಡ, ಆಸೀಸ್ ತಂಡದ ‘ನಕಾರಾತ್ಮಕ’ ಮನೋಭಾವವನ್ನು ದೂರಿದ್ದು, ಆಕ್ರಮಣಕಾರಿಯಾಗಿ ಗೆಲುವಿನತ್ತ ಮುನ್ನುಗ್ಗುವ ಬದಲಾಗಿ, ಸೋಲಿನ ಭೀತಿಯಲ್ಲಿದ್ದಂತೆ ತಂಡ ಕಂಡುಬಂದಿತ್ತು ಎಂದಿದ್ದಾರೆ.

    ಆದರೆ ಅತ್ತ ಟಿಮ್ ಪೇನ್ ಸದ್ಯಕ್ಕೆ ನಾಯಕತ್ವ ಬಿಟ್ಟುಕೊಡಲು ಸಿದ್ಧರಾಗಿಲ್ಲ. ಭಾರತ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ ನಾಯಕತ್ವ ತ್ಯಜಿಸುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ್ದ ಪೇನ್, ನನ್ನ ಕೆಲಸವಿನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ನಾಯಕತ್ವದಲ್ಲಿ ಮುಂದುವರಿಯಲು ಬಯಸಿರುವೆ ಎಂದಿದ್ದರು.

    ಆಸೀಸ್‌ನಲ್ಲಿ ಭಾರತದ ದಿಗ್ವಿಜಯಕ್ಕೆ ಪಾಕ್ ಕ್ರಿಕೆಟಿಗರಿಂದಲೂ ಪ್ರಶಂಸೆ

    ತಂದೆಯಾದ ಬಳಿಕ ಬದಲಾಯಿತು ವಿರಾಟ್ ಕೊಹ್ಲಿ ಟ್ವಿಟರ್ ಬಯೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts