More

    ಮಗನ ಬಲಿ ಪಡೆದ ರಸ್ತೆ ಗುಂಡಿ ಮುಚ್ಚಿದ ವ್ಯಕ್ತಿಗೆ ಲಕ್ಷ್ಮಣ್ ಶ್ಲಾಘನೆ

    ಮುಂಬೈ: ಲಾಕ್‌ಡೌನ್‌ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, ಪ್ರತಿದಿನ ಒಂದಿಲ್ಲೊಂದು ವಿಷಯಗಳ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಅಲ್ಲದೆ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ಟ್ವಿಟರ್‌ನಲ್ಲಿ ಲಕ್ಷ್ಮಣ್ ಪ್ರಕಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಆರ್‌ಆರ್ ನಗರದ ತರಕಾರಿ ವ್ಯಾಪಾರಿಯ ಸಮಾಜ ಸೇವೆ ಕುರಿತು ತಿಳಿಸಿದ್ದ ಲಕ್ಷ್ಮಣ್, ಇದೀಗ ಮಗನ ಸಾವಿನ ದುಃಖದ ನಡುವೆಯೂ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಮುಂಬೈ ವ್ಯಕ್ತಿಯೊಬ್ಬರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ಇದನ್ನೂ ಓದಿ:ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ರೋಹಿತ್ ಶರ್ಮ ಅವರಂತೆ ಆಗಬೇಕಂತೆ!

    ಮುಂಬೈ ಮೂಲದ 45 ವರ್ಷದ ದಾದಾರಾವ್ ಬಿಲ್ಹೋರ್ ಅವರ 16 ಮಗ 2015ರ ಜುಲೈನಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರಿಂದ ಅಪಘಾತದಲ್ಲಿ ಮೃತಪಟ್ಟಿದ್ದರು. ಬಳಿಕ ರಸ್ತೆ ರಿಪೇರಿ ಮಾಡುವಂತೆ ಪದೆ ಪದೇ ಮುಂಬೈ ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ತನ್ನ ಸಂಕಷ್ಟ ಬೇರೆಯವರಿಗೆ ಬರಬಾರದು ಎಂದು ನಿರ್ಧರಿಸಿದ ದಾದಾರಾವ್, ಆ ಗುಂಡಿಗಳನ್ನು ತಾವೇ ಖುದ್ದಾಗಿ ಮುಚ್ಚಿದ್ದಾರೆ. ‘16 ವರ್ಷದ ಮಗನ ಸಾವಿನ ದುಃಖದ ನಡುವೆಯೂ ದಾದಾರಾವ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದು ಲಕ್ಷ್ಮಣ್ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ವಿಶ್ವ ನಂ. 1 ಟೆನಿಸ್ ತಾರೆ ಜೋಕೊವಿಕ್ ವಿಚ್ಛೇದನ?

    ಇದಕ್ಕೂ ಮೊದಲು ಮಾಜಿ ಕ್ರಿಕೆಟಿಗರ ಸಾಮಾಜಿಕ ಕಾರ್ಯಗಳಿಗೂ ಲಕ್ಷ್ಮಣ್ ಟ್ವಿಟರ್ ಮೂಲಕ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರು. ಲಕ್ಷ್ಮಣ್ 134 ಟೆಸ್ಟ್ ಪಂದ್ಯಗಳಿಂದ 8781 ರನ್ ಹಾಗೂ 86 ಏಕದಿನ ಪಂದ್ಯಗಳಿಂದ 2338 ರನ್ ಬಾರಿಸಿದ್ದಾರೆ. ವೀಕ್ಷಕ ವಿವರಣೆಗಾರಗಾಗಿ ಹಾಗೂ ಐಪಿಎಲ್ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಮೆಂಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

    ತರಬೇತಿ ಶಿಬಿರಕ್ಕೆ ಧೋನಿಗೆ ಸಿಗುವುದೇ ಛಾನ್ಸ್ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts