More

    ಮತದಾನ ಶೇ.10 ಹೆಚ್ಚಳ ಗುರಿ

    ನರೇಂದ್ರ ಎಸ್. ಮರಸಣಿಗೆ ಹೆಬ್ರಿ

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾಗಿದ್ದ ಉಡುಪಿ ಜಿಲ್ಲೆಯ 490 ಮತಗಟ್ಟೆಗಳನ್ನು ವಿಶೇಷವಾಗಿ ಮನದಲ್ಲಿಟ್ಟುಕೊಂಡು ಉಡುಪಿ ಜಿಪಂ ಮತದಾನದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಕೇನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

    ಜಿಲ್ಲಾಮಟ್ಟದಲ್ಲಿ ಶೇ.20ರಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದ್ದು, ಉಳಿದ ಶೇ.80 ಕಾರ್ಯಕ್ರಮಗಳನ್ನು ಕಡಿಮೆ ಮತದಾನವಾದ ಮತಕ್ಷೇತ್ರಗಳಲ್ಲಿ ನಡೆಸಲಾಗುವುದು. ಮತಗಟ್ಟೆಯ ಅಲಂಕಾರಕ್ಕಾಗಿ ಪೋಸ್ಟರ್ ಮೇಕಿಂಗ್, ವರ್ಲಿ ಆರ್ಟ್, ಯಕ್ಷಗಾನ, ಉಡುಪಿ ಸೀರೆ, ಪತ್ರಿಕೆ, ವಾಟ್ಸಾೃಪ್ ಮತದಾನ ಅರಿವಿನ ಗ್ರೂಪ್, ಕಾಲೇಜ್ ವಿದ್ಯಾರ್ಥಿಗಳಿಗೆ ಜಾಗೃತಿ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿದೆ.

    ಗಮನ ಸೆಳೆಯುವ ವರ್ಲಿ ಆರ್ಟ್

    ಜಿಲ್ಲೆಯ ವಿವಿಧೆಡೆ ವರ್ಲಿ ಆರ್ಟ್ ಮೂಲಕ ಚುನಾವಣಾ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಶಿವಪುರ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಕಮಲ್ ಅಹಮದ್ ಅವರ ನೇತೃತ್ವದಲ್ಲಿ ಶಿವಪುರ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ಹಾಗೂ ಇಬ್ಬರು ಸ್ಥಳೀಯ ವಿದ್ಯಾರ್ಥಿಗಳೊಂದಿಗೆ ಹೆಬ್ರಿ ತಾಲೂಕಿನ ಅನೇಕ ಮತಗಟ್ಟೆಗಳಲ್ಲಿ ಯಕ್ಷಗಾನ, ಉಡುಪಿ ಸೀರೆ, ವರ್ಲಿ ಆರ್ಟ್ ಸರ್ಕಾರಿ ಶಾಲೆ ಹಾಗೂ ಕಚೇರಿಗಳಲ್ಲಿ ರಚಿಸುತ್ತಿದ್ದಾರೆ. ಕಮಲ್ ಅಹ್ಮದ್ ಅವರ ಕೈಚಳಕ ಹಾಗೂ ವಿಶೇಷ ಆಸಕ್ತಿಯನ್ನು ಗಮನಿಸಿ ಉಡುಪಿ ಜಿಪಂ ಸಿಇಓ ಪ್ರಸನ್ನ ಕೊಂಡಾಡಿದ್ದಾರೆ.

    ಮತದಾನ ಜಾಗೃತಿ ಹೇಗೆ?

    ಸಂಜೀವಿನಿ ಸ್ವಸಹಾಯ ಗುಂಪುಗಳ ಮೂಲಕ ಜಾಗೃತಿ ಕಾರ್ಯಕ್ರಮ, ವೋಟರ್ಸ್ ಅವೆರ್ನೆಸ್ ಫೋರಂ ಸುಮಾರು 950 ವಾಟ್ಸಾೃಪ್ ಗ್ರೂಪ್‌ಗಳನ್ನು ರಚಿಸಿ ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆಗಳು, ಎಲ್ಲ ಗೇರುಬೀಜ ಕಾರ್ಖಾನೆಗಳು, ಸಣ್ಣ ಕಾರ್ಖಾನೆಗಳಲ್ಲಿ ಅಧ್ಯಕ್ಷ ಕಾರ್ಯದರ್ಶಿಯನ್ನು ಆಯ್ಕೆ ಮಾಡಿ ಜನರಿಗೆ ಮತದಾನದ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.

    Election 2
    ವಿದ್ಯಾರ್ಥಿಗಳು ರಚನೆ ಮಾಡಿರುವ ಭಿತ್ತಿ ಚಿತ್ರ.

    ಕೊರಗ ಸಮುದಾಯಕ್ಕೆ ಇವಿಎಂ ಪ್ರಾತ್ಯಕ್ಷಿಕೆ

    ಕೊರಗ ಸಮುದಾಯವನ್ನು ವಿಶೇಷವಾಗಿ ಪರಿಗಣಿಸಿ ಇವಿಎಂ ಪ್ರಾತ್ಯಕ್ಷಿತೆಯನ್ನು ಜಿಲ್ಲೆಯಾದ್ಯಂತ ನೀಡಲಾಗಿದೆ. ಯಾವುದೇ ಸಂದೇಹಗಳಿದ್ದರೆ ಸ್ಥಳದಲ್ಲಿ ಮಾಹಿತಿ ನೀಡಿ ಹೋಗಲಾಡಿಸಲಾಗಿದೆ. ಈ ಸಮುದಾಯದವರು ಎಲ್ಲರೂ ಮತದಾನ ಮಾಡಲು ಜಿಪಂ ವತಿಯಿಂದ ಮನವರಿಕೆ ಮಾಡಲಾಗಿದೆ.

    ವಿದ್ಯಾರ್ಥಿಗಳಿಗೆ ಎಲೆಕ್ಟ್ರೋಲ್ ಲಿಟರಸಿ ಕ್ಲಬ್

    ಯುವ ಮತದಾರರನ್ನು ಸೆಳೆಯಲು ಕಾಲೇಜಿನಲ್ಲಿ ಎಲೆಕ್ಟ್ರೋಲ್ ಲಿಟರಸಿ ಕ್ಲಬ್ ರಚಿಸಿ ಮತದಾನದ ಅರಿವು ಮತ್ತು ಜಾಗೃತಿಯ ಬಗ್ಗೆ ಅನೇಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ.

    ನಕ್ಸಲ್ ಪೀಡಿತ ಮತಗಟ್ಟೆಗೆ ಭೇಟಿ

    ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಭೇಟಿ ನೀಡಿ ನಿರ್ಭೀತಿಯಿಂದ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದೆ.

    ಮತಗಟ್ಟೆಯಲ್ಲಿ ಸೌಲಭ್ಯ

    ಜಿಲ್ಲೆಯಲ್ಲಿ 1111 ಮತಗಟ್ಟೆಗಳಿದ್ದು ಎಲ್ಲ ಕಡೆಯೂ ಕಡ್ಡಾಯವಾಗಿ ಅಂಗವಿಕಲರಿಗೆ ವೀಲ್ ಚೇರ್, ರ‌್ಯಾಂಪ್, ಬೆಳಕಿನ ವ್ಯವಸ್ಥೆ, ಟಾಯ್ಲೆಟ್, ಶಾಮಿಯಾನ ಹಾಕಿ ಮತದಾರರಿಗೆ ನೆರಳಿನ ವ್ಯವಸ್ಥೆ, ವೋಟರ್ ಫೆಲಿಸಿಟೇಷನ್ ಸೆಂಟರ್, ಅಂಗವಿಕಲ ಹಾಗೂ 80 ವರ್ಷದವರಿಗೆ ಸರತಿ ಸಾಲಿನಲ್ಲಿ ನಿಲ್ಲಿಸದೆ ನೇರ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

    ಇ-ಪತ್ರಿಕೆ

    ಸಿಇಓ ಪ್ರಸನ್ನ ಅವರ ಸಂಪಾದಕತ್ವದಲ್ಲಿ ಚುನಾವಣೆಗೆ ಸಂಬಂಧಿಸಿದ ಮಾಹಿತಿ, ಅಧಿಕಾರಿಗಳ ಭೇಟಿ, ವಿಷಯಗಳಿರುವ ಇ-ಪತ್ರಿಕೆಯನ್ನು ತಯಾರಿಸಿ ಸುಮಾರು 2.5 ಲಕ್ಷ ಎಷ್ಟು ಜನರನ್ನು ಮೂಲಕ ತಲುಪಲಾಗುತ್ತಿದೆ. ಪ್ರತಿದಿನ ಸಂಜೆ 6 ಗಂಟೆಗೆ ಇ-ಪೇಪರ್ ಹೊರತರಲಾಗುತ್ತದೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

    ಬಿಎಲ್‌ಒಗೆ ಗೌರವ

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ.78ರಷ್ಟು ಮತದಾನವಾಗಿದೆ. ಬಿಎಲ್‌ಒಗಳು ವ್ಯವಸ್ಥಿತವಾಗಿ ಕೆಲಸ ಮಾಡಿದರೆ ಮತದಾನದ ಪ್ರಮಾಣ ಹೆಚ್ಚಾಗುತ್ತದೆ. ಈ ಬಾರಿ ಶೇ.10 ಹೆಚ್ಚಳದೊಂದಿಗೆ ಶೇ.88 ಮತದಾನದ ಗುರಿಯನ್ನು ಜಿಲ್ಲಾಡಳಿತ ಹೊಂದಿದ್ದು, ಮತದಾನ ಹೆಚ್ಚಳಕ್ಕೆ ಕಾರಣವಾದ ಐದು ವಿಧಾನಸಭಾ ಕ್ಷೇತ್ರದ 100 ಬಿಎಲ್‌ಒ ಗಳಿಗೆ 5 ಸಾವಿರ ರೂ. ನಗದು ಜಿಲ್ಲಾ ಮಟ್ಟದ ಗೌರವಕ್ಕೆ ಪಾತ್ರರಾಗರಿದ್ದಾರೆ.

    ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 490 ಮತಗಟ್ಟೆಯಲ್ಲಿ ನಿರೀಕ್ಷಿತ ಪ್ರಮಾಣದ ಮತದಾನವಾಗಿಲ್ಲ. ಅವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಮತದಾನವಾದ ಪ್ರದೇಶಗಳಲ್ಲಿ ನಾನಾ ಯೋಜನೆ ರೂಪಿಸಿಕೊಂಡು ಚುನಾವಣಾ ಅರಿವು ಹಾಗೂ ಜಾಗೃತಿಯನ್ನು ಮೂಡಿಸುವ ಕೆಲಸ ನಡೆಯುತ್ತಿದೆ. ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯ ನೀಡಲಾಗುವುದು. ಇ-ಪತ್ರಿಕೆ, ವಾಟ್ಸಾೃಪ್ ಗ್ರೂಪ್‌ಗಳು, ಸ್ಪರ್ಧೆಗಳ ಆಯೋಜನೆ ಮಾಡಿದ್ದೇವೆ. ವರ್ಲಿ ಆರ್ಟ್, ಯಕ್ಷಗಾನ, ಉಡುಪಿ ಸೀರೆಯನ್ನು ಸ್ಥಳೀಯವಾಗಿ ಬಳಸಿಕೊಂಡು ಶಿವಪುರ ಚಿತ್ರಕಲಾ ಶಿಕ್ಷಕ ಕಮಲ್ ಅಹಮದ್ ವಿಶೇಷ ಜಾಗೃತಿ ಮೂಡಿಸಿದ್ದಾರೆ.
    -ಪ್ರಸನ್ನ, ಜಿಪಂ ಸಿಇಒ

    ನಾನು ಮತ್ತು ವಿದ್ಯಾರ್ಥಿಗಳು ಸೇರಿಕೊಂಡು ಮತಗಟ್ಟೆಗಳಲ್ಲಿ ಯಕ್ಷಗಾನ, ವರ್ಲಿ ಆರ್ಟ್, ಉಡುಪಿ ಸೀರೆಯನ್ನು ಬಳಸಿಕೊಂಡು ಚುನಾವಣಾ ಜಾಗೃತಿ ಮತ್ತು ಅರಿವು ಮೂಡಿಸುವ ಭಿತ್ತಿ ಚಿತ್ರಗಳನ್ನು ರಚಿಸಿದ್ದೇವೆ. ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಜನರ ಮನ ಪರಿವರ್ತನೆ ಮಾಡುವಂತ ಭಿತ್ತಿ ಚಿತ್ರ ರಚನೆ ಮಾಡಿದ್ದಾರೆ.
    -ಕಮಲ್ ಅಹಮದ್
    ಚಿತ್ರಕಲಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಶಿವಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts