More

    ಚುನಾವಣಾ ಅಕ್ರಮ ತಡೆಯಲು ಸಿ ವಿಜಿಲ್ ಆ್ಯಪ್ ಬಳಸಿ

    ಕನಕಗಿರಿ: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಯಲು ಆಯೋಗವು ಸಿ ವಿಜಿಲ್ ಆ್ಯಪ್ ಪರಿಚಯಿಸಿದ್ದು, ಅಕ್ರಮ ಕಂಡುಬಂದಲ್ಲಿ ಆ್ಯಪ್ ಮೂಲಕ ಫೋಟೊ, ವಿಡಿಯೋ, ಆಡಿಯೋಗಳನ್ನು ಕಳುಹಿಸಿದರೆ ದೂರು ದಾಖಲಾಗುತ್ತದೆ ಎಂದು ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ ಹೇಳಿದರು.\

    ಪಟ್ಟಣದ ತಹಸಿಲ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರು ತಮ್ಮ ಮೊಬೈಲ್‌ನ ಸರ್ಚ್ ಇಂಜೀನ್‌ನಲ್ಲಿ ಈ ಆ್ಯಪ್ ಇನ್‌ಸ್ಟಾಲೇಶನ್ ಮಾಡಿಕೊಳ್ಳಬಹುದಾಗಿದೆ. ಈ ಆ್ಯಪ್‌ನಲ್ಲಿ ತಮಗೆ ಕಂಡ ಅಕ್ರಮಗಳನ್ನು ಫೋಟೋ, ವಿಡಿಯೋ, ಆಡಿಯೋಗಳನ್ನು ಕಳುಹಿಸಬಹುದಾಗಿದೆ. ಒಟ್ಟು 9 ರೀತಿಯ ಅಕ್ರಮಗಳ ವಿವರ ಅದರಲ್ಲಿದ್ದು, ಈ ಅಕ್ರಮವಲ್ಲದಿದ್ದರೆ ಇತರೇ ಅಕ್ರಮವೆಂದು ಸೂಚಿಸುವ ಅವಕಾಶವನ್ನು ಈ ಆ್ಯಪ್‌ನಲ್ಲಿ ನೀಡಲಾಗಿದೆ. ಸಾರ್ವಜನಿಕರು ಕಳುಹಿಸುವ ವಿಡಿಯೋ, ಫೋಟೊಗಳು ಜಿಲ್ಲಾಮಟ್ಟಕ್ಕೆ ತಲುಪುತ್ತವೆ. ಅಲ್ಲಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಬರುತ್ತದೆ. ಫೋಟೋ, ವಿಡಿಯೋ, ಆಡಿಯೋಗಳಲ್ಲಿ ಜಿಪಿಎಸ್ ದಾಖಲಾಗಿ ದೂರು ದಾಖಲಾಗುತ್ತದೆ ಎಂದರು.

    ಅಲ್ಲದೇ, ಅಕ್ರಮಗಳ ದೂರು ಸಲ್ಲಿಸಲು 1950 ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಬಹುದು. ದಿನದ 24 ಗಂಟೆ ಕಾರ್ಯನಿರ್ವಹಿಸುವ ಕ್ಷೇತ್ರದ ಕಂಟ್ರೋಲ್ ರೂಮ್ 080 23900982 ಕರೆ ಮಾಡಿ ದೂರು ಸಲ್ಲಿಸಬಹುದು. ಸುವಿಧಾ ತಂತ್ರಾಂಶದ ಮೂಲಕ ಅಭ್ಯರ್ಥಿಗಳು ಪರವಾನಿಗೆ ಪಡೆದುಕೊಳ್ಳಬಹುದಾಗಿದೆ. ಎವಿಇಎಸ್‌ಗೊಳಪಡುವ ರೈಲ್ವೆ, ಆರೋಗ್ಯ, ರೇಡಿಯೋ, ಬಿಎಸ್‌ಎನ್‌ಎಲ್ ದೂರವಾಣಿ, ವಿಮಾನ, ಬಸ್, ಅಗ್ನಿಶಾಮಕ, ಮಾಧ್ಯಮ, ಸಂಚಾರಿ ಪೊಲೀಸ್, ಅಂಬ್ಯುಲೆನ್ಸ್ ಸಿಬ್ಬಂದಿಗೆ ನಿಯಮಾವಳಿ ಪ್ರಕಾರ ಪೋಸ್ಟಲ್ ವೋಟಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ತಾಪಂ ಇಒ ಚಂದ್ರಶೇಖರ, ತಹಸೀಲ್ದಾರ್ ಸಂಜಯ ಕಾಂಬ್ಳೆ, ಕಾರಟಗಿ ತಾಪಂ ಇಒ ನರಸಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts