More

    ಮತದಾನ ಪ್ರಜಾಪ್ರಭುತ್ವದ ದೊಡ್ಡ ಹಬ್ಬ- ಎತ್ತಿನ ಬಂಡಿ ಉತ್ಸವ

    ಸಂಡೂರು: ಮತದಾನ ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬವಾಗಿದ್ದು, ಎಲ್ಲರೂ ಸಂಭ್ರಮದಿಂದ ಮತದಾನ ಮಾಡಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ದುರುಗಪ್ಪ ಹೇಳಿದರು.

    ಎತ್ತಿನ ಬಂಡಿ ಉತ್ಸವದಲ್ಲಿ ಮತದಾನ ಜಾಗೃತಿ

    ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಬಳ್ಳಾರಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಡೂರು ಹಾಗೂ ಚೋರನೂರು ಗ್ರಾಪಂ ಸಹಯೋಗದಲ್ಲಿ ಚೋರನೂರಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಎತ್ತಿನ ಬಂಡಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

    ಇದನ್ನೂ ಓದಿ: ವೋಟ್-ಎ-ಥಾನ್ ಸ್ಪರ್ಧೆ: ಮತದಾನ ಜಾಗೃತಿ ಮೂಡಿಸಿ, ಬಹುಮಾನ ಗೆಲ್ಲಿ..

    ಮತ ಚಲಾಯಿಸುವುದು ನಮ್ಮ ನೈತಿಕ ಕರ್ತವ್ಯ

    ತಾಲೂಕು ಮತದಾರ ಸಾಕ್ಷರತಾ ಕೇಂದ್ರದ ತಾಲೂಕು ನೋಡಲ್ ಅಧಿಕಾರಿ ಜಿ.ಎಮ್.ಪ್ರದೀಪ್ ಕುಮಾರ್ ಮತದಾನವೆನ್ನುವುದು ಸಂವಿಧಾನ ನಮಗೆ ನೀಡಿರುವ ಅಮೂಲ್ಯ ಹಕ್ಕು, ಅದನ್ನು ತಪ್ಪದೇ ಚಲಾಯಿಸುವುದು ನಮ್ಮ ನೈತಿಕ ಕರ್ತವ್ಯವಾಗಿದೆ. ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ತಾಲೂಕಿನಾದ್ಯಂತ ಅನೇಕ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದ್ದು,

    ನಾಗರಿಕರೆಲ್ಲರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಸಂವಿಧಾನವನ್ನು ಗೌರವಿಸಬೇಕು ಹಾಗೂ ನಮ್ಮ ನೈತಿಕ ಕರ್ತವ್ಯವನ್ನು ಪಾಲಿಸಬೇಕು ಎಂದರು.

    ಟಿಎಲ್‌ಎಂಟಿ.ರಮೇಶ್, ಸಿದ್ದೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಮದಲ್ಲಿ ಮತದಾನ ಜಾಗೃತಿ ಸಾರುವ ಫಲಕಗಳೊಂದಿಗೆ ಸಿಂಗರಿಸಿದ ಎತ್ತು ಬಂಡಿಗಳ ಮೆರವಣಿಗೆ ಮಾಡಲಾಯಿತು.

    ಗ್ರಾಪಂ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರ ಮೂಗಮ್ಮ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಿಸರ್ಗ ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಸದಸ್ಯರುಗಳು, ನರೇಗಾ ಕಾಯಕ ಬಂಧುಗಳು, ಕೂಲಿ ಕಾರ್ಮಿಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts