More

    ನೆಪೋಟಿಸಂ ಬೆನ್ನಲ್ಲೇ, ಹೊಸ ಸಿನಿಮಾಕ್ಕೆ ಹೊಸಬರನ್ನು ಆಹ್ವಾನಿಸಿದ ವಿವೇಕ್​ ಓಬೇರಾಯ್​

    ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವ ಬೆನ್ನಲ್ಲೇ ಹೊಸ ಪ್ರತಿಭೆಗಳಿಗೆ ರೆಡ್​ ಕಾರ್ಪೆಟ್​ ಹಾಕಿ ಸ್ವಾಗತಿಸಲು ಸಜ್ಜಾಗಿದ್ದಾರೆ ನಟ ವಿವೇಕ್​ ಓಬೇರಾಯ್​. ಹೌದು, ರೋಸಿ ಶೀರ್ಷಿಕೆಯ ಸಿನಿಮಾ ಕೈಗೆತ್ತಿಕೊಂಡಿದ್ದು, ನಿರ್ಮಾಣ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಕನ್ನಡವನ್ನು ತಪ್ಪಾಗಿ ಬರೆದ ನಿರ್ದೇಶಕ ಯೋಗರಾಜ್​ ಭಟ್​

    ಈ ವಿಚಾರವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿಕೊಂಡಿರುವ ವಿವೇಕ್​ ಓಬೇರಾಯ್​, ‘ಹಾರರ್​ ಥ್ರಿಲ್ಲರ್​ ಶೈಲಿಯಲ್ಲಿ ನಿರ್ಮಾಣವಾಗಲಿರುವ ರೋಸಿ ಸಿನಿಮಾ ನಮ್ಮ ಬ್ಯಾನರ್​ನಲ್ಲಿ ಸಿದ್ಧವಾಗುತ್ತಿದೆ. ಮಂದಿರಾ ಎಂಟರ್​ಟೈನ್​ಮೆಂಟ್​ ಮತ್ತು ಓಬೇರಾಯ್​ ಪ್ರೊಡಕ್ಷನ್​ ಹೌಸ್​ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ನೈಜ ಘಟನೆ ಆಧರಿತ ಈ ಸಿನಿಮಾಕ್ಕೆ ವಿಶಾಲ್​ ಮಿಶ್ರಾ ನಿರ್ದೇಶನ ಮಾಡಲಿದ್ದಾರೆ.’ ಎಂದು ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಆ್ಯಪ್‌ನಲ್ಲಿ ಬಿಡುಗಡೆಯಾಗುತ್ತಾ ‘ಆರ್.ಆರ್.ಆರ್’?

    ಅದೇ ರೀತಿ ಇನ್ನೊಂದು ಟ್ವಟ್​ ಮೂಲಕ ಹೊಸ ಪ್ರತಿಭಾವಂತ ಕಲಾವಿದರಿಗಾಗಿ ಹುಡುಕಾಟ ನಡೆದಿದ್ದು, ಅದಕ್ಕಾಗಿ ಆಡಿಷನ್ ಸಹ ಆಯೋಜಿಸಿದ್ದಾರೆ. ಸಿನಿಮಾಸಕ್ತರು ಆಡಿಷನ್​ನಲ್ಲಿ ಪಾಲ್ಗೊಳ್ಳಬಹುದು ಎಂದಿದ್ದಾರೆ. ಈ ಮೊದಲು ಇತಿ ಶೀರ್ಷಿಕೆಯ ಸಿನಿಮಾ ನಿರ್ಮಾಣ ಮಾಡಿದ್ದ ಓಬೇರಾಯ್​, ಇದೀಗ ಅದೇ ಶೈಲಿಯ ಥ್ರಿಲ್ಲರ್​ ಹಿಂದೆ ಬಿದ್ದಿದ್ದಾರೆ.

    ತಮ್ಮ ಮಿಮಿಕ್ರಿ ಮೂಲಕ ‘ಮಿನುಗುತಾರೆ’ಯನ್ನು ಜೀವಂತವಾಗಿಸಿದ್ದರು ರಾಜಗೋಪಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts