More

    ಮಾನವೀಯಮೌಲ್ಯ ತಿಳಿಸುವುದು ಅವಶ್ಯ; ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನಮಠದ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ

    ಕಂಪ್ಲಿ: ಪುರಾಣ ಸಂಸ್ಕೃತಿಯಿಂದ ಯಾವತ್ತೂ ವಿಮುಖರಾಗಬಾರದು ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನಮಠದ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು. ತಾಲೂಕಿನ ನಂ.3ಸಣಾಪುರದ ಶ್ರೀ ಉದ್ಭವ ವೀರಭದ್ರೇಶ್ವರ ರಥೋತ್ಸವ ನಿಮಿತ್ತ ಶ್ರೀಶರಣಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

    ವಿದೇಶಿ ಜೀವನ ಅನುಕರಣೆ ಶೈಲಿಗೆ ಮಾರುಹೋಗಿ ಧರ್ಮ ಸಂಸ್ಕಾರ, ಆಧ್ಯಾತ್ಮಿಕ, ಧಾರ್ಮಿಕ ವಿಧಿವಿಧಾನಗಳನ್ನು ಕೈಬಿಡಬಾರದು. ಮಕ್ಕಳಿಗೆ ಬಾಲ್ಯದಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವಲ್ಲಿ ಜಾಗೃತಿ ತೋರಬೇಕು ಎಂದರು.

    ಹೆಬ್ಬಾಳ ರೇಣುಕಾಶ್ರಮದ ಪ್ರಕಾಶ ಶರಣರು, ಅರಳಿಹಳ್ಳಿಯ ಪದ್ಮತಾತ, ಶ್ರೀ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಸೇವಾಸಮಿತಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಪದಾಧಿಕಾರಿಗಳಾದ ಮುಷ್ಟೂರು ಚನ್ನಪ್ಪ, ಜಿ.ಈಶಪ್ಪ, ಯು.ಮಲ್ಲಯ್ಯ, ಕೆ.ಎಸ್.ದೊಡ್ಡಬಸಪ್ಪ, ಗುಂಡೂರು ವೀರೇಶಪ್ಪ, ಟಿ.ಶರಣಪ್ಪ, ಕೆ.ಮರಿಶಾಂತ, ವೈ.ಮಹಾಂತೇಶ, ಅಯ್ಯೋದಿನಾಗಪ್ಪ, ಹಳೇಗೌಡ್ರು ಉಮೇಶ್, ಆರ್.ಬಸವರಾಜ್, ಶ್ರೀವೀರಭದ್ರೇಶ್ವರ ಯುವಕ ಸಂಘ, ಶ್ರೀವೀರಭದ್ರೇಶ್ವರ ಮಹಿಳಾ ಸಂಘದ ಪದಾಧಿಕಾರಿಗಳು, ಚಲನಚಿತ್ರ ನಿರ್ದೇಶಕ ಆದಿತ್ಯ ಚಿಕ್ಕಣ್ಣ, ಪ್ರಮುಖರಾದ ರಾಮಸಾಗರದ ಬಿ.ನಾರಾಯಣಪ್ಪ, ಕೆ.ಶ್ರೀನಿವಾಸರಾವ್, ಅರವಿಬಸವನಗೌಡ, ಎಸ್.ಎಂ.ನಾಗರಾಜ, ಇಟಗಿ ಬಸವರಾಜಗೌಡ, ಹೊನ್ನಳ್ಳಿ ಗಂಗಾಧರ ಇತರರಿದ್ದರು.

    ಮುನ್ನಾ ಬ್ರಾಹ್ಮಿ ಮುಹೂರ್ತದಲ್ಲಿ ಅಗ್ನಿಕುಂಡ ಹಾಯುವ, ವೀರಭದ್ರೇಶ್ವರ ಉತ್ಸವ, ಶ್ರೀ ಶರಣಬಸವೇಶ್ವರ ಪುರಾಣಮಹಾಮಂಗಳ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts