More

    ಭಗವದ್ಗೀತೆ, ವಿಷ್ಣುಸಹಸ್ರನಾಮ ವೇದಕ್ಕೆ ಸಮಾನ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಶ್ರೀಕೃಷ್ಣನಿಂದ ಅರ್ಜುನನಿಗೆ ಬೋಧಿಸಲ್ಪಟ್ಟ ಭಗವದ್ಗೀತೆಯು ಲಕ್ಷಿ$್ಮ ಸ್ವರೂಪವಾಗಿದ್ದು, ವಿಷ್ಣು ಸಹಸ್ರನಾಮವು ನಾರಾಯಣ ಸ್ವರೂಪವಾಗಿದೆ. ಹೀಗಾಗಿ ಈ ಎರಡು ಗ್ರಂಥಗಳನ್ನು ಪಠಿಸಿದರೆ ದೇವರ ಸಂಪ್ರೀತಿ ಸಿಗುವುದಲ್ಲದೆ, ಎಲ್ಲ ಕಾರ್ಯಗಳಲ್ಲೂ ಯಶಸ್ಸು ಲಭಿಸುತ್ತದೆ ಎಂದು ಉಡುಪಿ ಪರ್ಯಾಯ ಪುತ್ತಿಗೆ ಸುಗುಣೆಂದ್ರ ತೀರ್ಥ ಶ್ರೀಪಾದರು ನುಡಿದರು.

    ಪರ್ಯಾಯ ಶ್ರೀಪುತ್ತಿಗೆ ಮಠ, ಶ್ರೀಕೃಷ್ಣ ಮಠ ಮತ್ತು ಗ್ಲೋಬಲ್​ ವಿಷ್ಣುಸಹಸ್ರನಾಮ ಸತ್ಸಂಗ ೆಡರೇಷನ್​ (ರಿ)ನ ಆಶ್ರಯದಲ್ಲಿ ಶನಿವಾರ ಗೀತಾ ಮಂದಿರದಲ್ಲಿ ಆಯೋಜಿಸಿದ್ದ ವಿಷ್ಣು ಸಹಸ್ರನಾಮ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ಭಗವಂತನ ಚಿಂತನೆ

    ಇಂದಿನ ದಿನಗಳಲ್ಲಿ ಎಲ್ಲರಿಗೂ ವೇದವನ್ನು ಓದಲು ಸಾಧ್ಯವಿಲ್ಲ. ಅಥವಾ ಅದನ್ನು ಸುಲಭವಾಗಿ ಅರಗಿಸಿಕೊಳ್ಳಲೂ ಆಗುವುದಿಲ್ಲ. ಭಗವದ್ಗೀತೆ ಹಾಗೂ ವಿಷ್ಣು ಸಹಸ್ರನಾಮ ಇವೆರಡೂ ಭಗವಂತನ ಕುರಿತಾಗಿಯೇ ಇರುವ ಚಿಂತನೆಗಳಾಗಿವೆ. ಹೀಗಾಗಿ ಇವೆರಡನ್ನೂ ಪಠಿಸಿದರೆ ವೇದವನ್ನು ಪಠಿಸಿದಂತೆಯೇ ಆಗುತ್ತದೆ. ಇವೆರಡೂ ವೇದಕ್ಕೆ ಸಮಾನವಾಗಿದೆ ಎಂದರು.

    ಪುತ್ತಿಗೆ ಕಿರಿಯ ಶ್ರೀ ಸುಶೀಂದ್ರ ತೀರ್ಥ, ರಮೇಶ್​ ಭಟ್​, ಮಹಿತೋಷ್​ ಆಚಾರ್ಯ, ರತೀಶ್​ ತಂತ್ರಿ ಇತರರಿದ್ದರು.

    ಶೋಭಾ ಉತ್ಸವ

    ಗ್ಲೋಬಲ್​ ವಿಷ್ಣುಸಹಸ್ರನಾಮ ಸತ್ಸಂಗ ೆಡರೇಷನ್​ನ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ 6 ಗಂಟೆಗೆ ಅನಂತೇಶ್ವರ ದೇವಸ್ಥಾನದಲ್ಲಿ ಪುತ್ತಿಗೆ ಮಠದ ಯತಿದ್ವಯರು ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ ಶ್ರೀಕೃಷ್ಣ ಮಂದಿರಕ್ಕೆ ಆಗಮಿಸಿ, ಚಂದ್ರಶಾಲೆಯಲ್ಲಿ ವಿಷ್ಣು ಸಹಸ್ರನಾಮ ಸಮರ್ಪಣೆ ಮಾಡಲಾಯಿತು.

    ಡಾ.ಪಾರ್ಥಸಾರಥಿಗೆ ದರ್ಬಾರ್​ ಪ್ರಶಸ್ತಿ

    ಭಗವದ್ಗೀತೆಯನ್ನು ವಿಶ್ವವ್ಯಾಪಿ ಪ್ರಚುರಪಡಿಸುವ ಕಾರ್ಯದಲ್ಲಿ ನಾವು ತೊಡಗಿದ್ದರೆ, ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ವಿಶ್ವದಾದ್ಯಂತ ವಿಷ್ಣುಸಹಸ್ರನಾಮ ಪಾರಾಯಣವನ್ನು ಪ್ರಚುರಪಡಿಸುವ ಮಹತ್ಕಾರ್ಯದಲ್ಲಿ ನಿರತರಾಗಿದ್ದಾರೆ. ನಮ್ಮ ಪರ್ಯಾಯ ಆರಂಭದ ದರ್ಬಾರ್​ ಸಂದರ್ಭದಲ್ಲಿ ಅವರಿಗೆ ಕಾರಣಾಂತರದಿಂದ ಆಗಮಿಸಿರಲಿಲ್ಲ. ಅಂದು ಕೊಡಬೇಕಿದ್ದ “ಪರ್ಯಾಯ ದರ್ಬಾರ್​ ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿಯನ್ನು ವಿಷ್ಣು ಸಹಸ್ರನಾಮ ಮಹೋತ್ಸವದ ಸಂದರ್ಭದಲ್ಲಿ, ಅವರ ಪತ್ನಿ ರಾಜಲಕ್ಷಿ$್ಮ ಉಪಸ್ಥಿತಿಯಲ್ಲಿ ಪ್ರದಾನ ಮಾಡುತ್ತಿರುವುದಕ್ಕೆ ನಮಗೂ ಸಂತಸ ತಂದಿದೆ ಎಂದು ಸುಗಣೇಂದ್ರ ಶ್ರೀಗಳು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts