More

    ವಿಶಾಲ್​ ಜಸ್ಟ್​ ಮಿಸ್​; ನುಗ್ಗಿ ಬಂದ ಟ್ರಕ್​ನಿಂದ ಸ್ವಲ್ಪದರಲ್ಲೇ ಬಚಾವಾದ ಕಾಲಿವುಡ್​ ನಟ

    ಚೆನ್ನೈ: ವಿಶಾಲ್​ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಏಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಲಾಠಿ’ ಎಂಬ ಚಿತ್ರದಲ್ಲಿ ವಿಶಾಲ್​ಗೆ ಹಲವು ಬಾರಿ ಗಾಯಗಳಾಗಿದ್ದವು. ಈಗ ಹೊಸ ಚಿತ್ರದ ಚಿತ್ರೀಕರಣದಲ್ಲ ವಿಶಾಲ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಅವರನ್ನು ಭೇಟಿ ಮಾಡಿದ ಶ್ರೀನಾಥ್, ಪದ್ಮಾವಾಸಂತಿ, ಸುಂದರ್ ರಾಜ್

    ವಿಶಾಲ್​ ಸದ್ಯ ಆದಿಕ್​ ರವಿಚಂದ್ರನ್​ ನಿರ್ದೇಶಿಸುತ್ತಿರುವ ‘ಮಾರ್ಕ್​ ಆ್ಯಂಟನಿ’ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ 100ಕ್ಕೂ ಹೆಚ್ಚು ಸಹಕಲಾವಿದರ ಜತೆ ಈ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ವಿಶಾಲ್​ ಜತೆಗೆ ಎಸ್​.ಜೆ. ಸೂರ್ಯ ಸಹ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

    ಟ್ರಕ್​ ಒಂದು ಗೋಡೆಗೆ ಡಿಕ್ಕಿ ಹೊಡೆದು, ಜನರಿರುವ ಕಡೆ ನುಗ್ಗಿ ಬರುವ ಸನ್ನಿವೇಶವನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಟ್ರಕ್​ ನೇರವಾಗಿ ಕೆಳಗೆ ಬಿದ್ದಿರುವ ವಿಶಾಲ್​ ಮತ್ತು ಸೂರ್ಯ ಕಡೆಗೇ ನುಗ್ಗಿಬಂದಿದೆ. ತಕ್ಷಣ ಪಕ್ಕದಲ್ಲೇ ಇದ್ದ ಸಹನಟರು ಕೆಳಕ್ಕೆ ಬಿದ್ದಿದ್ದ ವಿಶಾಲ್​ರನ್ನು ಪಕ್ಕಕ್ಕೆ ಎಳೆದುಕೊಂಡಿದ್ದಾರೆ. ನುಗ್ಗಿ ಬರುತ್ತಿರುವ ಟ್ರಕ್​ ನೋಡಿ, ಸೂರ್ಯ ಸಹ ಪಕ್ಕಕ್ಕೆ ಓಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯದ ವೀಡಿಯೋ ವೈರಲ್​ ಆಗಿದೆ.

    ಇದನ್ನೂ ಓದಿ: ಸ್ಟಾರ್​ ಚಿತ್ರಗಳ ಪೈಪೋಟಿ ಇಲ್ಲ; ಈ ಶುಕ್ರವಾರ 11 ಚಿತ್ರಗಳ ಬಿಡುಗಡೆ

    ಈ ಕುರಿತು ಬರೆದುಕೊಂಡಿರುವ ವಿಶಾಲ್​, ‘ದೇವರ ಆಶೀರ್ವಾದದಿಂದ ಕೆಲವೇ ಇಂಚುಗಳು, ಕೆಲವೇ ಸೆಕೆಂಡುಗಳ ಅಂತರದಲ್ಲಿ ಬದುಕಿದ್ದೇನೆ. ಈ ಘಟನೆಯಿಂದ ಕೆಲ ಕಾಲ ಸ್ತಬ್ಧನಾಗಿಬಿಟ್ಟಿದ್ದೆ’ ಎಂದು ಬರೆದುಕೊಂಡಿದ್ದಾರೆ.

    3 ನಿಮಿಷದಲ್ಲಿ 184 ಸೆಲ್ಫೀ; ಗಿನ್ನೆಸ್​​ ದಾಖಲೆ ಬರೆದ ಅಕ್ಷಯ್​ ಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts