More

    ಬುಲ್‌ಬುಲ್ ಸಿನಿಮಾ ವಿಮರ್ಶೆ ಬರೆದ ವಿರಾಟ್ ಕೊಹ್ಲಿ!

    ನವದೆಹಲಿ: ಕ್ರಿಕೆಟ್ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿರುವ ಕಾರಣ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಾಲಿ ಕುಳಿತಿದ್ದಾರೆ ಎಂದು ನೀವು ಭಾವಿಸಿದ್ದರೆ, ಅದು ಸರಿಯಲ್ಲ. ಅವರೀಗ ಸಿನಿಮಾ ವಿಮರ್ಶಕರಾಗಿದ್ದಾರೆ! ಹೌದು, ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ನಿರ್ಮಾಣದ ಸಿನಿಮಾ ‘ಬುಲ್‌ಬುಲ್’ ಬಗ್ಗೆ ವಿರಾಟ್ ಕೊಹ್ಲಿ ತಮ್ಮ ವಿಮರ್ಶೆಯನ್ನು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ನಟಿ ಮಹಿರಾ ಜತೆ ಶೋಯಿಬ್ ಮಲಿಕ್ ಫ್ಲರ್ಟ್, ಸಾನಿಯಾ ಗರಂ!

    ಬುಲ್‌ಬುಲ್ ಸಿನಿಮಾ ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ವಿರಾಟ್ ಕೊಹ್ಲಿ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆದುಕೊಂಡಿದ್ದಾರೆ. ‘ಅದ್ಭುತ ರೀತಿಯಲ್ಲಿ ಹೇಳಲಾಗಿರುವ ಈ ಹೃದಯಸ್ಪರ್ಶಿ ಕಥೆಯನ್ನು ನಾನು ಇಷ್ಟಪಟ್ಟಿದ್ದೇನೆ. ಅಣ್ಣ (ಕರ್ಣೇಶ್) – ತಂಗಿ (ಅನುಷ್ಕಾ ಶರ್ಮ) ಅಮೋಘ ಲಯದಲ್ಲಿದೆ. ಗೆಳೆಯರೇ ದಯವಿಟ್ಟು ಈ ಸಿನಿಮಾವನ್ನು ಮಿಸ್ ಮಾಡಿಕೊಳ್ಳಬೇಡಿ’ ಎಂದು ವಿರಾಟ್ ಕೊಹ್ಲಿ ‘ಬುಲ್‌ಬುಲ್’ ಸಿನಿಮಾದ ಪೋಸ್ಟರ್ ಜತೆಗೆ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ವಿರಾಟ್​ ಕೊಹ್ಲಿ, ಧೋನಿ, ರೋಹಿತ್​ ಶರ್ಮಾ….: ಈ ಮೂವರ ನಡುವಿನ ವ್ಯತ್ಯಾಸ ಬಿಚ್ಚಿಟ್ಟ ಪಾರ್ಥಿವ್​ ಪಟೇಲ್​

    ಅನುಷ್ಕಾ ಮತ್ತು ಅವರ ಸಹೋದರ ಕರ್ಣೇಶ್​ ನಿರ್ಮಾಣದ ವೆಬ್ ಸಿರೀಸ್ ‘ಪಾತಾಳ್ ಲೋಕ್’ ಲಾಕ್‌ಡೌನ್ ಸಮಯದಲ್ಲೇ ಬಿಡುಗಡೆಯಾಗಿ ಉತ್ತಮ ಯಶಸ್ಸು ಪಡೆದಿತ್ತು. ಆಗಲೂ ವಿರಾಟ್ ಕೊಹ್ಲಿ ಮೆಚ್ಚುಗೆಯ ವಿಮರ್ಶೆ ಬರೆದುಕೊಂಡಿದ್ದರು. ಅನ್ವಿತಾ ದತ್ತ ನಿರ್ದೇಶನದ ‘ಬುಲ್‌ಬುಲ್’ ಸಿನಿಮಾ ಜೂನ್ 24ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು.

    ಚಿತ್ರಮಂದಿರಗಳ ಕಥೆ ಏನು? ಅನುಷ್ಕಾ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts