More

    VIDEO: ಗೆಲುವಿಗೆ ಒಂದು ರನ್ ಅವಶ್ಯಕತೆಯಿದ್ದರೂ ವಿರಾಟ್ ಕೊಹ್ಲಿ ಎರಡು ರನ್ ಓಡಿದ್ಯಾಕೆ ?

    ಅಬುಧಾಬಿ: ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-13ರಲ್ಲಿ ಉತ್ತಮ ಲಯದಲ್ಲಿ ಸಾಗಿದೆ. ಬುಧವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಪ್ಲೇ-ಆಫ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಕೆಕೆಆರ್ ತಂಡವನ್ನು ಕೇವಲ 84ರನ್‌ಗಳಿಗೆ ಕಟ್ಟಿಹಾಕಿದ ಆರ್‌ಸಿಬಿ, 13.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿತು. ಆರ್‌ಸಿಬಿ ತಂಡ ಜಯ ದಾಖಲಿಸಲು 40 ಎಸೆತಗಳಲ್ಲಿ 1 ರನ್ ಅವಶ್ಯಕತೆಯಿತ್ತು. ಕರ್ನಾಟಕದ ಪ್ರಸಿದ್ಧ್ ಕೃಷ್ಣ ಎಸೆತವನ್ನು ಫೈನ್ ಥರ್ಡ್‌ಮ್ಯಾನ್ ಕಡೆಗೆ ಕೊಹ್ಲಿ ತಳ್ಳಿದರು. ಮೊದಲ ರನ್ ಪೂರೈಸಿದಾಗಲೇ ಆರ್‌ಸಿಬಿ ಗೆದ್ದರೂ ಕೊಹ್ಲಿ ಹಾಗೂ ಗುರುಕೀರತ್ ಮಾನ್ ಸಿಂಗ್ ಪಡೆ ಎರಡು ರನ್ ಕಸಿಯಿತು. ತಂಡದ ಜಯ ದಾಖಲಿಸಿದರೂ ಮತ್ತೊಂದು ರನ್ ಓಡಿದ್ದ ಬಗ್ಗೆ ಹಲವು ಗೊಂದಲ, ಕುತೂಹಲಕ್ಕೆ ಕಾರಣವಾಯಿತು.

    ತಂಡ ಗೆದ್ದರೂ ಕೊಹ್ಲಿ ಅನಾವಶ್ಯಕವಾಗಿ ಓಡಿದ್ದು ಎಲ್ಲರ ಗೊಂದಲಕ್ಕೂ ಕಾರಣವಾಗಿತ್ತು. ಕ್ಷಣ ಮಾತ್ರದಲ್ಲಿ ಎಷ್ಟೋ ಮಂದಿಗೆ ಕೊಹ್ಲಿ ಏತಕ್ಕಾಗಿ ಓಡಿದರೂ ಎಂದೆಲ್ಲಾ ಲೆಕ್ಕಾಚಾರ ಹಾಕಲಾಯಿತು. ಆದರೆ, ಎಲ್ಲರ ಪಾಲಿಗೆ ಅನಾವಶ್ಯಕವಾಗಿದ್ದರೂ ಕೊಹ್ಲಿ ಪಾಲಿಗೆ ಅದು ಸ್ಫೂರ್ತಿಯಾಗಿತ್ತು. ಕೊಹ್ಲಿ ಅವರ ಕ್ರೀಡಾ ಸ್ಫೂರ್ತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಂತದಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರಷ್ಟೇ ತಂಡಕ್ಕೆ ಸೇರ್ಪಡೆಯಾಗಲಿದೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳ ಪರಾಕ್ರಮದ ಎದುರು ಕೆಕೆಆರ್ ಸಂಪೂರ್ಣ ನೆಲಕಚ್ಚಿತು. ಮೊಹಮದ್ ಸಿರಾಜ್ (8ಕ್ಕೆ 2) ಪಂದ್ಯ ಶ್ರೇಷ್ಠ ಪ್ರಶಸ್ತಿ ದಕ್ಕಿಸಿಕೊಂಡರು. ಇವರಿಗೆ ಕ್ರಿಸ್ ಮಾರಿಸ್, ನವದೀಪ್ ಸೈನಿ ಹಾಗೂ ಯಜುವೇಂದ್ರ ಚಾಹಲ್ ಸಾಥ್ ನೀಡಿದ್ದರು.

    ಇದರೊಂದಿಗೆ ಲೀಗ್‌ನಲ್ಲಿ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 3ರಲ್ಲಿ ಸೋಲು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts