More

    ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಏಕೈಕ ಭಾರತೀಯ ಕೊಹ್ಲಿ

    ನವದೆಹಲಿ: ಫೋಬ್ಸ್​ ನಿಯತಕಾಲಿಕ ಪ್ರಕಟಿಸುವ ವಿಶ್ವದ ಅತ್ಯಂತ ಶ್ರೀಮಂತ ನೂರು ಕ್ರೀಡಾಪಟುಗಳಲ್ಲಿ ಭಾರತದಿಂದ ವಿರಾಟ್​ ಕೊಹ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ. ಜತೆಗೆ, ಈ ಪಟ್ಟಿಯಲ್ಲಿರುವ ಏಕೈಕ ಕ್ರಿಕೆಟಿಗ ಕೂಡ ಕೊಹ್ಲಿ ಆಗಿದ್ದಾರೆ.

    ಭಾರತೀಯ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕಳೆದ ಒಂದು ವರ್ಷದಲ್ಲಿ ಗಳಿಸಿರುವ ಆದಾಯ 26 ಮಿಲಿಯನ್ ಡಾಲರ್​ (ಅಂದಾಜು 196 ಕೋಟಿ ರೂ.) ಇದರಲ್ಲಿ 24 ಮಿಲಿಯನ್​ ಜಾಹೀರಾತು ಆದಾಯವಾಗಿದ್ದರೆ (181 ಕೋಟಿ ರೂ.), 2 ಮಿಲಿಯನ್​ ಡಾಲರ್​ ( 15 ಕೋಟಿ ರೂ.) ಸಂಬಳ ಹಾಗೂ ಪ್ರಶಸ್ತಿ ಮೊತ್ತವಾಗಿದೆ ಎಂದು ಫೋಬ್ಸ್​ ತಿಳಿಸಿದೆ.

    ಇದನ್ನೂ ಓದಿ; ಪಿಯು ವಿದ್ಯಾರ್ಥಿಗಳಿಗೂ ಸಿಗಲಿದೆಯೇ ಉಚಿತ ಲ್ಯಾಪ್​ಟಾಪ್​…?

    ಆದರೆ, ಕಳೆದ ಸಾಲಿಗೆ ಹೋಲಿಸಿದರೆ ವಿರಾಟ್​ ಕೊಹ್ಲಿ ಸ್ಥಾನದಲ್ಲಿ ಭಾರಿ ಏರಿಕೆ ಕಂಡಿದೆ. ಈ ಬಾರಿ 30 ಸ್ಥಾನಗಳಷ್ಟು ಮೇಲೆ ಬಂದಿದ್ದು, 66ನೇ ಸ್ಥಾನದಲ್ಲಿದ್ದಾರೆ.
    ಈ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ಹಿರಿಮೆ ಸತತ ಎರಡನೇ ವರ್ಷವೂ ಕೊಹ್ಲಿಯದ್ದಾಗಿದೆ. ಕಳೆದ ಬಾರಿ ಬೇರಾವ ಕ್ರಿಕೆಟಿಗನೂ ಅಗ್ರ 100ರ ಪಟ್ಟಿಗೆ ಸೇರಿರಲಿಲ್ಲ.

    ಕ್ರೀಡಾಪಟುಗಳು 2019ರ ಜೂನ್​ನಿಂದ 2020ರ ಜೂನ್​ವರೆಗೆ ಗಳಿಸಿದ ಪ್ರಶಸ್ತಿ ಮೊತ್ತ, ಸಂಬಳ, ಒಪ್ಪಂದಗಳು ಜಾಹೀರಾತು ಆದಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಕೊಹ್ಲಿ 100ನೇ ಸ್ಥಾನದಲ್ಲಿದ್ದರು.

    ಇದನ್ನೂ ಓದಿ; ಬುಕ್​ ಅಲ್ಲ, ಟ್ಯಾಬ್​ ಹಿಡಿದು ಹೋಗಬೇಕಿಗ ಶಾಲೆಗೆ; ಆನ್​ಲೈನ್​ ಮೋಡ್​ಗೆ ಶಿಫ್ಟ್​ ಆದ ಶಿಕ್ಷಣ 

    ಪ್ರತಿ ವರ್ಷವೂ ಫುಟ್ಬಾಲ್​ ಆಟಗಾರರೇ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುತ್ತಿದ್ದರು. ಇದೇ ಮೊದಲ ಬಾರಿಗೆ ಟೆನಿಸ್​ ಆಟಗಾರ ರೋಜರ್​ ಫೆಡರರ್​ 802 ಕೋಟಿ ರೂ. ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಂತರದಲ್ಲಿ 793 ಕೋಟಿ ರೂ.ಗಳೊಂದಿಗೆ ಫುಟ್ಬಾಲ್​ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೊ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ನಂತರದಲ್ಲಿ ಲಿಯೊನೆಲ್​ ಮೆಸ್ಸಿ 785 ಕೋಟಿ ರೂ.ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್​ನ ನೇಮಾರ್​ 721 ಕೋಟಿ ರೂ. ಒಡೆಯರಾಗಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

    ಮೊಬೈಲ್​ ಸಂಖ್ಯೆಗಿನ್ನು 11 ಅಂಕಿಗಳು, ಟ್ರಾಯ್​ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts