More

    ಬಂಕರ್ ಸೇರಿದ ಅಮೆರಿಕ ಅಧ್ಯಕ್ಷ ಟ್ರಂಪ್: ಹೆಚ್ಚಿದ ಹಿಂಸಾಚಾರ 40 ನಗರಗಳಲ್ಲಿ ಕರ್ಫ್ಯೂ

    ವಾಷಿಂಗ್ಟನ್​: ಆಫ್ರಿಕನ್ ಅಮೇರಿಕನ್ ಜಾರ್ಜ್​ ಫ್ಲಾಯ್ಡ್​ (46) ಎಂಬಾತನ ಕಸ್ಟಡಿ ಸಾವಿನ ಬೆನ್ನಿಗೇ ಭುಗಿಲೆದ್ದ ಜನಾಂಗೀಯ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದ್ದು, ಸಾವಿರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾಚಾರಕ್ಕೆ 5 ಜನ ಬಲಿಯಾಗಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ 40 ನಗರಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಪರಿಸ್ಥಿತಿ ಕೈ ಮೀರುತ್ತಿರುವ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವೈಟ್​ ಹೌಸ್​ನ ಬಂಕರ್ ಸೇರಿದ್ದಾರೆ.

    ಇದನ್ನೂ ಓದಿ: ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!

    ಇತ್ತೀಚಿನ ದಶಕಗಳ ಅವಧಿಯಲ್ಲಿ ಅಮೆರಿಕದಲ್ಲಿ ಇದುವೇ ಅತ್ಯಂತ ಕೆಟ್ಟ ಸಾಮಾಜಿಕ ಅಶಾಂತಿ ಎಂದು ವಿಶ್ಲೇಷಿಸಲ್ಪಡುತ್ತಿದೆ. ಫ್ಲಾಯ್ಡ್​​ನನ್ನು ಪೊಲೀಸ್ ಅಧಿಕಾರಿ ನೆಲದ ಮೇಲೆ ಕೆಡವಿ ಕತ್ತಿನ ಮೇಲೆ ಕಾಲಿಟ್ಟು ಉಸಿರಾಡಲು ಬಿಡದೇ ಹಿಂಸಿಸಿದ್ದ. ಹೀಗಾಗಿ ಆತ ಸಾವನ್ನಪ್ಪಿದ್ದ. ಇದರ ಬೆನ್ನಿಗೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಕಳೆದ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಪೊಲೀಸರು 24ಕ್ಕೂ ಹೆಚ್ಚು ನಗರಗಳಲ್ಲಿ 2,564 ಜನರನ್ನು ಬಂಧಿಸಿದ್ದಾರೆ. ಲಾಸ್ ಏಂಜಲೀಸ್​ನಲ್ಲೇ ಹೆಚ್ಚು ಬಂಧಿತರಿದ್ದಾರೆ.

    ಮಿನ್ನೆಸೊಟಾದ ಮಿನ್ನಿಯಾಪೊಲೀಸ್​ನಲ್ಲಿ ಶುರುವಾದ ಸಾಮಾಜಿಕ ಅಶಾಂತಿ ಬಳಿಕ ಲಾಸ್ಏಂಜಲೀಶ್​, ಷಿಕಾಗೋ, ನ್ಯೂಯಾರ್ಕ್​, ಹೂಸ್ಟನ್​, ಫಿಲಾಡೆಲ್ಫಿಯಾ, ವಾಷಿಂಗ್ಟನ್​ ಡಿಸಿ ಮತ್ತು ಇತರೆ ನಗರಗಳಲ್ಲಿ ಹರಡಿ ಹಿಂಸಾ ಸ್ವರೂಪ ಪಡೆದುಕೊಂಡಿದೆ. ನ್ಯೂಯಾರ್ಕ್​ ಟೈಮ್ಸ್ ವರದಿ ಪ್ರಕಾರ, ಭಾನುವಾರ ಆರನೇ ದಿನ ಅಮೆರಿಕದ್ಯಾದಂತ ಅಶಾಂತಿ ಮುಂದುವರಿದಿರುವಂಥದ್ದು. ಇದೇ ರೀತಿಯ ಸಾಮಾಜಿಕ ಅಶಾಂತಿ 1968ರಲ್ಲಿ ಒಮ್ಮೆ ನಡೆದಿತ್ತು. ಅಂದು ರೆವರೆಂಡ್​ ಡಾ. ಮಾರ್ಟಿನ್​​ ಲೂಥರ್ ಕಿಂಗ್​ ಜೂನಿಯರ್ ಹತ್ಯೆ ಆಗಿದ್ದ ಸಂದರ್ಭವಾಗಿತ್ತು.

    ಇದನ್ನೂ ಓದಿ: ಕ್ವಾರಂಟೈನ್ ಅವಧಿಯಲ್ಲಿ ಬಂದೆರಗಿತ್ತು ಆಪತ್ತು: ಆ ಶಾಕ್​ನಿಂದ ಅವರಿನ್ನೂ ಚೇತರಿಸಿಲ್ಲ..

    ವೈಟ್ ಹೌಸ್​ ಸನಿಹದಲ್ಲಿ ಭಾನುವಾರ ರಾತ್ರಿ ಪ್ರತಿಭಟನಾಕಾರರು ಪ್ರಮುಖ ಕಟ್ಟಡ ಮತ್ತು ಇತರೆ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡತೊಡಗಿದ್ದರು. ಆಗ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಅವರನ್ನು ಚದುರಿಸಿದ್ದರು. ಕಳೆದ ಕೆಲವು ದಿನಗಳಿಂದ ವೈಟ್ ಹೌಸ್ ಸಮೀಪವೇ ಸಾವಿರಾರು ಪ್ರತಿಭಟನಾಕಾರರು ಸೇರಿದ್ದು, ಅಧ್ಯಕ್ಷ ಟ್ರಂಪ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
    ಸಿಎನ್​ಎನ್ ವರದಿ ಪ್ರಕಾರ, ಈ ಬೆಳವಣಿಗೆ ಕಾರಣ ಅಧ್ಯಕ್ಷ ಟ್ರಂಪ್ ಅವರನ್ನು ತಾತ್ಕಾಲಿಕವಾಗಿ ವೈಟ್​ಹೌಸ್​ನ ನೆಲಮಹಡಿಯ ಬಂಕರ್​ಗೆ ಕರೆದೊಯ್ಯಲಾಗಿದೆ. ಅವರ ಜತೆಗೆ ಮೆಲೆನಿಯಾ ಟ್ರಂಪ್ ಮತ್ತು ಅವರ ಪುತ್ರ ಬೇರನ್​ ಅವರನ್ನೂ ಬಂಕರ್​ಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ನಿತ್ಯ ಸುದ್ದಿಗೋಷ್ಠಿ ನಡೆಸುತ್ತಿದ್ದ ಟ್ರಂಪ್ ಭಾನುವಾರ ಹೊರಗೆ ಕಾಣಿಸಿಲ್ಲ. ಆದರೆ, ಸರಣಿ ಟ್ವೀಟ್​ಗಳ ಮೂಲಕ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಆಡಳಿತ, ಸರ್ಕಾರದ ವಿರುದ್ಧ ದ್ವೇಷ ಭಾವ ಮೂಡಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    *ಪೊಲೀಸ್ ಪವರ್*ಆಫ್ರಿಕನ್- ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಎಂಬಾತ ಪೊಲೀಸ್ ವಶದಲ್ಲಿ ಮೃತಪಟ್ಟಿದ್ದನ್ನು ವಿರೋಧಿಸಿ ಅಮೆರಿಕದಲ್ಲಿ 6 ದಿನಗಳಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರನ್ನು ಅಲ್ಲಿನ ಪೊಲೀಸರು ಹೇಗೆ ಹತ್ತಿಕ್ಕುತ್ತಿದ್ದಾರೆ ನೋಡಿ.

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮೇ 31, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts