More

    ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ ‘ಗಡಿ ಮೀರಿದ’ ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!

    ಬೆಂಗಳೂರು: ಕೋವಿಡ್​-19 ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಆಗಬೇಕು, ಪಾಲಿಸದಿದ್ದರೆ ಆಯೋಜಕರಿಗೆ 1 ಲಕ್ಷ ರೂಪಾಯಿವರೆಗೂ ದಂಡ ಹಾಕಲು ಬಿಬಿಎಂಪಿ ಮುಂದಾಗಿದೆ. ಇನ್ನು ಮಾಸ್ಕ್​ ಹಾಕಿಕೊಳ್ಳದೆ ಸಾರ್ವಜನಿಕರು ಹೊರಗೆಲ್ಲಾದರೂ ಕಾಣಿಸಿಕೊಂಡರೆ ಪೊಲೀಸರು ಓಡಿ ಬಂದು ಹಿಡಿದುಕೊಂಡು ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಹೊರಗೇ ಇಷ್ಟೆಲ್ಲ ಕಟ್ಟುನಿಟ್ಟು ಇದ್ದಮೇಲೆ ಇನ್ನು ವಿಧಾನಸೌಧದೊಳಗೆ ಹೇಗಿರಬೇಡ?!

    ಆದರೆ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಸದನದಲ್ಲೇ ಗಡಿ ಮೀರಿದ್ದಾರೆ. ಮಧ್ಯೆ ಗ್ಲಾಸ್ ಇದ್ದರೂ ಲಾಸ್ ಎಂಬಂತಾಗಿದೆ. ಕೋವಿಡ್​-19 ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ, ಕರೊನಾ ಸೋಂಕು ತಗುಲದಂತೆ ಅಥವಾ ಹರಡದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಸದನದಲ್ಲಿ ಶಾಸಕರು ಕುಳಿತುಕೊಳ್ಳುವ ಪ್ರತಿ ಆಸನದ ನಡುವೆ ಗಾಜನ್ನು ಅಳವಡಿಸಿ ಪಾರ್ಟಿಷನ್ ನಿರ್ಮಿಸಲಾಗಿದೆ. ಆದರೆ ಚರ್ಚೆಯ ಭರದಲ್ಲಿ ಶಾಸಕರು, ಗಾಜಿನ ಪರದೆಯಾಚೆಗೂ ಕತ್ತು ಚಾಚಿ ಮಾತನಾಡಿದ್ದಾರೆ.

    ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ 'ಗಡಿ ಮೀರಿದ' ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!

    ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ 'ಗಡಿ ಮೀರಿದ' ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!

    ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ 'ಗಡಿ ಮೀರಿದ' ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!

    ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಡಾ.ಕೆ.ಸುಧಾಕರ್​, ಎಸ್​. ಸುರೇಶ್​ ಕುಮಾರ್​, ವಿಧಾನ ಪರಿಷತ್ ಸದಸ್ಯರಾದ ರಮೇಶ್ ಗೌಡ, ಎಂ.ಕೆ. ಪ್ರಾಣೇಶ್​ ಮುಂತಾದವರು ಈ ರೀತಿ ಸದನದಲ್ಲಿ ಕಾಣಿಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಮಂಗಳವಾರ ಭಾರತ್ ಬಂದ್​; ಆದರೆ ಇವರಿಗೆ ಮಾತ್ರ ವಿನಾಯಿತಿ…

    ‘ಈ ಬಲ್ಬ್​ ನಿಮ್ಮ ಬದುಕನ್ನೇ ಬದಲಾಯಿಸುತ್ತೆ’ ಬಲ್ಬ್​ ಕೊಳ್ಳುವ ಮುನ್ನ ಎಚ್ಚರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts