More

    ಚಂದ್ರುಗೂ, ವಿನಯ್ ಗುರೂಜಿಗೂ ಏನ್ರೀ ಸಂಬಂಧ?: ಭಕ್ತರ ಪ್ರಶ್ನೆ, ಪ್ರತಿಭಟನೆಗೆ ನಿರ್ಧಾರ

    ಶಿವಮೊಗ್ಗ: ಶಾಸಕ ರೇಣುಕಾಚಾರ್ಯ (M P Renukacharya) ಅವರ ಸಹೋದರನ ಮಗ ಚಂದ್ರಶೇಖರ್ (Chandrashekhar Death Case) ನಿಗೂಢವಾಗಿ ಸಾವಿಗೀಡಾದ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಅವರು ದಿಢೀರನೇ ನಾಪತ್ತೆಯಾಗುವುದರ ಹಿಂದಿನ ದಿನ ಗೌರಿಗದ್ದೆ (Gowrigadde)ಯ ವಿನಯ್ ಗುರೂಜಿ (Vinay guruji) ಆಶ್ರಮಕ್ಕೆ ಭೇಟಿ ನೀಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಅಲ್ಲಿಂದ ರಾತ್ರಿ ಹೊರಟ ಬಳಿಕವೇ ಚಂದ್ರಶೇಖರ್ ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರ ಮಧ್ಯೆ ಸೋಶಿಯಲ್ ಮೀಡಿಯಾ (Social Media)ದಲ್ಲಿ ಹರಿದಾಡುತ್ತಿರುವ ಕೆಲವು ವಿಡಿಯೋಗಳು ಈ ಸಾವಿನ ಹಿಂದೆ ಗುರೂಜಿ ಕೈವಾಡ ಇರಬಹುದೆಂಬ ಆರೋಪಕ್ಕೆ ಎಡೆ ಮಾಡಿಕೊಟ್ಟಿವೆ.

    ಈ ಮಧ್ಯೆ ಇಂದು ಶಿವಮೊಗ್ಗದಲ್ಲಿ ವಿನಯ್ ಗುರೂಜಿ (Vinay guruji) ಭಕ್ತ ಶಂಕರ್ ಸುದ್ದಿಗೋಷ್ಠಿ ನಡೆಸಿ, ಆರೇಳು ವರ್ಷದ ಹಳೇ ವಿಡಿಯೋಗಳನ್ನು ಈಗ ವೈಭವೀಕರಿಸಲಾಗುತ್ತಿದೆ. ಚಂದ್ರು ಸಾವಿಗೂ, ಗುರೂಜಿಗೂ ಸಂಬಂಧವೇ ಇಲ್ಲ. ಚಂದ್ರು ಅವರು ಮಠಕ್ಕೆ ಬಂದು ಹೋಗುತ್ತಿದ್ದುದು ನಿಜವಾದರೂ ಅವರ ನಿಗೂಢ ನಾಪತ್ತೆಗೂ ಮಠಕ್ಕೂ ತಳುಕು ಹಾಕುವುದು ಸರಿಯಲ್ಲ ಎಂದು ವಾದಿಸಿದ್ದಾರೆ.

    ಚಂದ್ರು (Chandrashekhar Death Case) ಸಾವಿನ ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ಇವತ್ತಲ್ಲ ನಾಳೆ ಹೊರಗೆ ಬಂದೇ ಬರುತ್ತದೆ. ಅನಗತ್ಯವಾಗಿ ಆಶ್ರಮದ ಮೇಲೆ ಆಪಾದನೆ ಹೊರಿಸುವುದು ಸರಿಯಲ್ಲ. ಭಕ್ತರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುವುದು, ವಿಡಿಯೋ ಶೇರ್ ಮಾಡುವುದು ಸರಿಯಲ್ಲ. ಅದರಲ್ಲೂ ಹಳೆಯ ವಿಡಿಯೋವನ್ನು ಈಗಿನ ಘಟನೆಗೆ ತಳುಕು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದನ್ನು ಕೂಡಲೇ ನಿಲ್ಲಿಸಿ ಎಂದು ಮನವಿ ಮಾಡಿದರು.

    ವಿನಾಕಾರಣ ಈ ಘಟನೆಯಲ್ಲಿ ಗುರೂಜಿ ಹೆಸರು ಎಳೆದು ತರುತ್ತಿರುವುದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಗುರೂಜಿಯವರನ್ನು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ಮಾಡುತ್ತಿರುವುದರ ಸಂಬಂಧ ಕಾನೂನು ಹೋರಾಟ ಪ್ರಾರಂಭಿಸಿದ್ದೇವೆ. ಇದಲ್ಲದೇ ನವೆಂಬರ್ 14ರಂದು ಶಿವಮೊಗ್ಗದ ಭಕ್ತವೃಂದ ಸೇರಿ ಪ್ರತಿಭಟನೆಯನ್ನೂ ಮಾಡಲಿದೆ. ನಗರದ ಶಿವಪ್ಪನಾಯಕ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ಹೋಗಿ ಮನವಿ ಸಲ್ಲಿಸುತ್ತೇವೆ ಎಂದು ಶಂಕರ್ ಹೇಳಿದರು.

    ಪುಷ್ಪ ಚಿತ್ರದ​ ಕಲೆಕ್ಷನ್​​ ರೆಕಾರ್ಡ್​ ಬ್ರೇಕ್ ಮಾಡಿದ ಕಾಂತಾರ: ಪುಷ್ಪರಾಜ್ ಎದುರು ಗೆದ್ದು ಬೀಗಿದ ಡಿವೈನ್​​​​ ಸ್ಟಾರ್

    ಮೋದಿ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಕರೀಲಿಲ್ಲ ಅನ್ನೋದು ಹಸಿ ಸುಳ್ಳು! ಆಮಂತ್ರಣದ ದಾಖಲೆ ಬಿಡುಗಡೆ ಮಾಡಿದ ಬಿಜೆಪಿ

    ಶೋಯಿಬ್​​ ಮೊದಲ ಪತ್ನಿಯು ಸಹ ಭಾರತೀಯಳೇ! ಆಯೇಶಾ ಬಳಿಕ ಇದೀಗ ಸಾನಿಯಾ ಸರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts