More

    ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್‌ಗೆ ಮೊದಲ ಸೋಲು

    ಪಣಜಿ: ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ 12 ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅಜೇಯ ಓಟಕ್ಕೆ 13ನೇ ಪಂದ್ಯದಲ್ಲಿ ತಡೆಬಿದ್ದಿದೆ. ರಷ್ಯಾದ ಆರ್ಟಿಶ್ ಲಾಪ್ಸನ್ ವಿರುದ್ಧ ಶುಕ್ರವಾರ ನಡೆದ ಕಾದಾಟದಲ್ಲಿ ವಿಜೇಂದರ್ ಆಘಾತಕಾರಿ ಸೋಲು ಎದುರಿಸಿದರು.

    ಹಡಗಿನ ಚಾವಣಿ ಮೇಲೆ ನಡೆದ ಈ ವಿಶೇಷ ಪಂದ್ಯ ‘ಬ್ಯಾಟಲ್ ಆನ್ ಶಿಪ್’ ಎಂದೇ ಕರೆಯಲ್ಪಟ್ಟಿತ್ತು. 35 ವರ್ಷದ ವಿಜೇಂದರ್, 26 ವರ್ಷದ ಲಾಪ್ಸನ್‌ಗೆ 5ನೇ ಸುತ್ತಿನಲ್ಲಿ ಟೆಕ್ನಿಕಲ್ ನಾಕೌಟ್ ಮೂಲಕ ಶರಣಾದರು. ವಿಜೇಂದರ್‌ಗೆ ಇದು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಮೊದಲ ಸೋಲಾಗಿದೆ. ಲಾಪ್ಸನ್‌ಗೆ ಆಡಿದ 7ನೇ ಪಂದ್ಯದಲ್ಲಿ ಒಲಿದ 5ನೇ ಗೆಲುವು ಇದಾಗಿದೆ. ಉಳಿದಂತೆ ತಲಾ ಒಂದು ಸೋಲು ಮತ್ತು ಡ್ರಾ ಕಂಡಿದ್ದಾರೆ.

    ಇದನ್ನೂ ಓದಿ: VIDEO | ಯುವ ವೇಗಿಯ ಎಸೆತಕ್ಕೆ ಧೋನಿ ಕ್ಲೀನ್ ಬೋಲ್ಡ್, ವಿಡಿಯೋ ವೈರಲ್!

    2019ರ ನವೆಂಬರ್ ಬಳಿಕ ಮೊದಲ ಪಂದ್ಯವಾಡಿದ ವಿಜೇಂದರ್ ಮೊದಲ ಸುತ್ತಿನಿಂದಲೇ ಹಿನ್ನಡೆ ಕಂಡರು. ಮತ್ತೆರಡು ಸುತ್ತಿನಲ್ಲಿ ವಿಜೇಂದರ್ ಮತ್ತಷ್ಟು ಬಳಲಿದರು. 4ನೇ ಸುತ್ತಿನಲ್ಲಿ ವಿಜೇಂದರ್ 2 ಬಾರಿ ಕುಸಿದು ಬಿದ್ದರು. 5ನೇ ಸುತ್ತಿನ ಪಂದ್ಯದ ವೇಳೆ ವಿಜೇಂದರ್ ಪಂದ್ಯದಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ ಎಂದು ರೆಫ್ರಿ ಪರಿಗಣಿಸಿದರು. ಇದರಿಂದ ಲಾಪ್ಸನ್‌ಗೆ ನಾಕೌಟ್ ಗೆಲುವು ಒಲಿಯಿತು. 2008ರ ಬೀಜಿಂಗ್ ಒಲಿಂಪಿಕ್ಸ್ ಪದಕ ವಿಜೇತ ಹರಿಯಾಣ ಬಾಕ್ಸರ್ ವಿಜೇಂದರ್, 2015ರಲ್ಲಿ ವೃತ್ತಿಪರ ಬಾಕ್ಸಿಂಗ್ ಪ್ರವೇಶಿಸಿದ ಬಳಿಕ ಸೋಲನ್ನೇ ಕಂಡಿರಲಿಲ್ಲ. 6.4 ಅಡಿ ಎತ್ತರದ ಲಾಪ್ಸನ್, 6 ಅಡಿ ಎತ್ತರದ ವಿಜೇಂದರ್‌ಗಿಂತ ಎತ್ತರವಾಗಿದ್ದರು. ಹೀಗಾಗಿ ವಿಜೇಂದರ್‌ಗೆ ಈ ಬಾರಿ ಎತ್ತರದ ಲಾಭ ಪಡೆಯಲು ಸಾಧ್ಯವಾಗಲಿಲ್ಲ.

    ಪುರುಷರ ಕೌಂಟಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಳು ಈ ಸುಂದರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts