More

    2024ರ ಒಲಿಂಪಿಕ್ಸ್‌ವರೆಗೂ ಲವ್ಲಿನಾಗೆ ಪ್ರತಿ ತಿಂಗಳು 1 ಲಕ್ಷ ರೂ. ಸ್ಕಾಲರ್‌ಶಿಪ್!

    ಗುವಾಹಟಿ: ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ಅವರಿಗೆ ಅಸ್ಸಾಂನ ತಮ್ಮ ಕುಗ್ರಾಮದ ಮನೆಗೆ ಮನೆಗೆ ಹೋಗಲು ಸರಿಯಾದ ರಸ್ತೆಯೇ ಇರಲಿಲ್ಲ. ಈಗ ಅವರ ಒಲಿಂಪಿಕ್ಸ್ ಪದಕ ಸಾಧನೆಯ ಬಳಿಕ, ಅಸ್ಸಾಂ ರಾಜಧಾನಿ ಗುವಾಹಟಿಯ ಪ್ರಮುಖ ರಸ್ತೆಯೊಂದು ಅವರದೇ ಹೆಸರು ಪಡೆಯಲಿದೆ! ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ, ಟೋಕಿಯೊದಿಂದ ಪದಕದೊಂದಿಗೆ ಮರಳಿದ ಲವ್ಲಿನಾಗೆ ಗುರುವಾರ ಭರ್ಜರಿ ಸ್ವಾಗತ ನೀಡಿ ಈ ವಿಷಯವನ್ನು ಪ್ರಕಟಿಸಿದರು. ಜತೆಗೆ ಲವ್ಲಿನಾಗೆ 1 ಕೋಟಿ ರೂ. ಬಹುಮಾನವನ್ನು ವಿತರಿಸಿರುವ ಅವರು, ಈ ಮೊದಲೇ ಘೋಷಿಸಿದಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಯ ಆರ್ ಕೂಡ ನೀಡಿದರು.

    ಅಸ್ಸಾಂ ರಾಜ್ಯದ ಮೊದಲ ಒಲಿಂಪಿಕ್ಸ್ ಪದಕ ವಿಜೇತೆಯಾಗಿರುವ ಲವ್ಲಿನಾಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಮಾಸಿಕ 1 ಲಕ್ಷ ರೂ. ಸ್ಕಾಲರ್‌ಶಿಪ್ ನೀಡುವುದಾಗಿಯೂ ಸಿಎಂ ಹೇಳಿದ್ದು, ಈ ಮೂಲಕ ಮುಂದಿನ ಬಾರಿ ಸ್ವರ್ಣ ಪದಕ ಗೆದ್ದು ಬರುವಂತೆಯೂ ಹಾರೈಸಿದರು. ಲವ್ಲಿನಾ ಅವರ ಹಳ್ಳಿ ಬರೊ ಮುಖಿಯಾ ಒಳಗೊಂಡ ಸರುಪಥರ್ ಕ್ಷೇತ್ರದಲ್ಲಿ ಬಾಕ್ಸಿಂಗ್ ಅಕಾಡೆಮಿ ಒಳಗೊಂಡ ಕ್ರೀಡಾ ಸಂಕೀರ್ಣ ನಿರ್ಮಿಸುವುದಾಗಿಯೂ ಸಿಎಂ ಹೇಳಿದರು.

    ಇದನ್ನೂ ಓದಿ: ಲಿಯೋನೆಲ್ ಮೆಸ್ಸಿ ಅವರ ಹೊಸ ಫುಟ್‌ಬಾಲ್ ಕ್ಲಬ್, ಜೆರ್ಸಿ ನಂಬರ್ ಯಾವುದು ಗೊತ್ತೇ?

    ಇದೇ ವೇಳೆ ಮಾತನಾಡಿದ 23 ವರ್ಷದ ಲವ್ಲಿನಾ, ‘ಚಿನ್ನದ ಪದಕ ಕೈತಪ್ಪಿದ ನಿರಾಸೆ ಇದ್ದರೂ, ದೇಶಕ್ಕೆ ಬರಿಗೈಯಲ್ಲಿ ಮರಳದೆ ಪದಕವೊಂದನ್ನು ಗೆದ್ದುತಂದಿರುವ ಖುಷಿ ಇದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಖಂಡಿತವಾಗಿಯೂ ಚಿನ್ನ ಗೆಲ್ಲುವೆ’ ಎಂದು ಹೇಳಿದರು. ಲವ್ಲಿನಾ ಅವರ ನಾಲ್ವರು ಕೋಚ್‌ಗಳಾದ ಪ್ರಶಾಂತ್ ದಾಸ್, ಪದುಮ್ ಬರುವಾ, ಸಂಧ್ಯಾ ಗುರುಂಗ್ ಮತ್ತು ರಾಫೆಲ್ ಬೆರ್ಗಮಸ್ಕೋಗೆ ತಲಾ 10 ಲಕ್ಷ ರೂ. ಬಹುಮಾನವನ್ನೂ ಅಸ್ಸಾಂ ಸರ್ಕಾರದ ವತಿಯಿಂದ ವಿತರಿಸಲಾಯಿತು.

    ಇದಕ್ಕೆ ಮುನ್ನ ಸಿಎಂ ಹಿಮಂತ ಬಿಸ್ವಾ ಶರ್ಮ ಅವರೇ ಗುವಾಹಟಿ ವಿಮಾನ ನಿಲ್ದಾಣಕ್ಕೆ ಬಂದು ಲವ್ಲಿನಾರನ್ನು ಸ್ವಾಗತಿಸಿದ್ದರು. ಅಸ್ಸಾಂನ ಸಾಂಪ್ರದಾಯಿಕ ‘ಗಮೋಸ’ (ಶಾಲು), ‘ಜಪಿ’ (ಟೋಪಿ) ಮತ್ತು ಹೂಗುಚ್ಛ ನೀಡಿ ಅವರು ಬರಮಾಡಿಕೊಂಡಿದ್ದರು.

    ಒಲಿಂಪಿಕ್ಸ್ ಪದಕ ವಿಜೇತರು ಪಡೆದ ಬಹುಮಾನಕ್ಕೆ ಕಟ್ಟಬೇಕಿರುವ ತೆರಿಗೆ ಎಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts