More

    ನಾನು ಕಥೆಗಳನ್ನು ಬರೆಯುವುದಿಲ್ಲ; ಕದಿಯುತ್ತೇನೆ … ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್​ ಹೇಳಿಕೆ

    ಪಣಜಿ: ದೇಶದ ನಂಬರ್​ ಒನ್​ ಕಥೆಗಾರ ಎಂಬ ಹೆಗ್ಗಳಿಕೆ ಅವರಿಗಿದೆ. ಅದಕ್ಕೆ ಸರಿಯಾಗಿ ವಿಜಯೇಂದ್ರ ಪ್ರಸಾದ್​ ಅವರು ಬರೆದಿರುವ ಚಿತ್ರಗಳು ಸೂಪರ್​ ಹಿಟ್​ ಆಗಿವೆ ‘ಬಾಹುಬಲಿ’, ‘ಆರ್​.ಆರ್​.ಆರ್​’, ‘ಭಜರಂಗಿ ಭಾಯ್​ಜಾನ್​’, ‘ಮಗಧೀರ’ ಮುಂತಾದ ಚಿತ್ರಗಳು ಬ್ಲಾಕ್​ಬಸ್ಟರ್​ಗಳಾಗಿವೆ. ವಿಜಯೇಂದ್ರ ಪ್ರಸಾದ್​ ಹೇಗೆ ಇಷ್ಟು ಅದ್ಭುತವಾದ ಕಥೆಗಳನ್ನು ರಚಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ವಿಜಯೇಂದ್ರ ಪ್ರಸಾದ್​ ಮಾತ್ರ, ತಾನು ಕಥೆ ಬರೆಯುವುದಿಲ್ಲ, ಕದಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ತಾನೂ ಅತ್ತು, ಅಪ್ಪ-ಅಮ್ಮನಿಗೂ ಕಣ್ಣೀರು ಹಾಕಿಸಿದ ರಣವೀರ್​ ಸಿಂಗ್​

    ಪಣಜಿಯಲ್ಲಿ 53ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿರುವ ವಿಷಯ ಗೊತ್ತೇ ಇದೆ. ಈ ಸಂದರ್ಭದಲ್ಲಿ ‘ದಿ ಮಾಸ್ಟರ್ಸ್​ ರೈಟಿಂಗ್​ ಪ್ರೊಸೆಸ್​’ ಎಂಬ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯೇಂದ್ರ ಪ್ರಸಾದ್​ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ತಮ್ಮ ಬರವಣಿಗೆಯ ಶೈಲಿ ಕುರಿತು ಮಾತನಾಡಿರುವ ಅವರು, ‘ನಾನು ಮೊದಲಿಗೆ ಇಂಟರ್​ವೆಲ್​ಗೆ ಏನು ಟ್ವಿಸ್ಟ್​ ಕೊಡಬಹುದು ಎಂದು ಯೋಚಿಸುತ್ತೇನೆ. ಅದಕ್ಕೆ ಸರಿಯಾಗಿ ಕಥೆ ಬರೆಯುತ್ತಾ ಹೋಗುತ್ತೇನೆ. ನಿಜ ಹೇಳಬೇಕೆಂದರೆ, ಸೊನ್ನೆಯಿಂದ ಸೃಷ್ಟಿ ಮಾಡಬೇಕು. ಸುಳ್ಳಾದರೂ, ಅದನ್ನು ನಂಬುವಂತೆ ಬರೆಯಬೇಕು. ಯಾರಿಗೆ ಚೆನ್ನಾಗಿ ಸುಳ್ಳು ಹೇಳುವುದಕ್ಕೆ ಬರುತ್ತದೋ, ಅವನೊಬ್ಬ ಒಳ್ಳೆಯ ಕಥೆಗಾರನಾಗಿರುತ್ತಾನೆ’ ಎಂದು ವಿಜಯೇಂದ್ರ ಪ್ರಸಾದ್​ ಹೇಳಿದ್ದಾರೆ.

    ಇದನ್ನೂ ಓದಿ: ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗ್ತಾರಾ ಮಾನುಷಿ ಛಿಲ್ಲರ್?

    ಇನ್ನು, ಕಥೆಗಳ ಬಗ್ಗೆ ಮಾತನಾಡುವ ಅವರು, ‘ಒಳ್ಳೆಯ ಕಥೆಗಳು ಹೇಗೆ ಹುಟ್ಟುತ್ತವೆ ಎಂದು ಎಲ್ಲರೂ ಕೇಳುತ್ತಾರೆ. ಕಥೆಗಳು ಹುಟ್ಟುವುದಿಲ್ಲ. ಅದನ್ನು ಕದಿಯುತ್ತೇನೆ. ನಮ್ಮ ಸುತ್ತ ನೂರಾರು ಕಥೆಗಳಿವೆ. ಮಹಾಭಾರತ, ರಾಮಾಯಣದಂತಹ ಮಹಾನ್​ ಗ್ರಂಥಗಳ ಜತೆಗೆ ಅದೆಷ್ಟೋ ನೈಜ ಘಟನೆಗಳಿವೆ. ಅವನ್ನೆಲ್ಲ ನಿಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರೆಸೆಂಟ್​ ಮಾಡುವ ಕಲೆ ಗೊತ್ತಿರಬೇಕು. ಅದು ಗೊತ್ತಿದ್ದರೆ, ಏನು ಬೇಕಾದರೂ ಮಾಡಬಹುದು’ ಎನ್ನುತ್ತಾರೆ ವಿಜಯೇಂದ್ರ ಪ್ರಸಾದ್​.

    ಅನಂತ ವಿಜಯ: ವಿಜಯಾನಂದ ಬಯೋಪಿಕ್ ಬಗ್ಗೆ ಅನಂತ್ ನಾಗ್ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts