More

    ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದ ಹಿಂದೆ ಏನೇನಿದೆ ಲೆಕ್ಕಾಚಾರ?

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನನೆಗುದಿಗೆ ಬಿದ್ದಂತಾಗಿದ್ದ ರಾಜ್ಯಾಧ್ಯಕ್ಷ ಮತ್ತು ವಿರೋಧಪಕ್ಷದ ನಾಯಕರ ನೇಮಕ ವಿಚಾರದಲ್ಲಿ ಇದೀಗ ಒಂದು ವಿಚಾರ ಬಗೆಹರಿದಂತಾಗಿದೆ. ಅದರಲ್ಲೂ ಹಲವು ದಿನಗಳ ಬಳಿಕ ಅಳೆದೂತೂಗಿ ರಾಜಾಧ್ಯಕ್ಷರ ನೇಮಕ ಮಾಡಲಾಗಿದ್ದು, ಈ ನೇಮಕದ ಹಿಂದೆ ನಾನಾ ಲೆಕ್ಕಚಾರಗಳಿವೆ ಎನ್ನಲಾಗಿದೆ.

    ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವುದಕ್ಕೂ ಮೊದಲು ಹಲವು ಅಂಶಗಳನ್ನು ಪರಿಗಣಿಸಿ ಈ ನಿರ್ಧಾರ ತಳೆಯಲಾಗಿದೆ ಎನ್ನಲಾಗುತ್ತಿದೆ.

    ಅದರಲ್ಲೂ ದೇಶಾದ್ಯಂತ ಜಾತಿ ಗಣತಿ, ಜಾತಿ ಮೀಸಲಾತಿ ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ವಿಷಯವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಈ ನೇಮಕದ ಹಿಂದೆಯೂ ಜಾತಿ ಲೆಕ್ಕಾಚಾರ ಪ್ರಮುಖ ಪಾತ್ರ ವಹಿಸಿರುವುದು ಕಂಡುಬಂದಿದೆ.

    ಇದನ್ನೂ ಓದಿ: ರಾಜ್ಯಾಧ್ಯಕ್ಷ ಪಟ್ಟ ಸಿಕ್ಕ ಬೆನ್ನಿಗೇ ವಿಜಯೇಂದ್ರ ರಿಯಾಕ್ಷನ್; ಯಾರನ್ನೆಲ್ಲ ಉಲ್ಲೇಖಿಸಿ ಏನಂದ್ರು?

    ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮುದಾಯವು ಜನಸಂಖ್ಯೆ ಮಾತ್ರವಲ್ಲದೆ ಪ್ರಭಾವದ ದೃಷ್ಟಿಯಿಂದಲೂ ಪ್ರಮುಖ ಮತ್ತು ಮುಂಚೂಣಿ ಸಮುದಾಯವಾಗಿರುವುದರಿಂದ ಅದೇ ಸಮುದಾಯದ ಜನಪ್ರಿಯ ನಾಯಕ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸುವಲ್ಲಿ ವೀರಶೈವ ಲಿಂಗಾಯತ ಸಮುದಾಯ ನಿರ್ಣಾಯಕ ಪಾತ್ರ ವಹಿಸಿತ್ತು. ಅಂದರೆ ವೀರಶೈವ ಲಿಂಗಾಯತ ಸಮುದಾಯದ ಬಹಳಷ್ಟು ಮತಗಳು ‘ಕೈ’ವಶವಾದ್ದರಿಂದ ಬಿಜೆಪಿಗೆ ಹಿನ್ನಡೆ ಆಗಿತ್ತು.

    ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ ನಟ ಪ್ರಕಾಶ್ ರೈ

    ವೀರಶೈವ ಲಿಂಗಾಯತ ಸಮದಾಯ ಸಾಮಾನ್ಯವಾಗಿ ಬಿಜೆಪಿಯತ್ತ ಒಲವು ಹೊಂದಿರುವ ಸಮುದಾಯವಾಗಿದ್ದು, ಅವರ ವೋಟ್​ಗಳು ಬಿಜೆಪಿಯ ಸಾಂಪ್ರದಾಯಿಕ ಮತಗಳೆಂದೇ ಪರಿಗಣಿಸಲಾಗುತ್ತಿದೆ. ಅದಾಗ್ಯೂ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು.

    ಈ ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸಿರುವ ಬಿಜೆಪಿ ಹೈಕಮಾಂಡ್ ಈ ಸಲದ ಲೋಕಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಬಲದೊಂದಿಗೆ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಗಟ್ಟಿಗೊಳಿಸುವ ತಂತ್ರವನ್ನೂ ಈ ನೇಮಕದ ಮೂಲಕ ಸಾಧಿಸಲು ಮುಂದಾಗಿರುವುದು ಕಂಡು ಬಂದಿದೆ.

    ಒಂದು ನೇಮಕ, ಎರಡು ಕಾಯಕ

    ಲಿಂಗಾಯತ ಸಮುದಾಯದ ನೆಚ್ಚಿನ ನಾಯಕ ಆಗಿರುವ ಬಿ.ಎಸ್​. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಆಗಿಸಿದ್ದು ಕೂಡ ಲಿಂಗಾಯತರನೇಕರು ಮುನಿಸಿಕೊಳ್ಳಲು ಕಾರಣವಾಗಿತ್ತು.

    ಅಲ್ಲದೆ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ಕೊಡದೆ ಅವರು ಕಾಂಗ್ರೆಸ್ ಸೇರಿದ್ದರಿಂದಲೂ ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ಹೀಗಾಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಎರಡು ಅಸಮಾಧಾನವನ್ನು ತಣಿಸುವ ಪ್ರಯತ್ನ ಮಾಡಿದೆ.

    ಇದನ್ನೂ ಓದಿ: ನೋಟ್ ಬ್ಯಾನ್​ನಿಂದ ಆದ ಒಂದೇ ಒಂದು ಪ್ರಯೋಜನವಿದ್ದರೆ ಬಿಜೆಪಿ ಉತ್ತರಿಸಲಿ: ಕಾಂಗ್ರೆಸ್ ಸವಾಲು

    ಅಂದರೆ ಬಿ.ಎಸ್​.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಮತ್ತು ಲಿಂಗಾಯತ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಎರಡೂ ಅಸಮಾಧಾನ-ಆರೋಪಗಳಿಗೆ ಪ್ರತಿಯಾಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಹೀಗೆ ಒಂದು ನೇಮಕದ ಮೂಲಕ ಎರಡು ಕಾಯಕ ಈಡೇರಿದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ.

    ಯುವ ನಾಯಕ, ಉಪಾಧ್ಯಕ್ಷ: ಬಿ.ವೈ. ವಿಜಯೇಂದ್ರ ಈಗಾಗಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಛಾಪು ಮೂಡಿಸಿದ್ದು ಮಾತ್ರವಲ್ಲದೆ, ಅವರು ಈಗಾಗಲೇ ಯುವ ನಾಯಕರಾಗಿ ಯುವ ಜನತೆಯ ಒಲವನ್ನೂ ಹೆಚ್ಚಿನ ಪ್ರಮಾಣದಲ್ಲಿ ಗಳಿಸಿರುವುದು ಕೂಡ ಈ ನೇಮಕದ ಹಿಂದೆ ಪರಿಣಾಮ ಬೀರಿದೆ.

    ವಿಜಯದ ನಿರೀಕ್ಷೆಯಲ್ಲಿ ವಿಜಯೇಂದ್ರಗೆ ಪಟ್ಟ; ರಾಜ್ಯದಲ್ಲಿ ತಗ್ಗಿಲ್ಲ ರಾಜಾಹುಲಿ ಪ್ರಭಾವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts