More

    ಗ್ರಾಹಕಸ್ನೇಹಿ ಉದ್ಯಮಿ, ಸಮಾಜಸೇವಕ ಕಮಲನಯನ್‌ಗೆ ವಿಜಯರತ್ನ ಗರಿ..

    ಬೆಂಗಳೂರು: ಗುಣಮಟ್ಟದ ವ್ಯಾಪಾರ ಮಾಡುವ ಮೂಲಕ ಗ್ರಾಹಕಸ್ನೇಹಿ ಉದ್ಯಮಿ, ಸಮಾಜಸೇವಕರಾಗಿ ಬೆಳೆದ ಕಮಲನಯನ್ ಕಾಂತಿಲಾಲ್ ಮೆಹ್ತಾ ಅವರಿಗೆ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ- 2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ- 2022 ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಚಿತ್ರನಟ ರಮೇಶ್ ಅರವಿಂದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್, ನಟಿ ಶರ್ಮಿಳಾ ಮಾಂಡ್ರೆ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

    ಸ್ಟೀಲ್ ಉದ್ಯಮದಲ್ಲಿ ಕಮಾಲ್: ಯಾವುದೇ ಉದ್ಯೋಗ, ವ್ಯಾಪಾರವೇ ಇರಲಿ ಅಡೆತಡೆ, ಸವಾಲುಗಳು ಇದ್ದೇ ಇರುತ್ತವೆ. ಅವುಗಳನ್ನು ತಾಳ್ಮೆಯಿಂದ ಪರಿಹಾರ ಮಾಡಿಕೊಂಡಾಗಲೇ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ನಂಬಿದವರು ಹುಬ್ಬಳ್ಳಿಯ ಕಮಲ್ ಟ್ರೇಡಿಂಗ್ ಕಾರ್ಪೋರೇಷನ್ ಸಂಸ್ಥಾಪಕ ಕಮಲನಯನ್ ಮೆಹ್ತಾ.

    ಉತ್ತರ ಕರ್ನಾಟಕ ಭಾಗಕ್ಕೆ ಜೆಎಸ್‌ಡಬ್ಲ್ಯು ಸ್ಟೀಲ್ ಅಧಿಕೃತ ವಿತರಕರಾಗಿರುವ ಇವರು 1993ರಲ್ಲಿ ಸಹೋದರರು ಬೇರ್ಪಡೆಯಾದ ನಂತರ ಪುತ್ರ ಮೋಹಿತ್ ಅವರೊಂದಿಗೆ ಸೇರಿ ಕಂಪನಿ ಹುಟ್ಟು ಹಾಕಿದರು. ಗ್ರಾಹಕಸ್ನೇಹಿ ಗುಣಮಟ್ಟದ ಸೇವೆಯೊಂದಿಗೆ ಹೊಸ ಟ್ರೆಂಡ್ ಸೆಟ್‌ ಮಾಡಿದರು. ಸ್ಟೀಲ್ ಪೂರೈಕೆ ಜತೆಯಲ್ಲೇ ಸಂಬಂಧಿತ ಇನ್ನಷ್ಟು ಉದ್ಯಮಗಳನ್ನು ಬೆಳೆಸಿದರು. ತಮ್ಮ ಮೊಮ್ಮಕ್ಕಳನ್ನು ಉದ್ಯಮದಲ್ಲಿ ತೊಡಗಿಸಿದರು. ಹತ್ತಾರು ಸೇವಾ ಕಾರ್ಯಗಳ ಮೂಲಕ ಸಮಾಜಮುಖಿ ಕುಟುಂಬ ಎಂಬ ಹೆಗ್ಗಳಿಕೆಯನ್ನೂ ಗಳಿಸಿದರು.

    ಕಂಪನಿ ಆರಂಭಿಸಿದ ಹೊಸತರಲ್ಲಿ ಹಲವು ಸವಾಲುಗಳನ್ನು ಎದುರಿಸಿದ ಇವರು, ಎಲ್ಲಿಯೂ ಗುಣಮಟ್ಟವನ್ನು ಬಿಟ್ಟುಕೊಡಲಿಲ್ಲ. ಉಳಿದ ಸ್ಟೀಲ್‌ಗಿಂತ ತಾವು ನೀಡುವ ಉತ್ಪನ್ನ ಹೇಗೆ ಭಿನ್ನ ಎಂಬುದನ್ನು ಮನವರಿಕೆ ಮಾಡಿದರು. ವಿಶೇಷವಾಗಿ ಭೂಕಂಪ ನಿರೋಧಕ ಶಕ್ತಿ ಹೊಂದಿರುವ ಆಧುನಿಕ ತಂತ್ರಜ್ಞಾನ ಒಳಗೊಂಡ ಜೆಎಸ್‌ಡಬ್ಲ್ಯು ಸ್ಟೀಲ್ ಬಳಸುವುದು ಎಷ್ಟು ಸುರಕ್ಷಿತ ಎಂಬುದನ್ನು ಹೇಳಿಕೊಟ್ಟರು. ಈ ಎಲ್ಲ ಕಾರಣಗಳಿಗೆ ಇವರ ಉದ್ಯಮ ಉತ್ತಮ ರೀತಿಯಲ್ಲಿ ಬೆಳೆಯುತ್ತ ಸಾಗಿದೆ.

    ಸುಸಜ್ಜಿತ ಆಸ್ಪತ್ರೆ: ಕಳೆದ 10 ವರ್ಷದಿಂದ ವಿವೇಕಾನಂದ ಆಸ್ಪತ್ರೆಯ ಅಧ್ಯಕ್ಷರಾಗಿ ಕಮಲನಯನ್ ಮೆಹ್ತಾ ಸೇವೆ ಸಲ್ಲಿಸುತ್ತಿದ್ದಾರೆ. ಇದು 90 ವರ್ಷದ ಚಾರಿಟಬಲ್ ಟ್ರಸ್ಟ್ ಆಸ್ಪತ್ರೆ. 8 ಜನ ಟ್ರಸ್ಟಿಗಳಿದ್ದು, ದಿ. ಮಾಜಿ ಅಧ್ಯಕ್ಷ ನಟ್ವರ್‌ಲಾಲ್ ಸಂಘ್ವಿ ಅವರ ಆಶಯದಂತೆ ಅಭಿವೃದ್ಧಿಗಾಗಿ ಒಮ್ಮತದಿಂದ ಕೆಲಸ ಮಾಡುತ್ತಿದ್ದಾರೆ. ನಿತ್ಯ ಎರಡು ತಾಸು ಆಸ್ಪತ್ರೆ ಕೆಲಸಗಳಿಗೆ ಮೆಹ್ತಾ ಮೀಸಲಿಡುತ್ತಾರೆ. ಬಡವರು, ಮಧ್ಯಮ ವರ್ಗವದರು, ಶ್ರೀಮಂತರು ಎಲ್ಲರಿಗೂ ಇಲ್ಲಿ ಚಿಕಿತ್ಸೆ ಸಿಗುತ್ತದೆ. ಶೇ. 30ರಷ್ಟು ಬೆಡ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ. ಕಡುಬಡವರಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡಿದ್ದಾರೆ.

    ಕಮಲನಯನ್ ಮೆಹ್ತಾ ಅವರು ಕೇವಲ ಉದ್ಯಮಿಯಲ್ಲ, ದಯಾಳುಗಳು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಅವರು ಅತ್ಯುತ್ತಮ ಮಾರ್ಗದರ್ಶಕರು. ನಿತ್ಯವೂ ಏನಾದರೂ ಹೊಸದನ್ನು ಮಾಡುವ ಉತ್ಸಾಹಿಗಳು. ಕಠಿಣ ಪರಿಶ್ರಮ ಹಾಗೂ ಸಿದ್ಧಾಂತದ ಮೇಲೆ ಉದ್ಯಮ ಸಾಮ್ರಾಜ್ಯ ಕಟ್ಟಿದ ಇವರು ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಒನ್‌ಹುಬ್ಬಳ್ಳಿ ಎಂಬ ಅತಿ ದೊಡ್ಡ ಕಾಂಪ್ಲೆಕ್ಸ್ ಕಟ್ಟುತ್ತಿದ್ದಾರೆ. ಪರೋಪಕಾರದ ಕೆಲಸಗಳೂ ನಿರಂತರ ನಡೆಸಿದ್ದಾರೆ. ಅವರಿಗೆ ವಿಜಯರತ್ನ ಪ್ರಶಸ್ತಿ ಸಿಕ್ಕಿರುವುದು ಸ್ತುತ್ಯರ್ಹ.

    | ಕೇಶವ ದೇಸಾಯಿ ಮ್ಯಾನೇಜಿಂಗ್ ಪಾರ್ಟನರ್, ದೇಸಾಯಿ ಆ್ಯಂಡ್ ಕಂಪನಿ, ಹುಬ್ಬಳ್ಳಿ

    ಗ್ರಾಹಕಸ್ನೇಹಿ ಉದ್ಯಮಿ, ಸಮಾಜಸೇವಕ ಕಮಲನಯನ್‌ಗೆ ವಿಜಯರತ್ನ ಗರಿ..ಸೇವಾ ಕಾರ್ಯಕ್ಕೂ ಸೈ: ಕರೊನಾ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಸಾಕಷ್ಟು ಸೇವಾ ಕಾರ್ಯ ಮಾಡಿದ ಮೆಹ್ತಾ, ಕರೊನಾ ಸೋಂಕಿತರಿಗೆ ವಿವೇಕಾನಂದ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಿದ ಜಿಲ್ಲೆಯ ಮೊದಲ ಆಸ್ಪತ್ರೆಯಾಗಿಸಿದರು. ವೈಯಕ್ತಿಕವಾಗಿ ಕಮಲ್ ಟ್ರೇಡಿಂಗ್ ಕಾರ್ಪೋರೇಷನ್‌ನಿಂದ ಲಾಕ್‌ಡೌನ್‌ನಲ್ಲಿ ಹಲವು ಸೇವಾ ಕಾರ್ಯ ಮಾಡಿದರು. ಅಗತ್ಯ ಇರುವವರಿಗೆ ಫುಡ್ ಕಿಟ್ ನೀಡಿದರು. ಸಿಬ್ಬಂದಿಯ ಕುಟುಂಬಗಳಿಗೆ ವಿವಿಧ ಅನುಕೂಲ ಕಲ್ಪಿಸಿದರು. ನಗರ, ಹಳ್ಳಿಗೆ ಹೋಗಿ ಔಷಧ ಹಾಗೂ 10 ಸಾವಿರಕ್ಕೂ ಹೆಚ್ಚು ಫುಡ್ ಪ್ಯಾಕೇಟ್ ನೀಡಿದರು. ಎರಡು ಆಂಬುಲೆನ್ಸ್‌ಗಳನ್ನು ಜಿಲ್ಲಾಡಳಿತಕ್ಕೆ ಉಚಿತವಾಗಿ ನೀಡಿದರು. ಮೆಹ್ತಾ ಅವರು ನಿರ್ಮಾಣ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. 1989ರಲ್ಲಿ ಪ್ರಥಮ ವಾಣಿಜ್ಯ ಮಳಿಗೆ ನಿರ್ಮಿಸಿದರು. ಹುಬ್ಬಳ್ಳಿಯ ಶ್ರೀನಾಥ ಕಾಂಪ್ಲೆಕ್ಸ್ ಇವರ ಮೊದಲ ಕೊಡುಗೆ. ಇಂತಹ ಹಲವು ಯೋಜನೆಗಳು ನಗರದಲ್ಲಿ ನಡೆಯುತ್ತಿವೆ. ಇವರ ಎಲ್ಲ ಸೇವಾ ಕಾರ್ಯಗಳಿಗೆ ಪತ್ನಿ ಲತಾ ಅವರು ಬೆನ್ನೆಲುಬಾಗಿ ನಿಂತಿದ್ದಾರೆ.

    ಸನ್ಮಾನ ಪ್ರಶಸ್ತಿಗಳು: ಸ್ಟೀಲ್ ಉದ್ಯಮದಲ್ಲಿ ಕೈಗೊಂಡ ವಿವಿಧ ಸಂಶೋಧನೆ, ಹೆಚ್ಚು ಮಾರಾಟ ಇತ್ಯಾದಿ ಕಾರಣಗಳಿಗಾಗಿ ಕಮಲನಯನ್ ಮೆಹ್ತಾ ಅವರನ್ನು ಅನೇಕ ಸಂಸ್ಥೆಯವರು ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಿದ್ದಾರೆ. ಗುರಿಮೀರಿ ಸಾಧನೆ ಮಾಡಿದ್ದಕ್ಕೆ ಮೆಚ್ಚುಗೆ ಪತ್ರಗಳು ಲಭಿಸಿವೆ. ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯವರು ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

    ಸಂಘ-ಸಂಸ್ಥೆಯಲ್ಲಿ ಸೇವೆ: ಧಾರವಾಡದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಇಸ್ಕಾನ್ ಸಲಹಾ ಸಮಿತಿ ಸದಸ್ಯರು, ಕರ್ನಾಟಕ ಗುಜರಾತ್ ಸೇವಾ ಸಮಿತಿ ಟ್ರಸ್ಟಿ, ವಿ.ಎಸ್. ಪಿಳ್ಳೆ, ನಿರ್ಮಲಾ ಠಕ್ಕರ್ ಶಾಲೆಗಳನ್ನು ಮುನ್ನಡೆಸುವುದು ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಮೂರು ವರ್ಷ ಗುಜರಾತ್ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

    ಜನಸೇವಕ ಚಂದು ಪಾಟೀಲ್‌ಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ

    ಯೋಗಗುರು ಭವರಲಾಲ್ ಆರ್ಯಗೆ ವಿಜಯರತ್ನ ಗರಿ; ವಿಜಯವಾಣಿ- ದಿಗ್ವಿಜಯ ವಾಹಿನಿಯ ಗೌರವ..

    ವಾಣಿಜ್ಯೋದ್ಯಮಿ, ಪರೋಪಕಾರಿ ಜಿತೇಂದ್ರ ಮಜೇಥಿಯಾಗೆ ‘ವಿಜಯರತ್ನ’ ಗರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts