More

    ಭಾರತದ ಸಂವಿಧಾನ ವಿಶ್ವ ಶ್ರೇಷ್ಠ

    ವಿಜಯಪುರ: ವಿಶ್ವದ ಅನೇಕ ರಾಷ್ಟ್ರಗಳ ಸಾರಸತ್ವವನ್ನು ಒಳಗೊಂಡಿರುವ ಭಾರತದ ಸಂವಿಧಾನ ಬಹುದೊಡ್ಡ ಕೃತಿಯಾಗಿದ್ದು, ವಿಶ್ವದಲ್ಲೇ ಅತ್ಯಂತ ಸರ್ವಶ್ರೇಷ್ಠವಾಗಿದೆ ಎಂದು ನ್ಯಾಯವಾದಿ ದಾನೇಶ ಅವಟಿ ನುಡಿದರು.
    ನಗರದ ಶಿಕಾರಖಾನೆಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಸಭಾಗೃಹದಲ್ಲಿ ಮಂಗಳವಾರ ಸಂಜೆ ಅನೌಪಚಾರಿಕ ನಗರ ಸ್ಲಮ್ ಅಭಿವೃದ್ಧಿ ಸಮಿತಿ ಒಕ್ಕೂಟ (ರಿ) ಹಾಗೂ ನಗರ ಸ್ಲಮ್ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ (ರಿ) ದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದೀಪಾವಳಿ ಹಾಗೂ ಸಂವಿಧಾನ ದಿನ ಆಚರಣೆಯಲ್ಲಿ ಅವರು ಮಾತನಾಡಿದರು.
    ಭಾರತದ ಪ್ರಜೆಗಳಿಗೆ ಸಂವಿಧಾನವು ಹಕ್ಕುಗಳ ರಕ್ಷಾ ಕವಚವಾಗಿದ್ದು ಅದರ ತಿರುಳು ಅರ್ಥೈಸಿಕೊಂಡು ನಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಬೇಕೆಂದರು.

    ಸಂಗಮೇಶ ಶರಣರು ಮಾತನಾಡಿ, ಹಬ್ಬ ಹರಿದಿನಗಳ ಹಿರಿದಾದ ಸಂಸ್ಕೃತಿಯನ್ನು ಹೊಂದಿದ ಭಾರತ ಜಗತ್ತಿಗೆ ಜ್ಞಾನ- ವಿಜ್ಞಾನದ ಬೆಳಕನ್ನು ನೀಡಿದೆ. ಜಾತಿ, ಮತ, ಪಂಥಗಳ ಹೆಸರಿನಲ್ಲಿ ಕಚ್ಚಾಟ ನಿಲ್ಲಿಸಿ ಶಾಂತಿ, ಸಮೃದ್ಧಿಯಿಂದ ಜೀವನ ಸಾಗಿಸಲು ಅಜ್ಞಾನ ಕಳೆದು ಜ್ಞಾನವನ್ನು ಹೊಂದಲು ಬೆಳಕಿನ ಹಬ್ಬ ದೀಪಾವಳಿ ಕರೆ ನೀಡುತ್ತದೆ. ಕರೊನಾ, ಎಚ್‌ಐವಿ ಅಂತಹ ಮಹಾಮಾರಿ ತೊಲಗಿ ಜಾತಿ ಧರ್ಮ ಭಾಷೆ ಪ್ರಾಂತ್ಯದ ಕಲಹಗಳು ನೀಗಿ ವಿಶ್ವದಲ್ಲಿ ಜನ ಸುಖ ಶಾಂತಿ ನೆಮ್ಮದಿಯಿಂದ ಬದುಕಲಿ ಎಂದು ಆಶಿಸಿದರು.
    ಾದರ್ ಟಿವೊಲ್ ಹಾಗೂ ಾದರ್ ಅಂಥೋಣಿದಾಸ್ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಸ್ಲಮ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಮಾತನಾಡಿದರು. ಮೌಲಾನಾ ಇಸ್ಮಾಯಿಲ್ ಅಬರಾರಿ, ಸಿದ್ದು ಹೊನಕಟ್ಟಿ, ದಾನಪ್ಪ ಸೂರಗೊಂಡ, ಅರುಣಾ ಬೂದಿಹಾಳ, ಮೀನಾಕ್ಷಿ ಕಾಲೆಬಾಗ, ಪುಷ್ಪಾ ನೆಗಿನಾಳ, ಪಂಡೀತ ಖಂಡಗಾಳೆ, ಚಂದ್ರಾಶೇಖರ ಆಲಮೇಲ, ದಸ್ತಗೀರ ಉಕ್ಕಲಿ ಮತ್ತಿತರರಿದ್ದರು.
    ಚಂದ್ರು ಆಲಮೇಲ ಸಂವಿಧಾನದ ಪ್ರಸ್ತಾವನೆ, ಪ್ರಮಾಣ ವಚನ ನೀಡಿದರು. ಲಕ್ಷ್ಮಿ ದೊಡ್ಡಮನಿ ನಿರೂಪಿಸಿದರು. ಅರುಣಾ ಬೂದಿಹಾಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts